/newsfirstlive-kannada/media/post_attachments/wp-content/uploads/2024/12/BNG_AOUR.jpg)
ಸದ್ಯ ವಿಶ್ವದಲ್ಲಿ ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಮೊಬೈಲ್, ಕಂಪ್ಯೂಟರ್ ಬಂದ ಮೇಲಂತೂ ತಂತ್ರಜ್ಞಾನ ಓಡುವ ಕುದುರೆಯಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಆವಿಷ್ಕಾರ ನಡೆಯುತ್ತಿವೆ. ಅವು ಯಶಸ್ವಿಯಾಗುವುದರ ಜೊತೆಗೆ ಮಾರುಕಟ್ಟೆಯಲ್ಲೂ ಒಳ್ಳೆಯ ಹಣ ಸಂಗ್ರಹ ಮಾಡುತ್ತಿವೆ. ಇದೀಗ ಅಧಿಕ ದೃಷ್ಟಿದೋಷ ಇರುವವರಿಗೆ ದೃಷ್ಟಿ ಸಹಾಯಕ ಸಾಧಕನವಾಗಿ ಔರಾ ವಿಷನ್ ಅನ್ನು ನಾರಾಯಣ ನೇತ್ರಾಲಯ ಎಸ್ಹೆಚ್ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಔರಾ ವಿಷನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ನಾರಾಯಣ ನೇತ್ರಾಲಯ ಹೈ ರೆಸಲ್ಯೂಶನ್ ಕ್ಯಾಮೆರಾ ಒಳಗೊಂಡ ಅಡ್ವಾನ್ಸಡ್ ಕನ್ನಡಕವನ್ನ ಪರಿಚಯಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿ ತಯಾರಿಸಿರುವ ಈ ಕನ್ನಡಕ ದೃಷ್ಟಿಹೀನತೆ ಹೊಂದಿರುವವರಿಗೆ ಸಹಾಯಕವಾಗಲಿದೆ.
ಇದನ್ನೂ ಓದಿ:ಹತ್ತೇ 10 ದಿನದಲ್ಲಿ ಯುವಕನ ಮದುವೆ.. KMF ಅಧ್ಯಕ್ಷರ ಪುತ್ರನ ಬರ್ತ್ಡೇಗೆ ಹೋಗಿ ಬರುವಾಗ ಏನಾಯಿತು?
ದೃಷ್ಟಿ ದೋಷ ಮಂದವಾದಾಗ ಚಲನಶೀಲತೆ ತೊಂದರೆ, ಓದುವ ಸಮಸ್ಯೆ, ಸಂವಹನ, ಸಂಪರ್ಕ ಸಮಸ್ಯಗಳು ಉಂಟಾಗುತ್ತವೆ. ಇಂತಹ ಸಮಸ್ಯೆಗಳು ಉಂಟಾದಲ್ಲಿ ಸುಧಾರಿತ ಅಗ್ಮೆಂಟೆಡ್ ರಿಯಾಲಿಟಿ (ಎಆರ್) ತಂತ್ರಜ್ಞಾನವನ್ನು ಬಳಸಿ ಔರಾ ವಿಷನ್ ಸಾಧನ ತಯಾರಿಸಲಾಗಿದೆ.
ಜೂಮ್ ಮಾಡುವ ಮೂಲಕ ವೀಕ್ಷಣೆ ಮಾಡಿ ಸುಲಭವಾಗಿ ಅಕ್ಷರಗಳನ್ನು ಓದಬಹುದು. ಏಕಕಾಲದಲ್ಲಿ ಸಮೀಪ ಮತ್ತು ದೂರದ ದೃಷ್ಟಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಝೂಮ್, ವೈಡ್‌ಮೋಡ್‌ಗಳು ಇದರಲ್ಲಿವೆ. ಸುಮಾರು 1 ಲಕ್ಷ ರೂಪಾಯಿಯಿಂದ ಈ ಕನ್ನಡಕದ ಬೆಲೆ ಆರಂಭವಾಗಲಿದೆ. ವಿದೇಶದಲ್ಲಿ ಅತಿ ಹೆಚ್ಚು ಬಳಕೆಯ ಕನ್ನಡಕವನ್ನ ಇದೀಗ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿರುವುದು ವಿಶೇಷವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ