newsfirstkannada.com

ಹಬ್ಬ ಮುಗಿಸಿ ಬರ್ತಿದ್ದಾಗ ಭಯಾನಕ ಆಕ್ಸಿಡೆಂಟ್​.. ತಂದೆ, 4 ವರ್ಷದ ಮಗಳು ಸ್ಥಳದಲ್ಲೇ ಸಾವು, ತಾಯಿ ಗಂಭೀರ

Share :

Published January 16, 2024 at 11:36am

    ಫ್ಲೈ ಓವರ್​ ಮೇಲೆ ಹೋಯಿತು ಎರಡು ಜೀವಗಳ ಪ್ರಾಣ

    ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು

    ಒಂದು ಬೈಕ್​ನಲ್ಲಿ ಮೂವರ ಪೈಕಿ ಸ್ಥಳದಲ್ಲೇ ಇಬ್ಬರು ಸಾವು

ಬೆಂಗಳೂರು: ಬೆಳ್ಳಂಬೆಳಗ್ಗೆ ಬೈಕ್​ಗಳ ಮಧ್ಯೆ ಭೀಕರ ಡಿಕ್ಕಿ ಸಂಭವಿಸಿ ತಂದೆ ಹಾಗೂ 4 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಈ ಘಟನೆ ನಗರದ ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ಪ್ಲೈಓವರ್ ಮೇಲೆ ನಡೆದಿದೆ.

ಮಕರ ಸಂಕ್ರಾಂತಿ ಹಬ್ಬ ಮುಗಿಸಿಕೊಂಡು ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ಪ್ಲೈಓವರ್ ಮೇಲೆ ಬೈಕ್​ಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಒಂದು ಬೈಲ್​ ಮೇಲಿದ್ದ ಮೂವರ ಪೈಕಿ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಬ್ಬ ಮುಗಿಸಿ ಬರ್ತಿದ್ದಾಗ ಭಯಾನಕ ಆಕ್ಸಿಡೆಂಟ್​.. ತಂದೆ, 4 ವರ್ಷದ ಮಗಳು ಸ್ಥಳದಲ್ಲೇ ಸಾವು, ತಾಯಿ ಗಂಭೀರ

https://newsfirstlive.com/wp-content/uploads/2024/01/BNG_NELAMANGALA_ACCIDENT.jpg

Load More