/newsfirstlive-kannada/media/post_attachments/wp-content/uploads/2025/03/BNG_ROWDY_SHEETER.jpg)
ಸಿಲಿಕಾನ್ ಸಿಟಿಯ ಬಾರ್ ಒಂದರಲ್ಲಿ ರೌಡಿಶೀಟರ್ನ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ಜೀವ ತೆಗೆದುಬಿಟ್ಟಿದೆ. ಅಟ್ಯಾಕ್ ಮಾಡಿದ್ದ ಡೆಡ್ಲಿ ಗ್ಯಾಂಗ್ ಹೇಗೆಂದರೆ ಹಾಗೇ ಮಾರಕಾಸ್ತ್ರಗಳಿಂದ ಹೊಡೆದಿದ್ದರು. ರೌಡಿಶೀಟರ್ ಡೆಡ್ಲಿ ಮರ್ಡರ್ ನಡೆದಿದ್ದು ಎಲ್ಲಿ, ಆ ರೌಡಿ ಯಾರು, ಅನ್ನೋದರ ಡಿಟೇಲ್ಸ್ ಇಲ್ಲಿದೆ.
ಒಂದೆಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ. ಮತ್ತೊಂದೆಡೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಇದೆಲ್ಲಾ ಕಂಡು ಬಂದಿರುವುದು ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ತಿರುಮಲಾಪುರದ ಬಾರ್ವೊಂದರಲ್ಲಿ.
ಬಾರ್ನಲ್ಲಿ ಇದ್ದವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ರಾತ್ರಿ 8:30 ರ ವೇಳೆ.. ಕೆಲಸ ಮುಗಿಸಿ ರಿಲ್ಯಾಕ್ಸ್ ಮೂಡನಲ್ಲಿದ್ದ ಆ ಏರಿಯಾದ ಮದ್ಯಪ್ರಿಯರು ಬಾರ್ನಲ್ಲಿ ಕುಳಿತು ಕಿಕ್ಕೇರಿಸಿಕೊಳ್ಳುತ್ತಿದ್ದರು. ಫೋಟೊದಲ್ಲಿರುವ 42 ವರ್ಷದ ಜಯರಾಮ್ ಕೂಡ ಬಾರ್ನಲ್ಲಿ ಮದ್ಯಸೇವನೆ ಮಾಡುತ್ತಿನು. ಇದೇ ವೇಳೆ ಕೈಯಲ್ಲಿ ಮಾರಕಾಸ್ತ್ರಗಳೊಂದಿಗೆ ಒಳನುಗ್ಗಿದ್ದ ಡೆಡ್ಲಿ ಗ್ಯಾಂಗ್ ಅಟ್ಟಹಾಸ ಮೆರೆದಿತ್ತು. ನೋಡ ನೋಡ್ತಿದ್ದಂತೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಚ್ಚಿ ಹಾಕಿದೆ. ರಕ್ತದ ಮಡುವಿನಲ್ಲಿ ಒದ್ದಾಡಿದ್ದ ಯಲಹಂಕ ನ್ಯೂ ಟೌನ್ ರೌಡಿಶೀಟರ್ ಕಮಕ್, ಕಿಮಕ್ ಅನ್ನದೇ ಸ್ಥಳದಲ್ಲೇ ಉಸಿರು ಬಿಟ್ಟಿದ್ದಾನೆ.
- ಕೊಲೆಯಾದ ಜಯರಾಮ್ ಯಲಹಂಕ ನ್ಯೂಟೌನ್ನ ರೌಡಿಶೀಟರ್
- ಯಲಹಂಕದಿಂದ ಬಂದು ತಿರುಮಲಾಪುರದಲ್ಲಿ ವಾಸ ಮಾಡುತ್ತಿದ್ದ
- ಚಿಕನ್ ಶಾಪ್ ಓಪನ್ ಮಾಡಿ ವ್ಯಾಪಾರ ಮಾಡ್ತಿದ್ದ ಜಯರಾಮ್
- ಹಳೆ ದ್ವೇಷದ ಹಿನ್ನಲೆ ಜಯರಾಮ್ನನ್ನು ಕೊಲೆ ಮಾಡಿರುವ ಶಂಕೆ
ಇನ್ನು ಸುದ್ದಿ ತಿಳಿದು, ಸ್ಥಳಕ್ಕೆ ಬಂದ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಪರಿಶೀಲನೆ ನಡೆಸಿದ್ದಾರೆ. ಇನ್ನು ಸೋಲದೇವನಹಳ್ಳಿ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಪ್ರೇಯಸಿಯ ಕತ್ತು ಸೀಳಿದ ಪ್ರಿಯಕರ.. ಐಶ್ವರ್ಯ ಇಲ್ಲದೇ ನಾನಿಲ್ಲ ಅಂತ ಜೀವ ಬಿಟ್ಟ ಭಗ್ನಪ್ರೇಮಿ
ತಿರುಮಲಾಪುರ ಗ್ರಾಮದ ಸಾಯಿ ಬಾರ್ನಲ್ಲಿ 8:30ಕ್ಕೆ ಒಬ್ಬ ಮರ್ಡರ್ ಆಗಿದ್ದ ಅಂತ ಮಾಹಿತಿ ಬಂತು. ತಕ್ಷಣ ಇನ್ಸ್ಪೆಕ್ಟರ್, ಎಸಿಪಿ ಸ್ಥಳಕ್ಕೆ ಹೋಗುತ್ತಾರೆ. ಪ್ರಾಥಮಿಕ ತನಿಖೆಯಲ್ಲಿ ಜೀವ ಕಳೆದುಕೊಂಡವನು ಜಯರಾಮ ಅಂತ 42 ವರ್ಷದವನು. ಚಿಕ್ಕಬೊಮ್ಮಸಂದ್ರದಿಂದ ನ್ಯೂಯಲಹಂಕ ಪೊಲೀಸ್ ಠಾಣೆ ಲಿಮಿಟ್ಸ್ನಿಂದ ಬಂದಿರೋರು. ಬಾರ್ನಲ್ಲಿ ಇರುವಾಗ 4 ಜನ ಬಂದು ಕತ್ತು, ಮಚ್ಚುನಿಂದ ಹೊಡೆದಿದ್ದಾರೆ. ಇದರ ಮೇಲೆ ಎಫ್ಐಆರ್, ತನಿಖೆ ನಡೆಯುತ್ತದೆ.
ಸೈದುಲು ಅಡಾವತ್ , ಡಿಸಿಪಿ, ಬೆಂಗಳೂರು ಉತ್ತರ ವಿಭಾಗ
ರೌಡಿಶೀಟರ್ ಜಯರಾಮ್ ಕೊಲೆಗೆ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ಆರೋಪಿಗಳ ಬಂಧನ ಬಳಿಕ ಸ್ಪಷ್ಟ ಮಾಹಿತಿ ಹೊರಬೀಳಲಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ