newsfirstkannada.com

ನ್ಯೂಸ್​ಫಸ್ಟ್​​ ಸೈಬರ್​ ಕಾನ್​ಕ್ಲೇವ್​​.. ಬ್ಯಾಂಕ್​​ & ಸ್ಟಾರ್ಟಪ್​ ಕಂಪನಿಗಳಿಗೆ ಇರೋ ಥ್ರೆಟ್​ ಏನು?

Share :

Published February 28, 2024 at 10:55pm

    ನಗರದ JN​ ಟಾಟಾ ಆಡಿಟೋರಿಯಂನಲ್ಲಿ ಎರಡು ದಿನದ ಕಾನ್​ಕ್ಲೇವ್​

    2 ದಿನದ ಅಂತರಾಷ್ಟ್ರಿಯ ಸಮಾವೇಶದಲ್ಲಿ ದೇಶ, ವಿದೇಶದ ಗಣ್ಯರು ಭಾಗಿ

    ಜನರ ಮಾಹಿತಿ ಸೋರಿಕೆ ತಡೆಯಲು ಜಾರಿಗೆ ತಂದಂತ ಆ್ಯಕ್ಟ್ ಯಾವುದು?

ನ್ಯೂಸ್​ಫಸ್ಟ್​ ಆಯೋಜಿಸಿರುವ ಸೈಬರ್​ ಕಾನ್‌ಕ್ಲೇವ್‌, ಬೆಂಗಳೂರಿನ​ ಇಂಡಿಯನ್​ ಇನ್ಸ್​ಟಿಟ್ಯೂಟ್​ ಆಫ್​ ಸೈನ್ಸ್​​ನ ಜೆ.ಎನ್​.ಟಾಟಾ ಆಡಿಟೊರಿಯಂನಲ್ಲಿ ಇಂದಿನಿಂದ ಆರಂಭವಾಯಿತು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿರುವ 2 ದಿನಗಳ ಈ ಅಂತರಾಷ್ಟ್ರಿಯ ಸಮಾವೇಶದಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಂಡಿದ್ದಾರೆ. ಸೈಬರ್​ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಚರ್ಚೆಗಳಿಗೆ ಇವತ್ತಿನ ಕಾನ್​ಕ್ಲೇವ್​ ಸಾಕ್ಷಿಯಾಯ್ತು.

ಸೈಬರ್​ ಕ್ರೈಂ.. ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವಷ್ಟು ದೊಡ್ಡದಾಗಿ ಈ ಪಿಡುಗು ವ್ಯಾಪಿಸ್ತಿದೆ. ನ್ಯೂಸ್​​ಫಸ್ಟ್​ ಕೂಡ ಕಳೆದ ಎರೆಡು ವರ್ಷಗಳಲ್ಲಿ ಎಚ್ಚರ..! ಎಚ್ಚರ..! ಕಾರ್ಯಕ್ರಮದಡಿಯಲ್ಲಿ ನೂರಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಮಾಡಿದೆ. ಇದಕ್ಕಾಗಿ ಎಕ್ಸ್​ಚೇಂಚ್​ ಫಾರ್​ ಮೀಡಿಯಾ ನೀಡುವ ಗೋಲ್ಡನ್​ ಅವಾರ್ಡ್​ ಕೂಡ ಪಡೆದುಕೊಂಡಿದೆ. ಇದೇ ನಿಟ್ಟಿನಲ್ಲಿ 2 ದಿನಗಳು ಅಂತರಾಷ್ಟ್ರೀಯ ಸೈಬರ್​ ಕ್ರೈಮ್ಸ್​ ಕಾನ್​​ಕ್ಲೇವ್ ಆಯೋಜನೆ ಮಾಡಿದೆ.

ಇಂದು ಬೆಂಗಳೂರಿನ ಇಂಡಿಯನ್​ ಇನ್ಸ್​ಟಿಟ್ಯೂಟ್​ ಆಫ್​ ಸೈನ್ಸ್​ ಆವರಣದಲ್ಲಿರುವ ಜೆ.ಎನ್​.ಟಾಟಾ ಆಡಿಟೋರಿಯಂನಲ್ಲಿ ಮೊದಲ ದಿನದ ಕಾನ್​ಕ್ಲೇವ್​ ನಡೆಯಿತು. ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾದ ನರೇಂದ್ರನಾಥ್​​ ಗಂಗಾವರಪು ಉದ್ಘಾಟಸಿದರು.

ಇವತ್ತು ನಡೆದ ಕಾನ್​ಕ್ಲೇವ್​ ಕಾರ್ಯಕ್ರದಲ್ಲಿ ಹಲವು ಕ್ಷೇತ್ರದ ಗಣ್ಯರು ಭಾಗಿಯಾಗಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ಮಾಡಲಾಯ್ತು. ಬ್ಯಾಕಿಂಗ್​, ಫಿನಾಸ್ಸ್, ಸೇವಿಂಗ್ ಹಾಗೂ ​ಇನ್ವೇಷ್ಟ್​ಮೆಂಟ್, ಈ ಕ್ಷೇತ್ರಗಳಲ್ಲಿ ಸೈಬರ್​ ಸೆಕ್ಯೂರಿಟಿ ಹೇಗೆ ಕಾರ್ಯ ನಿರ್ವಹಿಸಬೇಕು. ಹೇಗೆಲ್ಲ ಸೈಬರ್​ ಅಪರಾಧ ಪ್ರಕರಣಗಳನ್ನ ತಡೆಗಟ್ಟ ಬೇಕು ಅನ್ನೋ ಕುರಿತು ಚರ್ಚೆ ಮಾಡಲಾಯ್ತು. ಜೊತೆಗೆ ಫಿನ್​ಟೆಕ್​ ಡೊಮೈನ್​ ಅಂದ್ರೆ ಫಿನಾನ್​ಶಿಯಲ್​ ಡೊಮೈನ್​ ಸ್ಟಾರ್ಟ್​ಅಪ್​ಗಳು ಹಾಗೂ ಬ್ಯಾಂಕ್​ಗಳಿಗೆ ಯಾವ ರೀತಿ ಸೈಬರ್​ ಥ್ರೆಟ್​ಗಳಿವೆ ಹಾಗೂ ಸೈಬರ್​ ಕ್ರೈಂಗಳನ್ನ ತಡೆಗಟ್ಟುವಲ್ಲಿ ಯಾವೆಲ್ಲ ಕ್ರಮಗಳನ್ನ ಕೈಗೊಳ್ಳಲಾಗಿದೆ ಅನ್ನೋ ಚರ್ಚೆ ಮಾಡಲಾಯಿತು.

ಇನ್ನು, ಡಿಪಿಡಿಪಿ ಆ್ಯಕ್ಟ್​ ಅಂದ್ರೆ, ಡಿಜಿಟಲ್​ ಫರ್ಸನಲ್​ ಡೇಟಾ ಪ್ರೋಟೆಕ್ಷನ್ ಆ್ಯಕ್ಟ್​. ಜನರ ಮಾಹಿತಿ ಸೋರಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಆ್ಯಕ್ಟ್ ಇದಾಗಿದೆ. ಈ ಆ್ಯಕ್ಟ್​ ಅಡಿಯಲ್ಲಿ ಯಾವ ರೀತಿಯಲ್ಲಿ ಜನರಿಗೆ ಅನುಕೂಲವಾಗ್ತಿದೆ ಅನ್ನೋ ಕುರಿತು ಚರ್ಚೆಯಾಯಿತು.

ಸೈಬರ್ ಕ್ರೈಂ, ಸೈಬರ್ ಸೆಕ್ಯೂರಿಟಿ ತುಂಬಾ ಪರಿಣಾಮ ಬೀರುವ ಟಾಪಿಕ್ ಆಗಿದೆ. ಇದನ್ನು ಯಾರು ಅಷ್ಟು ಸುಲಭವಾಗಿ ಪರಿಹರಿಸಲು ಆಗುವುದಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರಬೇಕು.

ನರೇಂದ್ರನಾಥ್​​ ಗಂಗಾವರಪು,ರಾಷ್ಟ್ರೀಯ ಭದ್ರತಾ ಮಂಡಳಿಯ ಜಂಟಿ ಕಾರ್ಯದರ್ಶಿ

ರಿಸರ್ವ್ ಬ್ಯಾಂಕ್, ಎಂಪಿಸಿ ಇರಬಹುದು ಇವುಗಳು ಸೈಬರ್ ಸೆಕ್ಯೂರಿಟಿ ಸಿಸ್ಟಮ್​ ಅನ್ನು ತುಂಬಾ ಸ್ಟ್ರಾಂಗ್ ಆಗಿ ಮಾಡಿವೆ. ಆಧಾರ್, ಪಾನ್ ಕಾರ್ಡ್​ ಸೇರಿ ಜನರ ಡಾಟಾ ಬ್ಯಾಂಕ್​ಗಳಲ್ಲಿ ರಕ್ಷಣೆ ಇರುತ್ತದೆ. ನಾವು ಬೇರೆಯವರಿಗೆ ಡಾಟಾವನ್ನು ಶೇರ್ ಮಾಡಿದಾಗ ತಪ್ಪಾಗುತ್ತದೆ. ಇದನ್ನು ಸ್ವಲ್ಪ ನೋಡಿಕೊಂಡು ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಕಾಗುತ್ತದೆ.

ಸಂತೋಷ್​ ಕುಮಾರ್​, ಹೆಡ್​ ಆಫ್ ಇನ್ನೋವೇಶನ್, ಗ್ಲೋಬಲ್​ ಬ್ಯಾಂಕ್

ಈ ಸಮಾವೇಶದ ಭಾಗವಾಗಿ ನ್ಯೂಸ್​ಫಸ್ಟ್​ ನಡೆಸಿದ್ದ ಹ್ಯಾಕಥಾನ್​ನಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿದ್ರು. ದೆಹಲಿ, ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಇಂಜಿನಿಯರಿಂಗ್​ ಕಾಲೇಜುಗಳ ವಿದ್ಯಾರ್ಥಿಗಳು ಪರಿಹಾರ ಸೂತ್ರವನ್ನು ತಿಳಿಸಿದ್ರು.

ಈ ಎರಡು ದಿನಗಳ ಸಮಾವೇಶಕ್ಕೆ ಇಂಡಿಯನ್​ ಇನ್ಸ್​ಟಿಟ್ಯೂಟ್​ನ ಭಾಗವಾದ ಸೈಸೆಕ್​ ಅಂದ್ರೆ, ಸೈಬರ್​ ಸೆಕ್ಯೂರಿಟಿ ಕೌನ್ಸಿಲ್​ ಸಹಕಾರ ನೀಡಿದ್ದು, ಐಟಿ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳಿಗೆ ರಿಯಲ್ ಟೈಮ್ ಉದ್ಯಮಕ್ಕೆ ಅನುಕೂಲವಾಗುವಂತೆ ಜಿನಿಮೈಂಡ್ಸ್​ ಸಂಸ್ಥೆ ಡೇಟಾ ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಒದಗಿಸುತ್ತದೆ.

ಅಲ್ಲದೇ ಇದೇ ಸಮಾವೇಶದ ಭಾಗವಾಗಿ ಸ್ಟಾರ್ಟಪ್​ ಪೆವಿಲಿಯನ್​ ಕೂಡ ನಡೆದಿದ್ದು, ಹಲವಾರು ಸ್ಟಾರ್ಟಪ್​​ಗಳು ತಮ್ಮ ಪ್ರಾಡಕ್ಟ್​​ಗಳ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಸರ್ಕಾರದ ಪ್ರತಿನಿಧಿಗಳು ಕೂಡ ಇಂತಹ ಸ್ಟಾರ್ಟಪ್​​ಗಳಿಗೆ ನೀಡುವ ಸಹಾಯವನ್ನು ತಿಳಿಸಿಕೊಟ್ಟಿದ್ದು ವಿಶೇಷವಾಗಿತ್ತು.

ನಾಳೆ ಕೂಡ ಈ ಅಂತರಾಷ್ಟ್ರೀಯ ಕಾನ್​ಕ್ಲೇವ್​ ಮುಂದುವರೆಯಲಿದ್ದು, ಡೀಪ್​ ಫೇಕ್​ ಹಾಗೂ ಸೈಬರ್ ಅಪರಾಧ ಪ್ರಕರಣಗಳ ಕುರಿತು ಚರ್ಚೆಯಾಗಲಿದೆ. ಅಗೋಚರ ಶತ್ರುವಿನ ವಿರುದ್ಧ ತಮ್ಮದೇ ಶೈಲಿಯಲ್ಲಿ ಹೋರಾಟಕ್ಕೆ ಈ ಕಾರ್ಯಕ್ರಮ ಸ್ಪೂರ್ತಿಯಾಗಿದೆ. ಈ ಕಾನ್​ಕ್ಲೇವ್​ನಿಂದ ಸೈಬರ್ ಅಪರಾಧ ಲೋಕದ ಹಾಗೂಹೋಗುಗಳ ಬಗ್ಗೆ ಜೊತೆಗೆ ಅಪರಾಧ ಪ್ರಕರಣಗಳ ಕುರಿತು ಅರಿವು ಮೂಡಿಸೋದ್ರಲ್ಲಿ ಯಾವುದೇ ಸಂಶಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್​ಫಸ್ಟ್​​ ಸೈಬರ್​ ಕಾನ್​ಕ್ಲೇವ್​​.. ಬ್ಯಾಂಕ್​​ & ಸ್ಟಾರ್ಟಪ್​ ಕಂಪನಿಗಳಿಗೆ ಇರೋ ಥ್ರೆಟ್​ ಏನು?

https://newsfirstlive.com/wp-content/uploads/2024/02/NF_CEO_RAVIKUMAR.jpg

Load More