newsfirstkannada.com

Exclusive: ಉಗ್ರ ನಝೀರ್​ಗೆ ಜೈಲಿನಲ್ಲಿ ಧರ್ಮದೇಟು ಕೊಟ್ಟ ಇತರೆ ಕೈದಿಗಳು.. ಆಸ್ಪತ್ರೆಗೆ ಭಯೋತ್ಪಾದಕ ಶಿಫ್ಟ್..! ​

Share :

Published July 21, 2023 at 2:51pm

  ಬೆಂಗಳೂರು ಬ್ಲಾಸ್ಟ್​​ ಪ್ರಕರಣದಲ್ಲಿ ಜೈಲು ಸೇರಿದ್ದ ಉಗ್ರ ನಝೀರ್ ​

  ಜೈಲಿನಲ್ಲಿ ಇದ್ದುಕೊಂಡು ಕೆಲ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕುತ್ತಿದ್ದ

  ನಿನ್ನಿಂದ ಜೈಲು ವಾತಾವರಣ ಹಾಳಾಗಿದೆಂದು ನಝೀರ್​ಗೆ ಗೂಸಾ

ಬೆಂಗಳೂರು: ವಿಧ್ವಂಸಕ ಕೃತ್ಯದ ಪ್ರಕರಣಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ಜೈಲಿನಲ್ಲಿರುವ ಉಗ್ರ ಟಿ.ನಝೀರ್​ಗೆ ಇವತ್ತು ಕೈದಿಗಳಿಂದ ಧರ್ಮದೇಟು ಬಿದ್ದಿವೆ ಎಂದು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಉನ್ನತ ಮೂಲಗಳು ತಿಳಿಸಿವೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಝೀರ್​​ನನ್ನು ಕೋರ್ಟ್​ಗೆ ಹಾಜರುಪಡಿಸಲು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ವಿಚಾರಣಾಧೀನ‌‌ ಕೈದಿ ಮಧು ಹಾಗೂ ಇತರೆ ಕೈದಿಗಳು ಸೇರಿ ‘ದೇಶ ದ್ರೋಹಿ ನೀನು, ನಿನ್ನಿಂದ ಜೈಲಿನ ವಾತಾವರಣ ಕೆಟ್ಟು ಹೋಗಿದೆ. ದೇಶ ದ್ರೋಹಿ ಎಂದು ಧಿಕ್ಕಾರ ಕೂಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಆಗ ಜೈಲು ಭದ್ರತಾ ಸಿಬ್ಬಂದಿ ಗಲಾಟೆಯನ್ನು ಬಿಡಿಸಿ ಉಗ್ರ ನಝೀರ್​ನನ್ನು ವಿಚಾರಣೆಗೆ ಹಾಜರುಪಡಿಸಿದ್ದಾರೆ. ಗಾಯಗೊಂಡಿರುವ ನಝೀರ್​​ನನ್ನು ಜೈಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ. ನಝೀರ್, ಜೈಲಿನಲ್ಲಿರುವ ಹಿಂದೂ ಕೈದಿಗಳ ಮೈಂಡ್ ವಾಶ್ ಮಾಡಿ ಅವರನ್ನು ತಮ್ಮ ಧರ್ಮಕ್ಕೆ ಕನ್ವರ್ಟ್​ ಮಾಡುತ್ತಿದ್ದ ಎನ್ನಲಾಗಿದೆ. ಕೆಲವರನ್ನು ಟೆರರಿಸಂ​ಗೆ ಇಳಿಸಿ ಸೀರಿಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಕೂಡ ಹೌದು ಈ ನಝೀರ್. ಜೈಲಿನಲ್ಲೇ ಇದ್ದುಕೊಂಡು ಕೆಲ ಕೃತ್ಯಗಳನ್ನು ಮಾಡಿಸಲು ಮುಂದಾಗಿದ್ದನು. ಈ ಹಿನ್ನೆಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳು ಉಗ್ರನಿಗೆ ಸಖತ್ ಮಾಂಜಾ ಕೊಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದೇ ಲಕ್ಷಾಂತರ ದುಡಿಯುತ್ತಿದ್ದ ಉಗ್ರ ನಝೀರ್​; 30ಕ್ಕೂ ಹೆಚ್ಚು ಹಿಂದೂಗಳನ್ನ ಇಸ್ಲಾಂಗೆ ಕನ್ವರ್ಟ್ ಮಾಡಿದ್ನಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Exclusive: ಉಗ್ರ ನಝೀರ್​ಗೆ ಜೈಲಿನಲ್ಲಿ ಧರ್ಮದೇಟು ಕೊಟ್ಟ ಇತರೆ ಕೈದಿಗಳು.. ಆಸ್ಪತ್ರೆಗೆ ಭಯೋತ್ಪಾದಕ ಶಿಫ್ಟ್..! ​

https://newsfirstlive.com/wp-content/uploads/2023/07/Nazir.jpg

Load More