newsfirstkannada.com

ಬೆಂಗಳೂರು ಈಗ ಮತ್ತಷ್ಟು ದುಬಾರಿ; ವಿದ್ಯಾರ್ಥಿಗಳು, ಬ್ಯಾಚುಲರ್‌ಗಳು ಓದಲೇಬೇಕಾದ ಸ್ಟೋರಿ ಇದು

Share :

Published August 6, 2023 at 12:27pm

  ಜನಸಾಮಾನ್ಯರಿಗಂತೂ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ

  PG, ಹಾಸ್ಟೆಲ್‌ನಲ್ಲಿರೋ ಬ್ಯಾಚುಲರ್‌ಗಳಿಗೆ ಶಾಕಿಂಗ್ ನ್ಯೂಸ್

  ಬೆಂಗಳೂರು ವಿದ್ಯಾರ್ಥಿಗಳ ಜೇಬಿಗೂ ಕತ್ತರಿ ಬೀಳೋದು ಪಕ್ಕಾ!

ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನ ನಗರಿ ಸಿಕ್ಕಾಪಟ್ಟೆ ಕಾಸ್ಟ್ಲಿ ಅನ್ನೋದು ಎಲ್ಲರಿಗೂ ಗೊತ್ತು. ಮಾಯನಗರಿಯಲ್ಲಿ ದಿನ ಕಳೆಯೋದು ಎಷ್ಟು ದುಬಾರಿ ಅನ್ನೋದು ಇಲ್ಲಿರೋ ಪ್ರತಿಯೊಬ್ಬರಿಗೂ ಗೊತ್ತಿದೆ. ಜನಸಾಮಾನ್ಯರಿಗಂತೂ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಹೂವು, ತರಕಾರಿ, ಹಾಲು, ದಿನಸಿ ಪದಾರ್ಥಗಳ ಬೆಲೆ ಏರಿಕೆ ಗಗನಮುಖಿಯಾಗಿದೆ. ಈ ಬೆಲೆ ಏರಿಕೆಯ ಮಧ್ಯೆ ಬೆಂಗಳೂರಿನ ಪಿಜಿ, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೊಂದು ಶಾಕಿಂಗ್ ನ್ಯೂಸ್ ಬಂದಿದೆ. ಪಿಜಿ, ಹಾಸ್ಟೆಲ್‌ ಬಾಡಿಗೆ ದರ ಮತ್ತಷ್ಟು ಜಾಸ್ತಿಯಾಗುತ್ತಾ ಇದ್ದು, ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್‌ಗಳ ಜೇಬಿಗೆ ಕತ್ತರಿ ಬೀಳೋ ಸಾಧ್ಯತೆ ಇದೆ.

ಬೆಂಗಳೂರಿನ ಪಿಜಿ ಹಾಗೂ ಹಾಸ್ಟೆಲ್ ಬಾಡಿಗೆ ರೇಟ್ ಮತ್ತಷ್ಟು ದುಬಾರಿಯಾಗಲಿದೆ. ಯಾಕಂದ್ರೆ ಈ ವಸತಿ ಗೃಹಗಳಲ್ಲಿ ಇರೋರು ಇನ್ಮುಂದೆ GST ಕಟ್ಟಬೇಕು. ಬಾಡಿಗೆ 1000 ರೂಪಾಯಿಗಿಂತ ಕಡಿಮೆಯಿದ್ರೆ ಶೇಕಡಾ 12ರಷ್ಟು GST ಹಾಗೂ ಸಾವಿರಕ್ಕಿಂತ ಹೆಚ್ಚಿದ್ರೆ ಶೇಕಡಾ 18ರಷ್ಟು GST ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಬೆಂಗಳೂರು GST ಅಡ್ವಾನ್ಸ್ ರೂಲಿಂಗ್ ಪೀಠದಿಂದ ಆದೇಶಿಸಲಾಗಿದೆ. ಈ ನಿರ್ಧಾರದಿಂದಾಗಿ ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯವಾಗಿದೆ ಎಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮಾಹಿತಿ ನೀಡಿದೆ.

ಇದನ್ನೂ ಓದಿ: Video: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದ ಕಾರು; ಸವಾರರು ಅದೃಷ್ಟವಶಾತ್ ಪಾರು

ಪಿಜಿ, ಹಾಸ್ಟೆಲ್ ಬಾಡಿಗೆ ದರದಲ್ಲಿ ಶೇಕಡಾ 12ರಷ್ಟು GST ವಿಧಿಸಿದರೂ ಪಿಜಿ, ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳು ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಹೊರೆಯಾಗಲಿದೆ. ಎಷ್ಟೋ ವಿದ್ಯಾರ್ಥಿಗಳು ಬೇರೆ, ಬೇರೆ ಊರುಗಳಿಂದ ಬಂದು ಬೆಂಗಳೂರಿಗೆ ಹಾಸ್ಟೆಲ್, ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಇದೀಗ GST ವಿಧಿಸೋ ಈ ನಿರ್ಧಾರ ವಿದ್ಯಾರ್ಥಿಗಳಿಗೆ ಕುಟುಂಬದಿಂದ ಬರೋ ಪಾಕೆಟ್ ಮನಿ ಮೇಲೆ ಪರಿಣಾಮ ಬೀರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಂಗಳೂರು ಈಗ ಮತ್ತಷ್ಟು ದುಬಾರಿ; ವಿದ್ಯಾರ್ಥಿಗಳು, ಬ್ಯಾಚುಲರ್‌ಗಳು ಓದಲೇಬೇಕಾದ ಸ್ಟೋರಿ ಇದು

https://newsfirstlive.com/wp-content/uploads/2023/07/bangalore-Cirty.jpg

Load More