newsfirstkannada.com

10ಕ್ಕೂ ಹೆಚ್ಚು ಜನರ ವಶಕ್ಕೆ ಪಡೆಯಲಾಗಿದೆ -ದರ್ಶನ್ ಅರೆಸ್ಟ್ ಬಗ್ಗೆ ಪೊಲೀಸ್ ಕಮಿಷನರ್ ಸ್ಫೋಟಕ ಮಾಹಿತಿ

Share :

Published June 11, 2024 at 11:23am

Update June 11, 2024 at 11:24am

    ಚಾಲೆಂಜಿಂಗ್ ಸ್ಟಾರ್ ದರ್ಶನ್​ರನ್ನು ಬಂಧಿಸಿದ ಪೊಲೀಸರು

    ಕೊಲೆ ಆರೋಪ ಪ್ರಕರಣದ ಬಗ್ಗೆ ಕಮಿಷನರ್ ಮಾಹಿತಿ

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕ ಸಾವು

ಚಿತ್ರದುರ್ಗ ಮೂಲದ ಯುವಕನ ಕೊಲೆ ಆರೋಪ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು ಸುದ್ದಿಗೋಷ್ಟಿ ನಡೆಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ್ದಾರೆ.

ಬಿ.ದಯಾನಂದ್ ಹೇಳಿದ್ದೇನು..?
ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಒಂದರ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಓರ್ವ ನಟರನ್ನು ಪ್ರಶ್ನೆ ಮಾಡಲಾಗುತ್ತಿದೆ. ಈ ಕೊಲೆ ಪ್ರಕರಣ ಆಗಿರೋದು ಭಾನುವಾರ 9 ರಂದು. ಅಪರಿಚಿತ ಗಂಡಸಿನ ಶವದ ಆಧಾರದ ಮೇಲೆ ಆತನ ದೇಹದ ಮೇಲಿನ ಗಾಯ ಗಮನಿಸಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವು.

ಇದನ್ನೂ ಓದಿ:Breaking: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಸಿಸಿಟಿವಿ ಮತ್ತು ತಾಂತ್ರಿಕ ಸಲಕರಣೆಗಳ ಸಹಾಯದಿಂದ ವ್ಯಕ್ತಿಯ ಗುರುತನ್ನು ಪತ್ತೆ ಮಾಡಿದೇವು. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಅನ್ನೋದು ತನಿಖೆಯಿಂದ ಪತ್ತೆ ಆಯಿತು. ನಟ ಹಾಗೂ ಆತನ ಸಹಚರರನ್ನ ತನಿಖೆ ಮಾಡ್ತಿದ್ದೇವೆ. ತನಿಖೆ ಪ್ರಕ್ರಿಯೆ ನಡೆಯುತ್ತಿರೋದ್ರಿಂದ ಹೆಚ್ಚಿನ ಮಾಹಿತಿ ಕೊಡೋಕೆ ಆಗಲ್ಲ. ನಟನ ಪತ್ನಿಗೆ ಕೆಲ ಮೆಸೇಜ್ ಕಳುಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. 10ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಡಿ ಬಾಸ್​ ದರ್ಶನ್​ ಅರೆಸ್ಟ್​.. ಸ್ಯಾಂಡಲ್​ವುಡ್​ ನಟ ಅರೆಸ್ಟ್ ಆಗಲು ಕಾರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10ಕ್ಕೂ ಹೆಚ್ಚು ಜನರ ವಶಕ್ಕೆ ಪಡೆಯಲಾಗಿದೆ -ದರ್ಶನ್ ಅರೆಸ್ಟ್ ಬಗ್ಗೆ ಪೊಲೀಸ್ ಕಮಿಷನರ್ ಸ್ಫೋಟಕ ಮಾಹಿತಿ

https://newsfirstlive.com/wp-content/uploads/2024/06/DARSHAN-3-1.jpg

Load More