/newsfirstlive-kannada/media/post_attachments/wp-content/uploads/2023/12/New-Year-1-1.jpg)
ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸ ವರ್ಷದಾಚರಣೆ ಅಂದ್ರೆ ಅಲ್ಲಿ ಅಮಲು, ತೇಲಾಟ, ತೂರಾಟ ಇಲ್ಲದೇ ಸಂಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಈ ಬಾರಿ ಕುಡಿದು ತೇಲಾಡುವವರಿಗೆ, ಮನೆಗೆ ಹೋಗಲು ಆಗದ ಮಟ್ಟಿಗೆ ಟೈಟ್ ಆದವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿ ಬಿದ್ದು ಗಾಯಗೊಂಡಲ್ಲಿ ಅವರನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. ಇನ್ನು ಪಬ್​ಗಳ ಮುಂದೆ ಪೊಲೀಸ್ ವಿಡಿಯೋ ಕ್ಯಾಮರಾ ಅಳವಡಿಸಲಾಗುತ್ತದೆ. ಇದಕ್ಕಾಗಿ ಪಬ್​ಗಳ ಮುಂದೆ ಒಬ್ಬೊಬ್ಬ ಸಿಬ್ಬಂದಿ ನಿಯೋಜನೆ ಮಾಡಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ಬಗೆದಷ್ಟು ಆಚೆ ಬರುತ್ತಿವೆ ಶ್ವೇತಾಗೌಡ ವಂಚನೆ ಪ್ರಕರಣ! ಶಿವಮೊಗ್ಗ ಮೂಲದ ವ್ಯಾಪಾರಿಗೆ ಬಿದ್ದಿತ್ತು ಟೋಪಿ!
ಇದರ ಜೊತೆಗೆ ಇನ್ನೂ ಅನೇಕ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಸಾಧ್ಯವಾದಷ್ಟು ಅಹಿತಕರ ಘಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಿದೆ. ಕಳೆದ ಬಾರಿಗಿಂತ ಹೆಚ್ಚು ಕ್ಯಾಮರಾ ಅಳವಡಿಸಲು ಪೊಲೀಸರು ಹೆಚ್ಚು ಒತ್ತನ್ನು ನೀಡಿದ್ದಾರೆ. ನಗರದಲ್ಲಿ ಹೊಸದಾಗಿ 180 ಸಿಸಿ ಕ್ಯಾಮರಾಗಳ ಅಳವಡಿಸಲಾಗುತ್ತದೆ. ಸಿಸಿಟಿವಿ ಮಾನಿಟರಿಂಗ್​ಗಾಗಿ ಮಿನಿ ಕಂಟ್ರೋಲ್​ ರೂಮ್ ಸ್ಥಾಪನೆ ಮಾಡಿದ್ದಾರೆ. 500ಕ್ಕೂ ಹೆಚ್ಚು ಹೋಂಗಾರ್ಡ್​, 700 ಪೊಲೀಸರ ನಿಯೋಜನೆ. ಈ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಂದಿ ಧ್ವಜದ ಕುಣಿತ.. ಡಾಲಿ – ಧನ್ಯತಾ ಜೋಡಿಯ 10 ಫೋಟೋಗಳು ಇಲ್ಲಿವೆ!
ಮಹಿಳೆಯರ ಸುರಕ್ಷತೆಗೆ 15 ಸೇಫ್ಟಿ ಐಲ್ಯಾಂಡ್​, 15 ವಾಚ್ ಟವರ್ ವ್ಯವಸ್ಥೆ ಮಾಡಲಾಗಿದೆ. ಮೂರು ಆ್ಯಂಬುಲೆನ್ಸ್ ಜೊತೆ 2 ಪ್ರೈಮರಿ ಹೆಲ್ತ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೆಂಟ್​ ಜಾನ್ಸ್ ಆಸ್ಪತ್ರೆಯಲ್ಲಿ 10 ಬೆಡ್​ಗಳನ್ನು ರಿಸರ್ವ್​ ಮಾಡಲಾಗಿದ್ದು. ಕೋರಮಂಗಲ ಬಿಟ್ಟು ಮೈಕೋ ಲೇಔಟ್​ ಕಡೆಯಲ್ಲೂ ವ್ಯವಸ್ಥೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/01/New-year-4.jpg)
ಕಳೆದ ಬಾರಿಗಿಂತ ಈ ಬಾರಿ ಕ್ಯಾಮರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಸಿಸಿಟಿವಿ ಮಾನಿಟರಿಂಗ್​ಗೆ ಮಿನಿ ಕಂಟ್ರೋಲ್​ ರೂಂ ಸ್ಥಾಪಿಸಲಾಗಿದೆ. ಬೀದಿ ದೀಪಗಳು ಕಡಿಮೆ ಇರೋದ್ರಿಂದಾಗಿ ಹೆಚ್ಚುವರಿ ಲೈಟ್ ಹಾಕಲಾಗುತ್ತಿದೆ. ಮೂರು ಆ್ಯಂಬುಲೆನ್ಸ್ ಜೊತೆಗೆ ಎರಡು ಪ್ರೈಮರಿ ಹೆಲ್ತ್ ಸೆಂಟರ್​ನ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us