/newsfirstlive-kannada/media/post_attachments/wp-content/uploads/2024/09/Darshan-Renukaswamy-Case.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಹಾಗೂ ರಾಜ್ಯದ ಇತರೆ ಕಾರಾಗೃಹದಲ್ಲಿರುವ ಡಿ ಗ್ಯಾಂಗ್‌ಗೆ ಅಸಲಿ ಸಂಕಷ್ಟ ಈಗ ಎದುರಾಗಲಿದೆ. ಕೊಲೆ ಕೇಸ್‌ನ ಇಂಚಿಂಚು ತನಿಖೆ ನಡೆಸಿರುವ ಪೊಲೀಸರು ಚಾರ್ಚ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸರ ದೋಷಾರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ಗೆ ಮತ್ತೊಂದು ಟ್ವಿಸ್ಟ್.. ದರ್ಶನ್ ಗ್ಯಾಂಗ್ನಲ್ಲಿ ಈ ಮೂವರ ಪಾತ್ರ ಇಲ್ಲವೇ ಇಲ್ಲ..?
ಈ ಕೊಲೆ ಕೇಸ್‌ನ ತನಿಖೆ ನಡೆಸಿದ ಪೊಲೀಸರು ಸಾಕ್ಷಿಗಳನ್ನು 3 ಆಯಾಮದಲ್ಲಿ ವಿಂಗಡಣೆ ಮಾಡಿದ್ದಾರೆ. 4,500 ಪುಟಗಳಿಗೂ ಅಧಿಕ ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಕೆಯಾಗಲು ರೆಡಿಯಾಗುತ್ತಿದೆ.
ಚಕ್ರವರ್ತಿಗೆ ಚಾರ್ಜ್‌ಶೀಟ್ ‘ಚಕ್ರ’ವ್ಯೂಹ!
ರೇಣುಕಾಸ್ವಾಮಿ ಕೊಲೆ ಕೇಸ್‌ನ ಚಾರ್ಜ್‌ಶೀಟ್ ಸುಮಾರು 4500 ಅಧಿಕ ಪುಟಗಳನ್ನು ದಾಟಲಿದೆ. ಅದರಲ್ಲಿ ಹಲವು ಪ್ರತ್ಯಕ್ಷದರ್ಶಿಗಳ ಹೇಳಿಕೆ, 200ಕ್ಕೂ ಹೆಚ್ಚು ಜನರ ಹೇಳಿಕೆ, 40ಕ್ಕೂ ಹೆಚ್ಚು 164 ಸ್ಟೇಟ್ಮೆಂಟ್ಗಳು ದಾಖಲಾಗಲಿದೆ.
ಇನ್ನು 200ಕ್ಕೂ ಹೆಚ್ಚು ಮೆಟಿರಿಯಲ್ ಎವಿಡೆನ್ಸ್, ಸಾವಿರಕ್ಕೂ ಅಧಿಕ ಪುಟಗಳ ಸಿಡಿಆರ್, ಕೃತ್ಯಕ್ಕೆ ಬಳಸಿದ್ದ ವಾಹನಗಳ ದಾಖಲೆಗಳು ಹಾಗೂ ಆರೋಪಿಗಳ ಡಿಎನ್ಎ ಪರೀಕ್ಷಾ ವರದಿಗಳು ಪ್ರಮುಖವಾಗಿವೆ.
3 ಆಯಾಮದಲ್ಲಿ ಸಾಕ್ಷಿಗಳ ವಿಂಗಡಣೆ
1. ಕಿಡ್ನ್ಯಾಪ್‌ಗೆ ಸಂಬಂಧಪಟ್ಟಂತ ಸಾಕ್ಷಿಗಳು
2. ಕೊಲೆಗೆ ಸಂಬಂಧಪಟ್ಟಂತ ಸಾಕ್ಷಿಗಳು
3. ಸಾಕ್ಷ್ಯನಾಶ ಮಾಡಿದ ಸಂಬಂಧ ಸಾಕ್ಷಿಗಳು
1. ಕಿಡ್ನ್ಯಾಪ್‌ಗೆ ಸಂಬಂಧಪಟ್ಟಂತ ಸಾಕ್ಷಿಗಳು
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪಟ್ಟಣಗೆರೆ ಶೆಡ್‌ಗೆ ಕರೆತಂದಿದೆ. ಆರೋಪಿ ಪವಿತ್ರಾ ಗೌಡ ಅವರ ಮಾಹಿತಿ ಮೇರೆಗೆ ರೇಣುಕಾಸ್ವಾಮಿ ಅವರ ಕಿಡ್ನ್ಯಾಪ್‌ಗೆ ನಟ ದರ್ಶನ್ ಸೂಚನೆ ನೀಡಿದ್ದಾರೆ ಅನ್ನೋದು ಈ ಪ್ರಕರಣಕ್ಕೆ ಪ್ರಮುಖವಾದ ಸಾಕ್ಷಿಯಾಗಿದೆ.
ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಜೊತೆ ಸಂಪರ್ಕ ಮಾಡಿದ್ದ ಆರೋಪಿ ಪವನ್ ಅವರು ರೇಣುಕಾಸ್ವಾಮಿಯನ್ನ ಹುಡುಕಿ, ಹುಡುಗರನ್ನ ಸೇರಿಸಿ ಕಿಡ್ನ್ಯಾಪ್ ಮಾಡಿದ ಆರೋಪವಿದೆ.
ಇದನ್ನೂ ಓದಿ: ದರ್ಶನ್ ಪ್ರಕರಣದ ಬಗ್ಗೆ ಬಿ ದಯಾನಂದ್ ಮಹತ್ವದ ಹೇಳಿಕೆ; ಆರೋಪಿಗೆ ಮತ್ತಷ್ಟು ಸಂಕಷ್ಟ
ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆತರುವಲ್ಲಿ ಕಾರು ಚಾಲಕ ರವಿ ಸಹಾಯ ನೀಡಿದ್ದಾರೆ. ಈ ಕಿಡ್ನ್ಯಾಪ್‌ಗೆ ಬಳಸಿದ್ದ ಟಯೋಟಾ ಇಟಿಯೋಸ್ ಕಾರು ಕೂಡ ಪೊಲೀಸರ ವಶದಲ್ಲಿದೆ. A6 ಜಗದೀಶ್, A7 ಅನು, A8 ರವಿ ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಕಾರು, ಆಟೋ ಹಾಗೂ ಸಿಸಿಟಿವಿ ದೃಶ್ಯಗಳು ಸಾಕ್ಷಿಗಳಾಗಿ ಪರಿಗಣನೆ ಮಾಡಲಾಗುತ್ತಿದೆ.
2. ಕೊಲೆಗೆ ಸಂಬಂಧಪಟ್ಟಂತ ಸಾಕ್ಷಿಗಳು
ಪಟ್ಟಣಗೆರೆ ಶೆಟ್‌ನಲ್ಲಿ ಸಂಗ್ರಹಿಸಲಾಗಿದ್ದ ಸ್ಯಾಂಪಲ್ಗಳ ಬಗ್ಗೆ ರಿಪೋರ್ಟ್ ಪೊಲೀಸರ ಕೈ ಸೇರಿದೆ. ಅದರಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು, ಬಟ್ಟೆಗಳ ಮೇಲೆ ರಕ್ತದ ಕಲೆಗಳು, ಸಿಸಿಟಿವಿ ಫುಟೇಜ್ ರಿಪೋರ್ಟ್, ಚಪ್ಪಲಿ, ಬಟ್ಟೆಗಳ ಬಗ್ಗೆ ವರದಿ ದಾಖಲಾಗಿದೆ.
ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ನ FSL ವರದಿ, ಆರೋಪಿಗಳ ಚಲನವಲನ, ಸಿಸಿಟಿವಿ ದೃಶ್ಯಾವಳಿಗಳು, ಪೋಸ್ಟ್ಮಾರ್ಟಮ್ನಲ್ಲಿ ಸಂಗ್ರಹಿಸಿದ ಸ್ಯಾಂಪಲ್ಸ್ ರಿಪೋರ್ಟ್, ಸಿಡಿಆರ್ ಲಿಸ್ಟ್ ಆರೋಪಿಗಳ ಪಾತ್ರವನ್ನು ಸಾಬೀತು ಪಡಿಸುವ ಸಾಧ್ಯತೆ ಇದೆ.
ಮೊಬೈಲ್ ರಿಟ್ರೀವ್ ಕುರಿತ ಎಫ್ಎಸ್ಎಲ್ ವರದಿಗಳು, ಘಟನಾ ಸ್ಥಳಗಳ ಬಗ್ಗೆ PWD ಇಲಾಖೆ ನೀಡಿದ ನಕ್ಷೆಯ ವರದಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ.
3. ಸಾಕ್ಷ್ಯನಾಶ ಮಾಡಿದ ಸಂಬಂಧ ಸಾಕ್ಷಿಗಳು
ಕೊನೆಯದಾಗಿ ಚಾರ್ಜ್‌ಶೀಟ್‌ನಲ್ಲಿ ಶವ ಬಿಸಾಕಿದ ಸ್ಥಳದ ಮಹಜರು ವರದಿ ನೀಡಲಾಗುತ್ತೆ. ಶವ ಸಾಗಿಸಲು ಬಳಸಿದ್ದ ವಾಹನಗಳು, ಸ್ನೇಹಿತರೊಬ್ಬರಿಂದ 30 ಲಕ್ಷ ಹಣ ಪಡೆದಿದ್ದ ದರ್ಶನ್, ಸಾಕ್ಷಿನಾಶಕ್ಕೆ ಹಣ ನೀಡಿದ್ದವರ ಹೇಳಿಕೆ, ಟ್ರಾನ್ಸ್ಫರ್ ದಾಖಲೆ ಹೀಗೆ ಆರೋಪಿಗಳು ಮಾಡಿದ್ದ ಪ್ಲ್ಯಾನ್ನ ಮಾಹಿತಿಯೂ ದಾಖಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ