Advertisment

ಒಂದೇ ಒಂದು ಫೋನ್ ಕಾಲ್‌.. ಎಸ್ಕೇಪ್ ಆಗಲು ಅತುಲ್ ಹೆಂಡತಿ ಖತರ್ನಾಕ್ ಪ್ಲಾನ್; ತಗ್ಲಾಕೊಂಡಿದ್ದು ಹೇಗೆ?

author-image
Gopal Kulkarni
Updated On
ಒಂದೇ ಒಂದು ಫೋನ್ ಕಾಲ್‌.. ಎಸ್ಕೇಪ್ ಆಗಲು ಅತುಲ್ ಹೆಂಡತಿ ಖತರ್ನಾಕ್ ಪ್ಲಾನ್; ತಗ್ಲಾಕೊಂಡಿದ್ದು ಹೇಗೆ?
Advertisment
  • ಅತುಲ್ ಸುಭಾಷ್​ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದೇ ರೋಚಕ
  • ಒಂದೇ ಒಂದು ಫೋನ್ ಕಾಲ್ ಮಾಡಿ ತಗ್ಲಾಕಿಕೊಂಡ ನಿಖಿತಾ ಸಿಂಘಾನಿಯಾ
  • ತಮ್ಮ ಜೋನಪುರದ ಮನೆಯಿಂದ ಎಸ್ಕೇಪ್ ಆಗಿ ಎಲ್ಲಿ ಉಳಿದುಕೊಂಡಿದ್ದರು ?

ಬೆಂಗಳೂರಿನಲ್ಲಿ ನಡೆದ ಅತುಲ್ ಸುಭಾಷ್ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬೆಂಗಳೂರಿನ ಪೊಲೀಸರು ಲಾಕ್ ಮಾಡಿದ್ದು ನಿಮಗೆ ಗೊತ್ತೆ ಇದೆ. ಆದ್ರೆ ಈ ಒಂದು ಆಪರೇಷನ್ ಎಷ್ಟು ರೋಚಕವಾಗಿತ್ತು ಗೊತ್ತಾ? ಬೆಂಗಳೂರಿನ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದರು ಆರೋಪಿಗಳು.ಉತ್ತರಪ್ರದೇಶದ ಜೋನಪುರದಲ್ಲಿದ್ದ ಆರೋಪಿಗಳ ಮನೆಗೆ ಬೆಂಗಳೂರಿನ ಪೊಲೀಸರು ಹೋದಾಗ ಮನೆ ಲಾಕ್ ಆಗಿತ್ತು. ಮನೆಗೆ ಬೀಗ ಹಾಕಿಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದರು. ಕೊನೆಗೆ ಒಂದೇ ಒಂದು ಕಾಲ್​ನಿಂದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ರು

Advertisment

ಮೊದಲಿಗೆ ಜೋನಪುರದ ಮನೆಯಿಂದ ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದರು. ಅತ್ತ ಹರಿಯಾಣದ ಗುರುಗ್ರಾಮದಲ್ಲಿದ್ದ ನಿಖಿತಾ ಸಿಂಘಾನಿಯಾ ಕೂಡ ಸ್ಥಳ ಬದಲಾವಣೆ ಮಾಡಿದ್ದಳು. ಈ ವೇಳೆ ಬೆಂಗಳೂರಿನ ಪೊಲೀಸರಿಗೆ ಆರೋಪಿಗಳನ್ನು ಹಿಡಿಯುವುದೇ ಚಾಲೆಂಜ್ ಆಗಿತ್ತು. ಎಲ್ಲ ಕೇಸ್​ಗಳಂತೆ ಈ ಕೇಸ್​ನಲ್ಲೂ ಪೊಲೀಸರು ಮೊದಲಿಗೆ ಆರೋಪಿಗಳ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದ್ರು. ಆದ್ರೆ ಆರೋಪಿಗಳು ಮೊಬೈಲ್ ಕಾಲ್ ಮಾಡಿದ್ರೆ ಸಿಕ್ಕಿ ಬೀಳುವ ಭಯದಿಂದ ಫೋನ್ ಕಾಲ್ ಮಾಡುತ್ತಿರಲಿಲ್ಲ. ಒಬ್ಬರಿಗೊಬ್ಬರು ವಾಟ್ಸಾಪ್ ಕಾಲ್ ಮಾಡುತ್ತಿದ್ದರು.

ಇದನ್ನೂ ಓದಿ:‘ಮೊಮ್ಮಗ ಬದುಕಿರೋದೇ ಅನುಮಾನ’- ಅತುಲ್ ಸುಭಾಷ್ ತಂದೆ ಸ್ಫೋಟಕ ಹೇಳಿಕೆ; ಕೇಸ್‌ಗೆ ಹೊಸ ಟ್ವಿಸ್ಟ್!

ಆದ್ರೆ. ಮಿಸ್ ಆಗಿ ಒಂದೇ ಒಂದು ಫೋನ್ ಕಾಲ್ ಮಾಡಿದ್ದಳು ಆರೋಪಿ ನಿಖಿತಾ ಸಿಂಘಾನಿಯಾ. ಆ ಫೋನ್​ ಕಾಲ್​ನಿಂದಾಗಿ ಪೊಲೀಸರಿಗೆ ನಿಖಿತಾ ಸಿಂಘಾನಿಯಾ ಗುರುಗ್ರಾಮದ ಪೇಯಿಂಗ್ ಗೆಸ್ಟ್​ನಲ್ಲಿ ಇದ್ದಾಳೆ ಎಂಬುದು ಗೊತ್ತಾಯಿತು. ತಕ್ಷಣವೇ ಆ ಸ್ಥಳಕ್ಕೆ ಹೋಗಿ ಆರೋಪಿ ನಿಖಿತಾಳನ್ನು ಬಂಧಿಸಿದರು ಪೊಲೀಸರು. ಗುರುಗ್ರಾಮದ ರೈಲು ವಿಹಾರ ಪ್ರದೇಶದ ಪಿಜಿಯಲ್ಲಿದ್ದ ನಿಖಿತಾ ಪೊಲೀಸರ ಬಲೆಗೆ ಕೊನೆಗೂ ಬಿದ್ದಿದ್ದಳು.

Advertisment

ನಿಖಿತಾ ಸಿಕ್ಕ ಬಳಿಕ ಉಳಿದ ಆರೋಪಿಗಳನ್ನು ಪತ್ತೆ ಹಚ್ಚುವುದು ನೀರು ಕುಡಿದಷ್ಟು ಸುಲಭ ಎಂಬುದು ಪೊಲೀಸರಿಗೆ ಅರಿವಾಗಿತ್ತು. ಕೂಡಲೇ ನಿಖಿತಾ ಮೊಬೈಲ್​ನಿಂದ ತಾಯಿ ನಿಶಾಗೆ ಫೋನ್ ಮಾಡಿಸಿ ಮಾತನಾಡಿಸಿದ್ದಾರೆ ಪೊಲೀಸರು. ಈ ಕಾಲ್​ನಿಂದ ನಿಶಾ ಸಿಂಘಾನಿಯಾರ ಲೋಕೇಶನ್​ ಪೊಲೀಸರಿಗೆ ಗೊತ್ತಾಗಿದೆ. ಮತ್ತೊಂದು ಪೊಲೀಸ್ ತಂಡ ಕೂಡಲೇ ಪ್ರಯಾಗರಾಜ್ ಬಳಿಯ ಜೂಸಿ ಟೌನ್​​ನಲ್ಲಿದ್ದ ಆರೋಪಿಗಳ ಬಳಿ ಹೋಗಿ ಬಂಧಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್​ನ್ಯೂಸ್​; ಇನ್ಮುಂದೆ ಮಹಿಳೆಯರಿಗೆ ಮಾತ್ರವಲ್ಲ ಇವರಿಗೂ ಸಿಗಲಿದೆ 2 ಸಾವಿರ

ಪೊಲೀಸರ ಮುಂದೆ ಇದ್ದ ಮತ್ತೊಂದು ದೊಡ್ಡ ಸವಾಲು ಅಂದ್ರೆ ಅದು ಅರೋಪಿಗಳನ್ನು ಜನರು ಗುರುತಿಸಿಬಾರದು ಎಂದು. ಏಕೆಂದರೆ ಅತುಲ್ ಸುಭಾಷ್ ಪ್ರಕರಣ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಸಾರ್ವಜನಿಕರಲ್ಲಿ ಆರೋಪಿಗಳ ಬಗ್ಗೆ ದೊಡ್ಡ ಆಕ್ರೋಶದ ಬುಗ್ಗೆಯೆದ್ದಿತ್ತು. ಹೀಗಾಗಿ ಸಾರ್ವಜನಿಕರು ಆರೋಪಿಗಳನ್ನು ಗುರುತಿಸಿದ್ದರೆ ಅವರನ್ನು ಥಳೀಸುವ ಸಾಧ್ಯತೆಗಳು ಇದ್ದವು

Advertisment

ಆರೋಪಿಗಳನ್ನು ಬಂಧಿಸಿದ್ದು ಬೇರೆ ಜನರಿಗೆ ಗೊತ್ತಾದರೇ, ಜನರು ಬಂದು ಆರೋಪಿಗಳನ್ನು ಥಳಿಸುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಆರೋಪಿಗಳನ್ನು ಗೌಪ್ಯವಾಗಿ ಬೆಂಗಳೂರಿಗೆ ಕರೆತರುವುದು ಪೊಲೀರ ಗುರಿಯಾಗಿತ್ತು. ಗೌಪ್ಯತೆ ಕಾಪಾಡುವ ಸಲುವಾಗಿ ಆರೋಪಿಗಳನ್ನು ಲಖನೌನಿಂದ ತಡರಾತ್ರಿಯ ವೇಳೆ ವಿಮಾನದಲ್ಲಿ ಕರೆದುಕೊಂಡು ಬಂದಿದ್ದಾರೆ. ಬಳಿಕ ಬೆಂಗಳೂರಿನಲ್ಲೂ ಸೀಕ್ರೆಟ್ ಆಗಿಯೇ ಆರೋಪಿಗಳನ್ನು ಕೋರ್ಟ್​ಗೆ ಹಾಜರುಪಡಿಸದೆ ನೇರವಾಗಿ ಜಡ್ಜ್​ ನಿವಾಸಕ್ಕೆ ಕರೆದುಕೊಂಡು ಹೋಗಿ ಹಾಜರುಪಡಿಸಿದ್ದಾರೆ. ಗೌಪ್ಯವಾಗಿಯೇ ಬೆಂಗಳೂರು ಏರ್​ಪೋರ್ಟ್​ನಲ್ಲೂ ಯಾರಿಗೂ ಗೊತ್ತಾಗದಂತೆ ಆರೋಪಿಗಳನ್ನು ಕರೆತಂದಿದ್ದರು ಪೊಲೀಸರು. ಅದೇ ರೀತಿ ಮೆಡಿಕಲ್ ಪರೀಕ್ಷೆಯನ್ನು ಕೂಡ ಗೌಪ್ಯವಾಗಿಯೇ ಮುಗಿಸಿ, ಮುಂಜಾನೆ ವೇಳೆ ಜಡ್ಜ್ ನಿವಾಸಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಹಾಜರುಪಡಿಸಿದ್ದಾರೆ. ಇವೆಲ್ಲಾ ಆದ ಬಳಿಕ ಭಾನುವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸಿರುವ ವಿಷಯವನ್ನು ಪ್ರಕಟಿಸಿದ್ದಾರೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರು.

ಇದನ್ನೂ ಓದಿ:Pavithra Gowda ಜಾಮೀನು ಸಿಕ್ಕರೂ ಜೈಲಲ್ಲೇ ವಾಸ.. ಇಂದು ಏನೆಲ್ಲ ಬೆಳವಣಿಗೆ ಆಗಲಿದೆ..?

ಇನ್ನು ವಿಚಾರಣೆ ವೇಳೆ ಅತುಲ್ ಸುಭಷ್ ಪತ್ನಿ ನಿಖಿತಾ, ನಾನು ಅತುಲ್​ಗೆ ಯಾವ ರೀತಿಯ ಕಿರುಕುಳವನ್ನು ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಆತನ ಜೊತೆಯಲ್ಲಿಯೇ ಇರಲಿಲ್ಲ. ಅತುಲ್ ನನಗೆ ಕಿರುಕುಳ ನೀಡಿದ್ದಾರೆ, ಹಣ ಬೇಕಾಗಿದ್ದರೆ ನಾನು ಆತನನ್ನು ಯಾಕೆ ಬಿಟ್ಟು ಹೋಗುತ್ತಿದ್ದೆ ಎಂದು ನಿಖಿತಾ ಹೇಳಿದ್ದಾಳೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment