Advertisment

ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್

author-image
Ganesh
Updated On
ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್
Advertisment
  • ರಾಮನವಮಿ ಸಂಭ್ರಮದಲ್ಲೇ ಯುವಕರ ಪುಂಡಾಟ ಆರೋಪ
  • ಜೈ ಶ್ರೀರಾಮ್ ಅಲ್ಲ.. ಅಲ್ಲಾ ಹು ಅಕ್ಬರ್ ಅಂತ ಕಿರಿಕ್ ಮಾಡಿದ್ದರು
  • ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

ದೇಶದೆಲ್ಲೆಡೆ ರಾಮನವಮಿ ಹಬ್ಬ ಸಂಭ್ರಮಿಸುವಾಗಲೇ ಬೆಂಗಳೂರಲ್ಲಿ ಅನ್ಯಕೋಮಿನ ಯುವಕರು ಪುಂಡಾಟ ಮೆರೆದಿದ್ದಾರೆ. ಅಲ್ಲಾ ಹು ಅಕ್ಬರ್ ಹೇಳಬೇಕು ಅಂತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕಾರಿನಿಂದ ಎಳೆದು ಯುವಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

Advertisment

ರಾಮನವಮಿ ಸಂಭ್ರಮದಲ್ಲೇ ಯುವಕರ ಪುಂಡಾಟ
ಹೌದು, ನಿನ್ನೆ ಎಲ್ಲೆಡೆ ರಾಮನವಮಿ ಸಂಭ್ರಮ. ಎಲ್ಲೆಲ್ಲೂ ಶ್ರೀರಾಮನ ಜಪ ಮೊಳಗಿತ್ತು. ಈ ಹೊತ್ತಲ್ಲೇ ಬೆಂಗಳೂರಲ್ಲಿ ಗಲಾಟೆ ನಡೆದಿದೆ. ವಿದ್ಯಾರಣ್ಯಪುರಂ ಬಳಿಯ ಬೆಟ್ಟಳ್ಳಿಯಲ್ಲಿ ಶ್ರೀರಾಮನವಮಿ ಹಬ್ಬ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದ ಸಹಕಾರ ನಗರ ಮೂಲದ ಮೂವರು ಯುವಕರನ್ನು ಅಡ್ಡಗಟ್ಟಿದ ಅನ್ಯಧರ್ಮದ ಯುವಕರ ಗುಂಪೊಂದು ಕಾರಿನ ಬಳಿ ಬಂದು ಜೈಶ್ರೀರಾಮ್ ಹೇಳ್ಬೇಕಾ, ಜೈಶ್ರೀರಾಮ್ ಅಲ್ಲ. ಓನ್ಲಿ ಅಲ್ಲಾ ಹು ಅಕ್ಬರ್ ಅಂತ ಜಗಳ ತೆಗೆದಿದ್ದಾರೆ. ನಮ್ಮ ಹಬ್ಬ, ನಾವೇನಾದ್ರೂ ಹೇಳ್ತೀವಿ. ನಿಮ್ಮ ಹಬ್ಬಕ್ಕೆ ನಾವು ಬರ್ತೀವಾ ಅಂತ ಹಿಂದೂ ಯುವಕರು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕಾರಿನಲ್ಲಿದ್ದ ಯುವಕರ ಮೇಲೆ ಐವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಹೇಗಿತ್ತು? ಹೇಗಾಯ್ತು? ಕಾಂಗ್ರೆಸ್​​ಗೆ ಇದೆಂಥ ಸ್ಥಿತಿ.. ನಿಜವಾಗ್ತಿದ್ಯಾ ಬಿಜೆಪಿಯ ಆ ಸಂಕಲ್ಪ..!

ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ
ಸಹಕಾರ ನಗರ ಮೂಲದ ರಾಹುಲ್, ವಿನಾಯಕ್, ಪವನ್ ಮೇಲೆ ಹಲ್ಲೆ ನಡೆದಿದ್ದು, ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮೊದಲನೇ ಆರೋಪಿ ಫರ್ಮಾನ್, 2ನೇ ಆರೋಪಿ ಸಮೀರ್​​​ ಸೇರಿ ಮತ್ತೋರ್ವನನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಗಾಂಜಾ ನಶೆಯಲ್ಲಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಆರೋಪಿಗಳಿಗೆ ವೈದ್ಯಕೀಯ ಚಿಕಿತ್ಸೆ ನಡೆಸಿದ್ದಾರೆ.

Advertisment

ಇದನ್ನೂ ಓದಿ: ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಆರೋಪ; ಕಾರಿನಲ್ಲಿ ಹೋಗ್ತಿದ್ದವರನ್ನ ಅಡ್ಡಗಟ್ಟಿ ಪುಂಡಾಟ; ದೂರು ದಾಖಲು

ಒಂದು ಸಮುದಾಯಕ್ಕೆ ಸೇರಿದ ಯುವಕರು ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ, ಬೈಕ್​ನಲ್ಲಿ ಬಂದವರು ಅವರನ್ನು ಅಡ್ಡ ಹಾಕಿದ್ದಾರೆ. ನೀವು ಜೈ ಶ್ರೀರಾಂ ಎಂದು ಕೂಗಬಾರದು. ಅಲ್ಲಾ ಹೋ ಅಕ್ಬರ್ ಎಂದು ಮಾತ್ರ ಕೂಗಬೇಕು ಅಂತಾ ಅವಾಜ್ ಹಾಕಿದ್ದಾರೆ. ನಂತರ ಇವರ ಮೇಲೆ ಅಸಾಲ್ಟ್ ಆಗಿರುವ ಆರೋಪ ಕೇಳಿಬಂದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

Advertisment

ಹಲ್ಲೆಗೊಳಗಾದ ಯುವಕರ ಮನೆಗೆ ಶೋಭ ಕರಂದ್ಲಾಜೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗಲಾಟೆಗೂ ಮುನ್ನ ಈ ಯುವಕರ ನಡುವೆ ಯಾವುದಾದ್ರೂ ವಿಚಾರಕ್ಕೆ ಗಲಾಟೆ ನಡೆದಿತ್ತಾ ಅನ್ನೋ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅನ್ಯಧರ್ಮದ ಯುವಕರು ಅಲ್ಲಾ ಹು ಅಕ್ಬರ್ ಅಂತ ಕೂಗುವಂತೆ ಧಮ್ಕಿ ಹಾಕಿರೋದು ಮಾತ್ರ ಅಕ್ಷಮ್ಯ.

ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment