newsfirstkannada.com

BREAKING: ರಾಮೇಶ್ವರಂ ಕೆಫೆ ಬಾಂಬರ್‌ NIA ಕೋರ್ಟ್​ಗೆ ಹಾಜರು; ಮೊದಲ ವಿಡಿಯೋ ರಿಲೀಸ್‌!

Share :

Published April 12, 2024 at 4:33pm

Update April 12, 2024 at 4:35pm

  ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಮಾಸ್ಟರ್ ಮೈಂಡ್‌!

  NIAನಿಂದ ಅಬ್ದುಲ್ ಮತೀನ್ ತಾಹಾ, ಮುಜವೀರ್ ಹುಸೇನ್ ಸಾಜೀಬ್‌ ಬಂಧನ

  ಕೋಲ್ಕತ್ತಾದಲ್ಲಿ ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತರಲು NIA ಸಿದ್ಧತೆ

ನವದೆಹಲಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರನನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ, ಮುಜವೀರ್ ಹುಸೇನ್ ಸಾಜೀಬ್‌ ಅನ್ನು ವಶಕ್ಕೆ ಪಡೆದಿದ್ದು, NIA ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.

ಕಳೆದ ಒಂದು ತಿಂಗಳಿಂದ ದೇಶದ ಹಲವೆಡೆ ಶೋಧ ಕಾರ್ಯ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ಕೋಲ್ಕತ್ತಾದಲ್ಲಿ ಯಶಸ್ವಿಯಾಗಿದೆ. ರಹಸ್ಯ ಕಾರ್ಯಾಚರಣೆ ಮಾಡಿ ಬಂಧಿಸಿರುವ ಇಬ್ಬರು ಆರೋಪಿಗಳನ್ನು NIA ಅಧಿಕಾರಿಗಳು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌.. ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ NIA; ಕಾರ್ಯಾಚರಣೆ ಹೇಗಿತ್ತು?

ಕೋಲ್ಕತ್ತಾದಲ್ಲಿ ಎನ್​ಐಎ ಅಧಿಕಾರಿಗಳು ಉಗ್ರರಾದ ಮುಜವೀರ್ ಹುಸೇನ್ ಸಾಜೀಬ್ ಹಾಗೂ ಅಬ್ದುಲ್​ ಮತೀನ್ ಬಂಧಿಸಿರೋ ವಿಡಿಯೋ ಬಹಿರಂಗವಾಗಿದೆ. ಸದ್ಯ NIA ಅಧಿಕಾರಿಗಳು ಕೋಲ್ಕತ್ತಾ ಕೋರ್ಟ್‌ಗೆ ಹಾಜರುಪಡಿಸಿ ಬಾಡಿ ವಾರಂಟ್ ಪಡೆಯಲಿದ್ದಾರೆ. ಇದಾದ ಮೇಲೆ ಉಗ್ರರನ್ನು ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಲಿದ್ದಾರೆ.

ಕಳೆದ ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಉಗ್ರ ಮುಜವೀರ್ ಹುಸೇನ್ ಸಾಜೀಬ್‌ ಬಾಂಬ್ ಇಟ್ಟು ಹೋಗಿದ್ದ. ಬೆಂಗಳೂರಿನಿಂದ ಪರಾರಿಯಾಗಿದ್ದ ಉಗ್ರ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಕೋಲ್ಕತ್ತಾ ಹೊರವಲಯದ ಪೂರ್ವ ಮಿಡ್ನಾಪುರ ದಿಘಾ ಎಂಬಲ್ಲಿ ಹೋಟೆಲ್‌ನಲ್ಲಿ ತಂಗಿದ್ದರು. ಎನ್‌ಐಎ ಅಧಿಕಾರಿಗಳು ಉಗ್ರರ ವಾಸ್ತವ್ಯವನ್ನು ಪತ್ತೆ ಹಚ್ಚಿ ರಹಸ್ಯ ಕಾರ್ಯಾಚರಣೆ ಮಾಡಿದ್ದಾರೆ. ಕೋಲ್ಕತ್ತಾದಲ್ಲಿ ಇಬ್ಬರು ಆರೋಪಿಗಳನ್ನು ಎನ್‌ಐಎ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ರಾಮೇಶ್ವರಂ ಕೆಫೆ ಬಾಂಬರ್‌ NIA ಕೋರ್ಟ್​ಗೆ ಹಾಜರು; ಮೊದಲ ವಿಡಿಯೋ ರಿಲೀಸ್‌!

https://newsfirstlive.com/wp-content/uploads/2024/04/Rameshwaram-Blast-Case.jpg

Load More