newsfirstkannada.com

ಟ್ರಾಫಿಕ್​​ನಿಂದ ಬೆಂಗಳೂರಿಗೆ ಭಾರೀ ಅವಮಾನ; ಈ ವಿಚಾರದಲ್ಲಿ ದೇಶದಲ್ಲೇ ನಂಬರ್ 1 ಸಿಲಿಕಾನ್​ ಸಿಟಿ!

Share :

Published February 5, 2024 at 6:16am

    ಸಿಲಿಕಾನ್​​​ಸಿಟಿಗೆ ಟ್ರಾಫಿಕ್​​ ಜಾಮ್​​ನಿಂದ ಕುಖ್ಯಾತಿ

    ದೇಶದಲ್ಲೇ ಮೊದಲ ಸ್ಥಾನ ಪಡೆದ ಸಿಲಿಕಾನ್​ ಸಿಟಿ

    ಟ್ರಾಫಿಕ್​​ ಸಮಸ್ಯೆಯಿಂದ ಬೆಂಗಳೂರಿನ ಜನ ಹೈರಾಣ

ಐಟಿ-ಬಿಟಿ, ಜವಳಿ ಉದ್ಯಮಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು ಈಗ ಟ್ರಾಫಿಕ್ ಸಿಟಿಯಾಗಿ ಬದಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯವಾಗಿ ಅದೆಷ್ಟೇ ವ್ಯವಸ್ಥೆ ಮಾಡಿದ್ರೂ ದಿನವಿಡೀ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಅಬ್ಬರ ಕಡಿಮೆಯಾಗ್ತನೇ ಇಲ್ಲ, ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ‌ ಅಪಖ್ಯಾತಿಗೆ ಒಳಗಾಗಿದೆ.

ಸಂಚಾರ ದಟ್ಟಣೆಯಲ್ಲಿ ಬೆಂಗಳೂರಿಗೆ ವಿಶ್ವದಲ್ಲೇ 6ನೇ ಸ್ಥಾನ

ಸಿಲಿಕಾನ್ ಸಿಟಿ ಬೆಂಗಳೂರಿನ ಅತೀ ದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್ ಜಾಮ್. ದೇಶದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆಯುಂಟಾಗುವ ನಗರಗಳಲ್ಲಿ ಸಿಲಿಕಾನ್‌ ಸಿಟಿ ಅಗ್ರಸ್ಥಾನ ಪಡೆದಿದ್ದು ವಿಶ್ವದಲ್ಲಿ ಆರನೇ ಸ್ಥಾನ ಪಡೆದಿದೆ. ವಿಶ್ವದ 55 ದೇಶಗಳ 387 ಮಹಾನಗರಗಳನ್ನು ಆಧರಿಸಿ ಡಚ್​​ ಜಿಯೋಲೊಕೇಶನ್ ಟೆಕ್ನಾಲಜಿ ಸಂಸ್ಥೆ ಟಾಮ್​ ಟಾಮ್ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ. ಟಾಪ್-10 ಪಟ್ಟಿಯಲ್ಲಿ ಭಾರತದ ಬೆಂಗಳೂರು ಹಾಗೂ ಪುಣೆ ಕ್ರಮವಾಗಿ 6 ಮತ್ತು 7ನೇ ಸ್ಥಾನ ಪಡೆದಿವೆ. ದೇಶದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು ಪುಣೆ 2ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ವಾಯುಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ರಾಷ್ಟ್ರ ರಾಜಧಾನಿ ನವದೆಹಲಿ ಟ್ರಾಫಿಕ್ ಜಾಮ್​​ನಲ್ಲಿ 44ನೇ ಸ್ಥಾನದಲ್ಲಿದ್ದು ಬೆಂಗಳೂರಿಗಿಂತ ಉತ್ತಮ ಸ್ಥಾನದಲ್ಲಿದೆ. ಇನ್ನು ಸಂಚಾರ ದಟ್ಟಣೆಯಲ್ಲಿ ಇಡೀ ವಿಶ್ವದಲ್ಲೇ ಲಂಡನ್​ ಸಿಟಿ ಮೊದಲ ಸ್ಥಾನ ಪಡೆದಿದೆ.

ಬೆಂಗಳೂರಲ್ಲಿ ಸರಾಸರಿ ವೇಗ ಗಂಟೆಗೆ 18 ಕಿ.ಮೀ!

ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನಗಳ ಸರಾಸರಿ ವೇಗ ಗಂಟೆಗೆ 18 ಕಿ.ಮೀಗಳಾಗಿವೆ. ಅಲ್ಲದೇ ನಗರದಲ್ಲಿ 10 ಕಿ.ಮೀ ಪ್ರಯಾಣಿಸಲು 28.10 ನಿಮಿಷ ಬೇಕು ಅಂತ ಟಾಮ್ ಟಾಮ್ ವರದಿ ಹೇಳಿದೆ. 2022ಕ್ಕೆ ಹೋಲಿಸಿದ್ರೆ ಈ ಪ್ರಮಾಣ ಒಂದು ನಿಮಿಷ ಕಡಿಮೆಯಾಗಿದೆ. ಬೆಂಗಳೂರಿಗರು ವರ್ಷಕ್ಕೆ 132 ಗಂಟೆಗಳ ಕಾಲ ವಾಹನ ದಟ್ಟಣೆಯಲ್ಲಿ ಕಳೆಯುವಂತಾಗಿದೆ ಅಂತ ವರದಿ ಹೇಳಿದೆ. ಇನ್ನು ಪೀಕ್​ ಹವರ್​ನಲ್ಲಿ 15 ನಿಮಿಷ ಹಾಗೂ ಸಂಜೆ ವೇಳೆ 19 ನಿಮಿಷ ಟ್ರಾಫಿಕ್ ಜಾಮ್​​ನಲ್ಲಿ ಕಳೆಯುತ್ತಾರೆ ಎಂದಿದೆ. ವೀಕೆಂಡ್​​ನಲ್ಲಂತೂ ವಾಹನಗಳ ಮೊರೆತ ಕಿವಿಗಡಚಿಕ್ಕುವಂತೆ ಇರುತ್ತೆ, ವಾಹನಗಳ ಅಬ್ಬರಕ್ಕೆ ಜನ ಪರದಾಡುವಂತಾಗಿದೆ.

ಇನ್ನು, ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದು ಟ್ರಾಫಿಕ್ ಜಾಮ್​ಗೆ ಕಾರಣ ಆಗಿದೆ. ಹಲವೆಡೆ ಕಿರಿದಾದ ರಸ್ತೆಗಳಿದ್ದು ಇವು ಸಂಚಾರಕ್ಕೆ ಸಾಕಾಗುತ್ತಿಲ್ಲ ಎನ್ನಲಾಗಿದೆ. ಅದೂ ಅಲ್ಲದೇ ಬಹುತೇಕ ವಾಹನ ಸವಾರರು ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪ ಇದೆ. ಮತ್ತೊಂದೆಡೆ ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಜಾಗೃತಿಯ ಕೊರತೆ ಇದ್ದು ಎಲ್ಲೆಂದರಲ್ಲಿ ವಾಹನ ನಿಲ್ಲಿಸೋ ಪರಿಪಾಠಕ್ಕೆ ಬ್ರೇಕ್ ಬೀಳಬೇಕಿದೆ. ಇನ್ನೊಂದೆಡೆ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿಯನ್ನ ನಿಯಂತ್ರಣ ಮಾಡಬೇಕು ಜೊತೆಗೆ ಟ್ರಾಫಿಕ್ ಹೆಚ್ಚಿರುವ ಸಿಗ್ನಲ್​​ಗಳಲ್ಲಿ ಮೇಲ್ಸೇತುವೆ ಹಾಗೂ ಸುರಂಗ ನಿರ್ಮಾಣ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.

ಇನ್ನೂ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಕೆಟ್ಟ ಟ್ರಾಫಿಕ್​ಗೆ ಹೆಸರಾಗಿದೆ. ಅಸಲಿಗೆ ಕಳೆದ ವರ್ಷದ ಸಮೀಕ್ಷೆಯಲ್ಲಿ ಬೆಂಗಳೂರು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಟ್ರಾಫಿಕ್‌ ಸಂದಣಿಯ ನಗರವೆಂದು ಪರಿಗಣಿಸಲ್ಪಟ್ಟಿತ್ತು. ಸದ್ಯ ಈ ಸಾಲಿನಲ್ಲಿ ಈ ಬಾರಿ 6ನೇ ಸ್ಥಾನಕ್ಕೆ ಇಳಿದಿರೋದು ಸಣ್ಣದೊಂದು ಸಮಾಧಾನ. ಟ್ರಾಫಿಕ್ ಸಮಸ್ಯೆ ಸರಿಪಡಿಸೋಕೆ ಸರಕಾರ ಕೂಡಾ ಆದ್ಯತೆ ಮೇರೆಗೆ ಪರಿಹಾರ ಹುಡುಕದೇ ಇದ್ರೆ ಭವಿಷ್ಯದಲ್ಲಿ ಸಮಸ್ಯೆ ಮತ್ತಷ್ಟು ಜಟಿಲವಾಗೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾಫಿಕ್​​ನಿಂದ ಬೆಂಗಳೂರಿಗೆ ಭಾರೀ ಅವಮಾನ; ಈ ವಿಚಾರದಲ್ಲಿ ದೇಶದಲ್ಲೇ ನಂಬರ್ 1 ಸಿಲಿಕಾನ್​ ಸಿಟಿ!

https://newsfirstlive.com/wp-content/uploads/2024/01/Traffic.jpg

Load More