newsfirstkannada.com

ಬರ್ತ್​​ಡೇ ಹೆಸರಲ್ಲಿ ರೇವ್​​ ಪಾರ್ಟಿ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಹೊರಬಿತ್ತು ಸ್ಫೋಟಕ ಮಾಹಿತಿ

Share :

Published May 23, 2024 at 6:05am

Update May 23, 2024 at 6:08am

    ಮಾದಕ ಲೋಕದಲ್ಲಿ ಮಿಂದೆದ್ದ ತೆಲುಗು ಸೆಲೆಬ್ರಿಟೀಸ್

    ನಟಿ ಹೇಮಾ ಜೊತೆ ನಶಾ ಲೋಕದಲ್ಲಿದ್ದ ಆಷಿ ರಾಯ್‌!

    ಸತ್ಯದ ತಲೆಮೇಲೆ ಹೊಡೆದಂತಿದೆ ಖ್ಯಾತ ನಟಿಯ ಮಾತು

ಬೆಂಗಳೂರಿನಲ್ಲಿ ತೆರೆದುಕೊಂಡಿದ್ದ ಮಾದಕ ಲೋಕದ ಕರಾಮತ್ತು ದಿನದಿನಕ್ಕೂ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ರೇವ್ ಪಾರ್ಟಿಗೆ ಹೋಗಿ ನಶೆಯಲ್ಲಿ ಮಿಂದೆದ್ದವರ ಇತಿಹಾಸ ಬಟಾಬಯಲಾಗ್ತಿದೆ. ಪಾರ್ಟಿಯಲ್ಲಿ ಸಿಕ್ಕಿಬಿದ್ದು ನೌಟಂಕಿ ಆಟ ಆಡಿದ್ದ ತೆಲುಗು ನಟಿ ಹೇಮಾಡ್ರಗ್ಸ್ ಸೇವಿಸಿದ್ರಾ? ಇಲ್ವಾ? ಅಂತ ಸಿಸಿಬಿ ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.. ಕಾರಣವೇನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

ಇದೀಗ ರೇವ್‌ ಪಾರ್ಟಿಯಲ್ಲಿ ಮತ್ತೊಬ್ಬ ನಟಿ ಕೂಡಾ ಭಾಗಿಯಾಗಿರೋದು ಬಯಲಾಗಿದೆ. ರಂಗಿನ ಲೋಕದಲ್ಲಿ ಮತ್ತಿನ ರಂಗೇರಿಸಿಕೊಂಡವರ ಅಸಲಿಯತ್ತು ಬಯಲಾಗುತ್ತಿದೆ. ಆಂಧ್ರ-ತೆಲಂಗಾಣದಿಂದ ಬಂದು ಬೆಂಗಳೂರಿನಲ್ಲಿ ಬಿಂದಾಸ್ ಆಗಿ ಡ್ರಗ್ಸ್ ಸೇವಿಸುತ್ತಿದ್ದವರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಬರ್ತ್‌ ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ಮಾಡಿ ಮಾದಕ ಲೋಕದಲ್ಲಿ ಮಿಂದೇಳುತ್ತಿದ್ದವರ ಅಸಲಿ ಮುಖ ತನಿಖೆಯಲ್ಲಿ ಬಯಲಾಗುತ್ತಲೇ ಇದೆ. ಇದೀಗ ಡ್ರಗ್ಸ್‌ ಪಾರ್ಟಿಯಲ್ಲಿ ಹೇಮಾ ಅಷ್ಟೇ ಅಲ್ಲ. ಮತ್ತೊಬ್ಬ ತೆಲುಗು ನಟಿಯೂ ಇದ್ರು ಅನ್ನೋದು ಬಯಲಾಗಿದೆ.

ಬೆಂಗಳೂರಿನ ಸಿಂಗೇನ ಅಗ್ರಹಾರದಲ್ಲಿರೋ ಜಿ.ಆರ್. ಫಾರ್ಮ್‌ನಲ್ಲಿ ಬ್ಯುಸಿನೆಸ್‌ಮೆನ್ ವಾಸು ಆಯೋಜಿಸಿದ್ದ ಪಾರ್ಟಿ ಮೇಲೆ ಸಿಸಿಬಿ ರೇಡ್ ಮಾಡಿತ್ತು. ಆಗ ಮತ್ತಿನ ಲೋಕದಲ್ಲಿ ಮಿಂದೇಳುತ್ತಿದ್ದ ನೂರಾರು ಯುವಕ-ಯುವತಿಯರು ಪೊಲೀಸರ ಬಲೆಗೆ ಬಿದ್ದಿದ್ರು. ಜೊತೆಗೆ ತೆಲುಗು ನಟಿ ಹೇಮಾ ಕೂಡಾ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ರು. ಪಾರ್ಟಿಯಲ್ಲಿ ಇದ್ರೂ ನಾನವಳಲ್ಲ. ನಾನು ಹೈದ್ರಾಬಾದ್ ಬಿಟ್ಟು ಹೋಗಿಲ್ಲ ಅಂತ ನೌಟಂಕಿ ಆಟ ಆಡಿದ್ದೂ ಬಯಲಾಗಿತ್ತು. ಇದೆಲ್ಲದರ ಮಧ್ಯೆ ಮಾದಕಲೋಕದ ಮೋಡಿಯೊಳಗೆ ಮತ್ತೊಬ್ಬ ತೆಲುಗು ನಟಿ ಆಷಿ ರಾಯ್‌ ಕೂಡಾ ಇದ್ರೂ ಎಂಬ ಅಂಶ ಬೆಳಕಿಗೆ ಬಂದಿದೆ.

ಡ್ರಗ್ಸ್ ಪಾರ್ಟಿಗೆ ಹೋಗಿದ್ದ ಆಷಿ ರಾಯ್‌ ಹೊಸ ಡ್ರಾಮಾ

ವಾಸು ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ನಟಿ ಆಷಿ ರಾಯ್ ಸಿಕ್ಕಿಬಿದ್ದಿರೋದು ತಡವಾಗಿ ಬೆಳಕಿಗೆ ಬಂದಿದೆ. ಆದ್ರೆ, ನಟಿ ಆಷಿ ರಾಯ್ ಮಾತ್ರ ನಾನು ಹೋಗಿದ್ದು ರೇವ್ ಪಾರ್ಟಿಯಲ್ಲ. ವಾಸು ಅಣ್ಣನ ಬರ್ತ್‌ಡೇ ಪಾರ್ಟಿ ಅಂತ ಹೇಳ್ಕೊಂಡಿದ್ದಾಳೆ. ಅದು ರೇವ್ ಪಾರ್ಟಿ ಅಂತಾ ಗೊತ್ತೇ ಇಲ್ಲ ಅಂತ ಸತ್ಯದ ತಲೆಮೇಲೆ ಹೊಡೆದಂತೆ ಮಾತಾಡಿದ್ದಾರೆ. ಸಿಂಗೇನ ಅಗ್ರಹಾರದಲ್ಲಿರೋ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ತೆಲುಗು ನಟಿ ಹೇಮಾ ಕೂಡಾ ಸಿಕ್ಕಿಬಿದ್ದಿದ್ರು. ಪೊಲೀಸರ ಮುಖಕ್ಕೆ ಮಂಕುಬೂದಿ ಎರಚಲು ಹೋಗಿ ಈಕೆಯ ಅಸಲಿ ಆಟ ಬಟಾಬಯಲಾಗಿತ್ತು. ಹೀಗೆ ನಾನು ಪಾರ್ಟಿಯಲ್ಲೇ ಇರ್ಲಿಲ್ಲ ಎಂದಿದ್ದ ನಟಿ ಡ್ರಗ್ಸ್‌ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಟಿಯ ನಶೆಯ ಆಟವನ್ನ ಬಯಲು ಮಾಡಲು ಸಿಸಿಬಿ ಸಜ್ಜಾಗಿದೆ.

ಹೇಮಾ ಡ್ರಗ್ಸ್ ಸೇವಿಸಿದ್ರಾ?

ತೆಲುಗು ನಟಿ ಹೇಮಾರ ಬ್ಲಡ್ ಸ್ಯಾಂಪಲ್‌ನ ಪಡೆದಿರೋ ಪೊಲೀಸರು ಮತ್ತೊಂದು ಟೆಸ್ಟ್‌ಗೆ ಮುಂದಾಗಿದ್ದಾರೆ. ಹೇಮಾಗೆ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸಲು ಸಿಸಿಬಿ ಸಿದ್ಧತೆ ನಡೆಸಿದೆ. ಕಳೆದ 1 ವರ್ಷದಿಂದ ಯಾವ ಯಾವ ರೀತಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಅಂತ ತಲೆಗೂದಲು ಟೆಸ್ಟ್ ಮೂಲಕ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಒಂದ್ವೇಳೆ ಡ್ರಗ್ಸ್ ಕನ್ಸ್ಯೂಮ್‌ ಮಾಡಿದ್ರೂ ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗೋದಿಲ್ಲ. ಹೇಮಾ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದ್ರೂ ಕೇಸ್‌ ದಾಖಲಾಗಲ್ಲ. ಒಟ್ಟಾರೆ, ರೇವ್‌ ಪಾರ್ಟಿಯ ರಹಸ್ಯ ದಿನದಿನಕ್ಕೂ ತೆರೆದುಕೊಳ್ಳುತ್ತಲೇ ಇದೆ. ಇದೀಗ ತೆಲುಗು ನಟಿಯರ ಮೋಜು-ಮಸ್ತಿಯ ಆಟಗಳು ಬಟಾಬಯಲಾಗುತ್ತಿವೆ. ಇದೀಗ ಮತ್ಯಾವೆಲ್ಲಾ ನಟ-ನಟಿಯರು ಡ್ರಗ್ಸ್‌ ಪಾರ್ಟಿಯ ನಶೆಯಲ್ಲಿ ಮಿಂದೆದ್ದಿದ್ರೂ ಅನ್ನೋದು ಸಿಸಿಬಿ ತನಿಖೆಯಿಂದ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ತ್​​ಡೇ ಹೆಸರಲ್ಲಿ ರೇವ್​​ ಪಾರ್ಟಿ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಹೊರಬಿತ್ತು ಸ್ಫೋಟಕ ಮಾಹಿತಿ

https://newsfirstlive.com/wp-content/uploads/2024/05/rev-party-5.jpg

Load More