newsfirstkannada.com

ಬೆಂಗಳೂರಲ್ಲಿ ಮಾದಕ ವಸ್ತುಗಳ ಜೊತೆಗೆ ರೇವ್​ ಪಾರ್ಟಿ! MLA ಪಾಸ್​ ಕೂಡ ಪತ್ತೆ! ಯಾರವರು ಗೊತ್ತಾ?

Share :

Published May 20, 2024 at 8:11am

Update May 20, 2024 at 8:21am

    ನಿನ್ನೆ ಸಂಜೆಯಿಂದ ಇಂದು ಬೆಳಗ್ಗಿನ ತನಕ ನಡೆದ ಪಾರ್ಟಿ

    ಬರ್ತ್ ಡೇ ಹೆಸರಿನ ರೇವ್​ ಪಾರ್ಟಿ ಅಡ್ಡೆ ಮೇಲೆ ಸಿಸಿಬಿ ದಾಳಿ

    ಸಿನಿಮಾ ನಟಿಯರು ಸೇರಿದಂತೆ ಅನೇಕರು ರೇವ್​ ಪಾರ್ಟಿಯಲ್ಲಿ ಪತ್ತೆ

ಬೆಂಗಳೂರು: ಸಿಸಿಬಿ ಪೊಲೀಸರು ಬೆಳ್ಳಂಬೆಳಗ್ಗೆ ರೇವ್​ ಪಾರ್ಟಿ ನಡೆಸುತ್ತಿದ್ದ ಅಡ್ಡದ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಎಂಡಿಎಂಎ ಮತ್ತು ಕೊಕೇನ್ ಮುಂತಾದ ಮಾದಕ ವಸ್ತುಗಳು ಪತ್ತೆಯಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್​ನಲ್ಲಿ ರೇವ್​ ಪಾರ್ಟಿ ಆಯೋಜಿಸಲಾಗಿತ್ತು. ಸನ್ ಸೆಟ್ ಟು ಸನ್ ರೈಸ್ ಎಂದು ಪಾರ್ಟಿ ಆಯೋಜನೆ ಮಾಡಲಾಗಿತ್ತು. ಬರ್ತ್​​​ಡೇ ಹೆಸರಿನಲ್ಲಿ ರೇವ್​ ಪಾರ್ಟಿ ನಡೆಸಲಾಗುತ್ತಿತ್ತು.

ಭಾನುವಾರ ಸಂಜೆ 5ರಿಂದ ಇಂದು ಬೆಳಗ್ಗೆ 6 ಗಂಟೆಯವರೆಗೆ ಪಾರ್ಟಿ ನಡೆಸುತ್ತಿದ್ದರು. ಈ ವಿಚಾರ ತಿಳಿದ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಎಂಎಲ್​ಎ ಪಾಸ್​ ಕೂಡ ಪತ್ತೆಯಾಗಿದೆ. ಮಾತ್ರವಲ್ಲದೆ, ಆಂಧ್ರ ಹಾಗೂ ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಪತ್ತೆಯಾಗಿದ್ದಾರೆ. ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಸೇರಿದಂತೆ 25ಕ್ಕೂ ಹೆಚ್ಚು ಯುವತಿಯರು ಪೊಲೀಸರ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಪಾರ್ಟಿಯಲ್ಲಿ ಎಂಎಲ್ಎ ಪಾಸ್ ಪತ್ತೆ

ಇನ್ನು ಒಂದು ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್ಎ ಪಾಸ್ ಪತ್ತೆಯಾಗಿದೆ. ಎಂಎಲ್ಎ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ. ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಕಾರುಗಳು ಕಾಣಿಸಿಕೊಂಡಿವೆ. ಐಶಾರಾಮಿ ಮರ್ಸಿಡಿಸ್‌ ಬೆಂಜ್ , ಜಾಗ್ವಾರ್, ಔಡಿ ಕಾರುಗಳು ಪತ್ತೆಯಾಗಿವೆ.

ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ

ಪಾರ್ಟಿ ಆಯೋಜನೆ ಮಾಡಿದ್ದು ಯಾರು?

ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲೀಕತ್ವದ ಫಾರ್ಮ್ ಹೌಸ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆಯೋಜಕರು ಪಾರ್ಟಿಗೆ ಆಂಧ್ರದಿಂದ ವಿಮಾನದಲ್ಲಿ ಯುವಕ ಯುವತಿಯರನ್ನು ಕರೆಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ ಎಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Breaking: ಬೆಂಗಳೂರಲ್ಲಿ ರೇವ್​ ಪಾರ್ಟಿ.. ಮಾದಕವಸ್ತು ಜೊತೆ ನಟಿ, ಮಾಡೆಲ್​, ಡಿಜೆಗಳು ಸಿಸಿಬಿ ವಶಕ್ಕೆ

ಸದ್ಯ ಘಟನೆ ಸಂಬಂಧ ಸಿಸಿಬಿ ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಾದಕ ವಸ್ತುಗಳ ಜೊತೆಗೆ ರೇವ್​ ಪಾರ್ಟಿ! MLA ಪಾಸ್​ ಕೂಡ ಪತ್ತೆ! ಯಾರವರು ಗೊತ್ತಾ?

https://newsfirstlive.com/wp-content/uploads/2024/05/rev-party.webp

Load More