/newsfirstlive-kannada/media/post_attachments/wp-content/uploads/2023/10/BNG_RAIN_1.jpg)
ಬೆಂಗಳೂರು: ಕೇರಳದಲ್ಲಿ ಧಾರಾಕಾರ ಮಳೆಯಿಂದ ಭೀಕರ ಭೂ-ಕುಸಿತ ಉಂಟಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲೂ ಜೋರಾಗಿ ಮಳೆ ಸುರಿಯುತ್ತಿದೆ.
ಇದನ್ನೂ ಓದಿ: ಕೇರಳ CM ಮನಸು ಮಾಡಿದ್ರೆ ಈ ದುರಂತ ತಪ್ಪಿಸಬಹುದಿತ್ತು; ಅಮಿತ್ ಶಾ ಶಾಕಿಂಗ್ ಮಾಹಿತಿ ಬಹಿರಂಗ
ಉದ್ಯಾನನಗರಿಯಲ್ಲಿ ಬೆಳಗಿನಿಂದಲೂ ಮೋಡ ಕವಿದ ವಾತಾವರಣ ವಿತ್ತು. ಅದರಂತೆ ಸಂಜೆ ಆಗುತ್ತಿದ್ದಂತೆ ನಗರದಲ್ಲಿ ವರುಣನ ಎಂಟ್ರಿಯಾಗಿದ್ದು ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನರು ಪರದಾಟ ನಡೆಸುತ್ತಿದ್ದಾರೆ. ಬೈಕ್​ ಸವಾರರು ಮಳೆಯಲ್ಲಿ ಸಿಕ್ಕು ತೊಂದರೆ ಅನುಭವಿಸಿದ್ದಾರೆ. ಮಳೆಯಿಂದ ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಾರು, ಬಸ್ ಸೇರಿ ಇತರೆ ವಾಹನಗಳ ಚಾಲಕರು ಸಮಸ್ಯೆಗೆ ಒಳಗಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/05/bng-rain18.jpg)
ಕೊಂಚ ಬಿಡುವು ತೆಗೆದುಕೊಂಡಿದ್ದ ಮಳೆ ಇದೀಗ ನಗರದ ಹಲವು ಪ್ರದೇಶಗಳಲ್ಲಿ ಧೋ ಎಂದು ಉಯ್ಯುತ್ತಿದೆ. ಇದರಿಂದ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಜೊತೆಗೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಪಾದಾಚಾರಿಗಳು ಮಳೆಯಲ್ಲಿ ಸಿಕ್ಕಿಕೊಂಡು ಸಂಕಷ್ಟ ಎದುರಿಸಿದ್ದಾರೆ. ನಗರದ ವಿವಿಪುರಂ, ಬಸವನಗುಡಿ, ಕಾರ್ಪೊರೇಷನ್, ಚಾಮರಾಜಪೇಟೆ, ಕಬ್ಬನ್ ಪಾರ್ಕ್​, ಸದಾಶಿವನಗರ, ಹಡ್ಸನ್ ಸರ್ಕಲ್, ಮೆಜೆಸ್ಟಿಕ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಮಳೆ ಜೋರಾಗಿಯೇ ಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us