Advertisment

ಬೆಂಗಳೂರಲ್ಲಿ ನಿಲ್ಲದ ಮಳೆ ಅವಾಂತರ.. ಆಟೋ, ಬೈಕ್‌ ಮೇಲೆ ಬಿದ್ದ ಮರ, ಮುಂದುವರೆದ ರಕ್ಷಣಾ ಕಾರ್ಯ

author-image
Bheemappa
Updated On
ಬೆಂಗಳೂರಲ್ಲಿ ನಿಲ್ಲದ ಮಳೆ ಅವಾಂತರ.. ಆಟೋ, ಬೈಕ್‌ ಮೇಲೆ ಬಿದ್ದ ಮರ, ಮುಂದುವರೆದ ರಕ್ಷಣಾ ಕಾರ್ಯ
Advertisment
  • ರಕ್ಷಣೆ ಎಂದ್ರೆ ನ್ಯೂಸ್​ ಫಸ್ಟ್​ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುತ್ತೆ
  • ನಗರದ ರಸ್ತೆಗಳು ಕೆಸರು ಗದ್ದೆಗಳಂತೆ ಆಗಿವೆ, ನಿತ್ಯ ಜನ ಪರದಾಟ
  • ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ನಲ್ಲಿ ನಿರಂತರ ಸಮಸ್ಯೆಗಳು

ಕಳೆದೊಂದು ವಾರದಿಂದ ಬೆಂಗಳೂರಿಗೆ ನಿ​ರಂತರವಾಗಿ​ ಮಳೆರಾಯನ ಅವಾಂತರ ವ್ಯಾಪಾರವನ್ನ ಸೃಷ್ಟಿ ಮಾಡ್ಕೊಂಡಿದ್ದಾನೆ. ನಗರದ ಅದೆಷ್ಟೋ ರೋಡ್​ಗಳು ಕೆಸರು ಗದ್ದೆಗಳಾಗಿದ್ದಾವೆ. ರಸ್ತೆಗಳಲ್ಲಿ ಹೊಳೆ​ ರೀತಿ ಮಳೆ ನೀರು ಹರಿಯುತ್ತಿದ್ರೂ ಕರುಣೆ ತೋರದೆ ಧೋ ಅಂತಾ ಸುರಿಯುತ್ತಿದ್ದಾನೆ ವರುಣ.

Advertisment

ದಿನ ಕಳೆಯುತ್ತಿದ್ದರು ಕಿಂಚಿತ್ತು ಕಡಿಮೆಯಾದ ಮಳೆ ನೀರು

ಬೆಳಗ್ಗೆ ಎದ್ದು ಜಮ್​ ಅಂತಾ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್ ಮುಂದೆ ಓಡಾಡ್ತಿದ್ದ ಜನ.. ಇದೀಗ NDRF.. SDRF ತಂಡಗಳ ಸಹಾಯ ಇಲ್ಲದೆ ಮನೆಯಿಂದ ಹೊರಗೆ ಕಾಲಿಡೋದಕ್ಕೂ ಅವರು ಪರದಾಡುವಂತಾಗಿದೆ. ಇನ್ನೇನು ಸರಿ ಮಾಡಿಬಿಡುತ್ತಿವಿ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿ 16 ಗಂಟೆ ಕಳೆದಿವೆ. ಆದರೂ ಕಿಂಚಿತ್ತು ನೀರು ಕಮ್ಮಿಯಾಗಿಲ್ಲ. ಅದೇ ನೀರು.. ಅದೇ ಬೋಟು.. ನಿವಾಸಿಗಳ ಪರದಾಟ ನಿಂತಿಲ್ಲ.

ಇದನ್ನೂ ಓದಿ: ಹೃದಯ, ಮೆದುಳು, ರಕ್ತನಾಳಗಳ ಆರೋಗ್ಯಕ್ಕೆ ಬೇಕು ಆಪಲ್​.. ಸುಂದರ ಸೇಬಿನ ಹೆಲ್ತ್​ ಟಿಪ್ಸ್​ ಇಲ್ಲಿವೆ!

publive-image

ಸಂಕಷ್ಟದಲ್ಲಿರೋರಿಗೆ ನ್ಯೂಸ್ ಫಸ್ಟ್​ ಸಿಬ್ಬಂದಿ ಸಹಾಯ ಅಸ್ತ

ಜನ ಪರ.. ಜನರ ರಕ್ಷಣೆ ಅಂತಾ ಬಂದ್ರೆ ನ್ಯೂಸ್​ ಫಸ್ಟ್​ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿರುತ್ತೆ. ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ನ ಜಲಕಂಟಕದಲ್ಲಿ ಸಿಲಿಕಿದ್ದ ತಾಯಿ ರಾಧಾ ಹಾಗೂ ಪುತ್ರ ಪ್ರದೀಪ್ ಕುಮಾರ್ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ಸಿಬ್ಬಂದಿಗೆ ನ್ಯೂಸ್​ ಫಸ್ಟ್​ ವರದಿಗಾರ ಗಣಪತಿ ಕ್ಯಾಮೆರಾ ಮ್ಯಾನ್ ಅವಿರಾಜ್ ಸಾಥ್ ನೀಡಿದ್ದಾರೆ. ರಕ್ಷಣೆ ಕಾರ್ಯದ ಬಳಿಕೆ ಪ್ರದೀಪ್ ಕುಮಾರ್ ಕೆಲ ಭಾವುಕ ನುಡಿಗಳನ್ನಾಡಿದ್ದಾರೆ.

Advertisment

ನಿಜವಾಗಲೂ ಇಂತಹ ಕಷ್ಟ ಬರುತ್ತೆ ಎಂದು ಊಹಿಸಿಕೊಂಡಿರಲಿಲ್ಲ. ಎಲ್ಲರೂ ಸೇರಿ ಸಹಾಯ ಮಾಡಿದ್ದಾರೆ. ಅವರಿಗೆಲ್ಲ ತುಂಬಾ ಧನ್ಯವಾದಗಳು.

ಪ್ರದೀಪ್ ಕುಮಾರ್, ಅಪಾರ್ಟ್​ಮೆಂಟ್​ ನಿವಾಸಿ

ಮಲ್ಲೇಶ್ವರಂನಲ್ಲಿ ಮಳೆ ರಭಸಕ್ಕೆ ಬಿದ್ದ ಮರ!

ಮಳೆ ಆರ್ಭಟಕ್ಕೆ ಮಲ್ಲೇಶ್ವರಂನಲ್ಲಿ ಬೃಹತ್ ಮರ ಧರೆಗುರುಳಿದೆ. ಆಟೋ & ಬೈಕ್‌ಗಳ ಮೇಲೆ ಮರ ಬಿದ್ದಿದ್ದು, ಸದ್ಯ ಪಾಲಿಕೆ ಸಿಬ್ಬಂದಿ ಮರ ತೆರವು ಮಾಡೋದ್ರಲ್ಲಿ ನಿರತರಾಗಿದ್ದರು. ಇನ್ನೂ ಮಳೆ ಬರುತ್ತಿದ್ದ ಹಿನ್ನೆಲೆ ನಾಯಂಡಹಳ್ಳಿ ಮೋರಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮೆಟ್ರೋ ಪ್ರಯಾಣಿಕರು ನಿಲ್ದಾಣದ ಮೆಟ್ಟಿಲುಗಳ ಮೇಲೆ ಕುಳಿತು ಪರದಾಡಿದರು.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಭರ್ಜರಿ ಆಲ್​ರೌಂಡರ್ ಪ್ರದರ್ಶನ.. ಸೆಮಿಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ 

Advertisment

publive-image

ಮಳೆಯಿಂದಾದ ಅವಾಂತರಗಳಿಂದ ಎಚ್ಚೆತ್ತ ಬಿಬಿಎಂಪಿ!

ಬೆಂಗಳೂರಿನಲ್ಲಿ ಮಳೆಯ ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ ವಿವಿಧ ತಂಡ ರಚಿಸಿದೆ. ಅರಣ್ಯ ವಿಭಾಗದ 30 ತಂಡ, 1 ಬೆಟಾಲಿಯನ್ NDRF ತಂಡ, SDRFನ 3 ತಂಡಗಳು, ಅಗ್ನಿಶಾಮಕ ದಳದ 5 ತಂಡ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ 30 ತಂಡದ ಜೊತೆಗೆ ನಿವಾಸಿಗಳ ಸ್ಥಳಾಂತರಿಸಲು 16 ಬೋಟ್​​ಗಳ ನಿಯೋಜನೆ ಮಾಡಲಾಗಿದೆ. ನೀರು ಹೊರಹಾಕಲು 25 ಪಂಪ್​ಸೆಟ್​. ನೀರುಗಾಲುವೆ ಸ್ಥಳದಲ್ಲಿ ಹೂಳೆತ್ತಲು 30 JCBಗಳು ಕಾರ್ಯ ನಿರ್ವಹಿಸಲಿದೆ.

ಮುಂದುವರೆಯಲಿದೆ ಮಳೆಯ ಅಬ್ಬರ.. ಶಾಲೆಗಳಿಗೆ ರಜೆ

ಹವಾಮಾನ ಇಲಾಖೆ ನಗರದಲ್ಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಮುನ್ನೆಚ್ಚರಿಕೆಯಾಗಿ ಇಂದು ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಬೆಂಗಳೂರು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಕ್ಕೆ ಡಿ.ಸಿ ಜಗದೀಶ್ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಅಸಮಾಧಾನ ಹೊರ ಹಾಕಿದೆ. ಏನೇ ಹೇಳಿ, ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬಿದ್ದಿರೋದು ಒಂದ್ಕಡೆಯಾದ್ರೆ, ಬಿಬಿಎಂಪಿ ಅಧಿಕಾರಿಗಳು, ಸರ್ಕಾರ ಮುಂದೆ ಏನು​ ಮಾಡುತ್ತಿದ್ದಾರೆ ಅನ್ನೋದೇ ಯಕ್ಷ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment