newsfirstkannada.com

ಸಿಲಿಕಾನ್​ ಸಿಟಿಗೆ ತಂಪೆರೆದ ವರುಣ.. ಇಂದು ರಾತ್ರಿ ಭರ್ಜರಿ ಮಳೆ ಬೀಳುವ ಸಾಧ್ಯತೆ

Share :

Published May 3, 2024 at 3:02pm

    ಮೋಡ ಕವಿದ ವಾತಾವರಣದ ಜೊತೆ ಮಳೆ ಹನಿಯ ಸಿಂಚನ

    ಬಿಸಿಲಿನ ತಾಪದಿಂದ ಬಸವಳಿದ ಬೆಂಗಳೂರಿಗೆ ವರುಣನ ಕೃಪೆ

    ಸಂಜೆ ಆಗ್ತಿದ್ದಂತೆ ದಟ್ಟವಾದ ಮೋಡ, ಜೋರು ಮಳೆ ಸಾಧ್ಯತೆ

ಬೆಂಗಳೂರು: ಅಂತು, ಇಂತೂ ಸಿಲಿಕಾನ್​ ಸಿಟಿಗೆ ವರುಣರಾಯ ಕೃಪೆ ತೋರಿದ್ದಾನೆ. ಸೂರ್ಯನ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ನಗರದ ನಿವಾಸಿಗಳಿಗೆ ಕೊನೆಗೂ ಕೊಂಚ ರಿಲೀಫ್ ಸಿಕ್ಕಿದ್ದು ತುಂತುರು ಮಳೆಯಿಂದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು 12 ಗಂಟೆ ನಂತರ ಮೋಡ ಮುಸುಕಿದ ವಾತಾವರಣ ಕಂಡುಬಂತು. ನಗರದೆಲ್ಲೆಡೆ ಜನರು ಮಳೆ ಬರುತ್ತದೆಂದು ಆಕಾಶದೆಡೆಗೆ ನೋಡುತ್ತಿದ್ದರು. ಅದರಂತೆ ಸಣ್ಣ ಪ್ರಮಾಣದಲ್ಲಿ ಗುಡುಗು ಶಬ್ಧ ಮಾಡಿತು. ನಂತರ ತುಂತುರು ಮಳೆ ಬಂದಿದ್ದರಿಂದ ಜನರೆಲ್ಲ ಖುಷಿಯಾಗಿದ್ದಾರೆ. ಮೆಜೆಸ್ಟಿಕ್, ಸುಧಾಮನಗರ, ಟೌನ್ ಹಾಲ್, ಮಾರ್ಕೆಟ್​, ಹೆಬ್ಬಾಳ, ರಾಜಾಜಿನಗರ, ಕಾರ್ಪೋರೇಶನ್, ಗುಡ್ಡದಹಳ್ಳಿ, ಸುಬ್ಬಯ್ಯ ಸರ್ಕಲ್, ರಾಜಾಜಿನಗರ, ರೇಸ್​ಕೋರ್ಸ್, ಶಾಂತಿನಗರ, ಎಸ್​​​ಪಿ ರೋಡ್ ಸೇರಿದಂತೆ ವಿವಿಧೆಡೆ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿದೆ.

ಇದನ್ನೂ ಓದಿ: ಸಚಿವ ಎಂ.ಬಿ ಪಾಟೀಲ್ ಸಹೋದರನಿಗೆ ರಕ್ಷಣೆ ಇಲ್ವಾ? ಜೀವ ಬೆದರಿಕೆಯ ಸಾಕ್ಷ್ಯ ಬಿಡುಗಡೆ 

ಬೇಸಿಗೆ ಹಿನ್ನೆಲೆಯಲ್ಲಿ ಜನರು ಬಿಸಿಲಿನಿಂದ ಸಾಕಾಗಿ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ನಿನ್ನೆ ಸಂಜೆ ಹಲವೆಡೆ ತುಂತುರು ಮಳೆ ಸುರಿದಿತ್ತು. ಇಂದು ಕೂಡ ಬೆಂಗಳೂರಿನ ಹಲವೆಡೆ ಮೋಡ ಕವಿದ ವಾತಾವರಣ ಜೊತೆಗೆ ಮಳೆ ಆಗಮನವಾಗಿದೆ. ಇನ್ನು ಮೋಡ ದಟ್ಟವಾಗುತ್ತಿದ್ದು ಸೂರ್ಯ ಮಾಯವಾಗಿದ್ದಾನೆ. ರಾತ್ರಿ ವೇಳೆಗೆ ಇನ್ನು ಜೋರಾಗಿ ಮಳೆ ಬರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿಗೆ ತಂಪೆರೆದ ವರುಣ.. ಇಂದು ರಾತ್ರಿ ಭರ್ಜರಿ ಮಳೆ ಬೀಳುವ ಸಾಧ್ಯತೆ

https://newsfirstlive.com/wp-content/uploads/2024/05/BNG_RAIN.jpg

Load More