ಅಂತಿಮ ಹಂತಕ್ಕೆ ಬಂದು ನಿಂತ ರೇಣುಕಾಸ್ವಾಮಿ ಕೊಲೆ ಪ್ರಕರಣ
ತನಿಖಾಧಿಕಾರಿಗಳ ಕೈ ಸೇರಿದ ಹೈದ್ರಾಬಾದ್ CFSLನಿಂದ ಬಂದ ವರದಿ
ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಕಾರ್ಯಕ್ಕೆ ಮತ್ತಷ್ಟು ವೇಗ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಾಯುತ್ತಿದ್ದ ವರದಿ ಸದ್ಯ ಅವರ ಕೈ ಸೇರಿದೆ. ಚಾರ್ಜ್ಶೀಟ್ ಸಿದ್ಧತೆಯಲ್ಲಿರುವ ತನಿಖಾಧಿಕಾರಿಗಳು CSFL ಅಂದ್ರೆ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದರು. ಸದ್ಯ ಅದು ತನಿಖಾಧಿಕಾರಿಗಳ ಕೈಸೇರಿದೆ. ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು 13 ಮಂದಿ ಆರೋಪಿಗಳ ಮೊಬೈಲ್ ರಿಟ್ರೀವ್ಗೆ ಹೈದ್ರಾಬಾದ್ನ CSFLಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಬಂದಿರುವ ವರದಿಯನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
ಇದನ್ನೂ ಓದಿ: VIDEO: ಸಿದ್ದರಾಮಯ್ಯ ನಿವಾಸದ ಮುಂದೆ ವೃದ್ಧ ಆಕ್ರೋಶ; ಪೊಲೀಸರು ಒಂದು ಕ್ಷಣ ತಬ್ಬಿಬ್ಬು..!
13 ಮಂದಿಯ ಮೊಬೈಲ್ ಸೇರಿ ಕೆಲವು ಸಿಸಿಟಿವಿ ಡಿವಿಆರ್ ರಿಟ್ರೀವ್ಗೆ ಕೂಡ ಹೈದ್ರಾಬಾದ್ನ CFSLಗೆ ತನಿಖಾ ತಂಡ ಕಳುಹಿಸಿತ್ತು. ಘಟನೆ ಸಂಬಂಧ, ಪಟ್ಟಣಗೆರೆ ಶೆಡ್ ಸಿಸಿಟಿವಿ ದೃಶ್ಯಾವಳಿಗಳನ್ನು ಆರೋಪಿಗಳು ಡಿಲೀಟ್ ಮಾಡಿದ್ದರು. ಸದ್ಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ರಿಟ್ರೀವ್ ಮಾಡಿದೆ. ಅಲ್ಲದೇ ದರ್ಶನ್ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳ ವಾಟ್ಸಾಪ್ ಚಾಟಿಂಗ್ ಕೂಡ ರಿಟ್ರೀವ್ ಆಗಿದೆ.
ಇದನ್ನೂ ಓದಿ: KAS ಪರೀಕ್ಷೆ ಮತ್ತೆ ಮುಂದೂಡಿಕೆ ಆಗುತ್ತಾ..? ಯಾಕೆ ಗೊಂದಲ? ಬೆಂಗಳೂರಲ್ಲಿ ಇಂದು ಮಹತ್ವದ ಬೆಳವಣಿಗೆ
ಪ್ರಕರಣ ಸಂಬಂಧ ತನಿಖಾಧಿಕಾರಿಗಳ ಕೈಗೆ ಶೇಕಡಾ 100ರಷ್ಟು ಟೆಕ್ನಿಕಲ್ ಎವಿಡೆನ್ಸ್ ರಿಪೋರ್ಟ್ ಕೈಸೇರಿದೆ. ಈಗಾಗಲೇ ರಾಜ್ಯದ ಎಫ್ಎಸ್ಎಲ್ ನಿಂದ ಮೃತ ರೇಣುಕಾಸ್ವಾಮಿ ರಕ್ತ ಆರೋಪಿಗಳ ಬಟ್ಟೆ ಮೇಲಿನ ರಕ್ತ ಮ್ಯಾಚ್ ಆಗಿದ್ದು , ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್.ಎಸ್.ಎಲ್ನ ವರದಿ ಮ್ಯಾಚ್ ಆಗಿದೆ. ಅಂದ್ರೆ ಗಂಭೀರ ಹಲ್ಲೆ ನಡೆಸಿ, ಕರೆಂಟ್ ಶಾಕ್ನಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವು ಆಗಿರುವ ಬಗ್ಗೆ ಎರಡು ಕಡೆಯ್ಲೂ ಮ್ಯಾಚ್ ಆಗಿದೆ. ಸಿಡಿಆರ್ ಅನಾಲಿಸಿಸ್ನಲ್ಲಿ 17 ಮಂದಿ ಆರೋಪಿಗಳು ಸಮನಾ ಉದ್ದೇಶದಿಂದ ಪದೇ ಪದೇ ಒಬ್ಬರಿಗೊಬ್ಬರು ಮಾತನಾಡಿರೋದು ಕೂಡ ಪಕ್ಕಾ ಆಗಿದೆ
ಸದ್ಯ CFSL ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದ್ದು, ಆರೋಪಿಗಳ ಮೊಬೈಲ್ನಲ್ಲಿ ಇಂಟರ್ ಎಕ್ಸ್ಚೇಂಜ್ ಆಗಿರೋ ಚಾಟಿಂಗ್ ಮಿರರ್ ಇಮ್ಯಾಜಿನ್ ಕಾರ್ಯ ಮತ್ತು ಆರೋಪಿಗಳ ನಡುವಿನ ವಾಟ್ಸಾಪ್ ಚಾಟಿಂಗ್ ಹಾಗೂ ಸಿಸಿಟಿವಿ ದೃಶ್ಯವಾಳಿಗಳು ಪ್ರಮುಖ ಸಾಕ್ಷವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ