ವರ್ತೂರು ಕೆರೆಯಲ್ಲಾದ ಕಹಿ ಘಟನೆಯನ್ನ ನೆನಪಿಸುತ್ತೆ ಈ ಕಾಕ್​​ಟೈಲ್​​.. ಆ ಘಟನೆ ಬಗ್ಗೆ ಕೇಳಿದ್ರೆ ಬೇಸರವಾಗುತ್ತೆ

author-image
AS Harshith
Updated On
ವರ್ತೂರು ಕೆರೆಯಲ್ಲಾದ ಕಹಿ ಘಟನೆಯನ್ನ ನೆನಪಿಸುತ್ತೆ ಈ ಕಾಕ್​​ಟೈಲ್​​.. ಆ ಘಟನೆ ಬಗ್ಗೆ ಕೇಳಿದ್ರೆ ಬೇಸರವಾಗುತ್ತೆ
Advertisment
  • ಈ ಕಾಕ್​ಟೈಲ್​ ಕುಡಿಯೋ ಮುಂಚೆ ವರ್ತೂರು ಕೆರೆ ನೆನಪಾಗುತ್ತೆ
  • ‘ವರ್ತೂರ್​ ಓವರ್​ ಫ್ಲೋ’ ಕಾಕ್​​ಟೈಲ್​ ಕುಡಿದಿದ್ದೀರಾ? ಅದರ ಹಿನ್ನೆಲೆ ಏನು?
  • ಬೆಂಗಳೂರಿನ ರೆಸ್ಟೋರೆಂಟ್​​ವೊಂದರಲ್ಲಿ ಸಿಗುತ್ತಿದೆ ‘ವರ್ತೂರ್​ ಓವರ್​ ಫ್ಲೋ’ ಕಾಕ್​​ಟೈಲ್​

ವರ್ತೂರು ಕೆರೆಯ​​ ಮಾಲಿನ್ಯದ ಅವಾಂತರದ ಹಿನ್ನೆಲೆಯನ್ನು ಇಟ್ಟುಕೊಂಡು ನಗರದ ರೆಸ್ಟೋರೆಂಟ್​​ವೊಂದು ‘ವರ್ತೂರ್​ ಓವರ್​ ಫ್ಲೋ’ ಎಂದು ಪಾನೀಯಾಗೆ ಹೆಸರಿಟ್ಟ ಬಗ್ಗೆ ನಿಮಗೆ ಗೊತ್ತಾ?. ಹಾಗಿದ್ರೆ ಈ ಸ್ಟೋರಿ ಓದಿ. ಸಖತ್​ ಕುತೂಹಲಕಾರಿಯಾಗಿದೆ.

ಮೈಸೂರಿನಲ್ಲಿ ಹುಟ್ಟಿದ ಪಾಕವೊಂದು ‘ಮೈಸೂರ್​ ಪಾಕ್’​ ಆಗಿ, ವಿಶ್ವದ ಅನೇಕರು ಬೆಸ್ಟ್​ ಸಿಹಿ ತಿಂಡಿ ಎಂದೆನಿಸಿಕೊಂಡಿರೋದು ಗೊತ್ತೇ ಇದೆ. ಅದೇ ರೀತಿ ಕೆಲವೊಂದು ಆಹಾರಗಳು, ಪಾನೀಯಗಳು ಆಯಾಯ ದೇಶದ, ಊರಿನ ಹಿನ್ನಲೆಯನ್ನು ಸಾರುತ್ತವೆ. ಅದೇ ರೀತಿ ವರ್ತೂರ್​ ಲೇಕ್​ 2023ರಲ್ಲಿ ಮಾಲಿನ್ಯದಿಂದಾಗಿ ಸುಮಾರು 25 ಸಾವಿರ ಮೀನುಗಳು ಮಾರಣ ಹೋಮವಾದವು. ಈ ವಿಚಾರವಿಟ್ಟುಕೊಂಡು ನಗರದ ರೆಸ್ಟೋರೆಂಟ್​ವೊಂದು ‘ವರ್ತೂರು ಓವರ್​ ಫ್ಲೋ’ ಎಂದು ಪಾನೀಯಗೆ ಹೆಸರಿಟ್ಟಿದೆ.


">April 7, 2024


">April 7, 2024

ವರ್ತೂರ್​ ಲೇಕ್​​ ಮಾಲಿನ್ಯ ವಿಚಾರದಿಂದ ಕುಖ್ಯಾತಿ ಪಡೆದಿದೆ. ಮಳೆಯ ಸಮಯದಲ್ಲಿ ಮಾತ್ರ ಈ ಕೆರೆ​ ತುಂಬುತ್ತದೆ. ಸರ್ಕಾರದ ಕಳಪೆ ಕಾಮಗಾರಿಯಿಂದ ಈ ಕೆರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗಿದೆ. 2023ರಲ್ಲಿ ವರ್ತೂರ್​​ ಕೆರೆಯಲ್ಲಿ ಸುಮಾರು 25 ಸಾವಿರ ಮೀನುಗಳು ಸಾವನ್ನಪ್ಪಿದ್ದವು.


">April 7, 2024


">April 7, 2024

ಇದನ್ನೂ ಓದಿ:ಮಧ್ಯರಾತ್ರಿ ಕುಡುಕನ ಅವಾಂತರ.. ಬೆಂಚ್​ ಸೆರೆಗೆ ಕುತ್ತಿಗೆ ಸಿಲುಕಿಕೊಂಡು ಒದ್ದಾಟ.. ಆತನನ್ನು ಕಾಪಾಡಿದ್ದು ಯಾರು ಗೊತ್ತಾ?

ಊಟ ಎಂಬ ರೆಸ್ಟೋರೆಂಟ್​​ನಲ್ಲಿ ವಿಶೇಷವಾದ ಕಾಕ್​ಟೈಲ್ ಅನ್ನು ಸಿದ್ಧಪಡಿಸುತ್ತದೆ. ಅದಕ್ಕೆ ‘ವರ್ತೂರ್​ ಓವರ್​ ಫ್ಲೋ’ ಎಂದು ಹೆಸರಿಟ್ಟಿದೆ. ಇದು 2023ರ ವರ್ತೂರು ಕೆರೆಯ ಕಹಿ ಘಟನೆಯನ್ನು ನೆನಪಿಸುತ್ತದೆ. ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ ಊಟ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ‘ವರ್ತೂರ್ ಓವರ್​ ಫ್ಲೋ’ ಕಾಕ್​ಟೈಲ್​ ಆರ್ಡರ್​ ಮಾಡಿ ಅದರ ಫೋಟೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ‘ವರ್ತೂರ್​ ಓವರ್​ ಫ್ಲೋ’ ಕಾಕ್​ಟೈಲ್​ ಬಗ್ಗೆ ​ಭಾರೀ ಚರ್ಚೆಯಾಗುತ್ತಿದೆ. ಅನೇಕರು ವಿಶೇಷ ಕಾಕ್​ಟೈಲ್​ ಹೆಸರನ್ನು ಗಮನಸಿ ಬಗೆ ಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment