newsfirstkannada.com

ಬೈಕ್​​ ಸವಾರರೇ ಹುಷಾರ್​​.. ಬೆಂಗಳೂರಲ್ಲಿ ರಸ್ತೆ ಚೆನ್ನಾಗಿದ್ರೂ ಬಿದ್ದು ಕಾಲು ಮುರ್ಕೋತೀರಾ!

Share :

Published January 27, 2024 at 6:35am

    ಜಲ್ಲಿ ಕಲ್ಲು ಸಾಗಣಿಕೆ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ

    ಲೋಡ್ ಇದ್ದಾಗ ಹೊದಿಕೆ ಮುಚ್ಚಬೇಕು ಎಂಬ ನಿಯಮಾಗೆ ಅಸಡ್ಡೆ

    ಜಲ್ಲಿಕಲ್ಲು ಬಿದ್ದಿರೋದು ಕಾಣದೇ ಸ್ಕಿಡ್ ಆಗಿ ಬೀಳ್ತಿರುವ ಸವಾರರು

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ವಾಹನ‌ ಸವಾರರ ಸಂಕಷ್ಟ ಒಂದಾ ಎರಡಾ ಒಂದು ಟ್ರಾಫಿಕ್ ಜಾಮ್. ಮತ್ತೊಂದು ಕಡೆ ಹದಗೆಟ್ಟ ರಸ್ತೆಯಿಂದ ನಿತ್ಯ ಪರದಾಟ. ಅದೇಷ್ಟೋ ಬೈಕ್ ಸವಾರರು ಕಿಲ್ಲರ್ ಗುಂಡಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಬೈಕ್ ಸವಾರರಿಗೆ ಹೊಸ ತಲೆನೋವೊಂದು ಶುರುವಾಗಿದೆ.

ಕಿಲೋ‌ಮೀಟರ್​ ಗಟ್ಟಲೇ ಜಾಮ್. ಗಂಟೆಗಟ್ಟಲೆ ಟ್ರಾಫಿಕ್ ಬೆಂಗಳೂರಿನ ಯಾವ ದಿಕ್ಕಿಗೂ ಹೋದ್ರು ವಾಹನ ಸವಾರರಿಗೆ ಸಮಸ್ಯೆ ತಪ್ತಿಲ್ಲ. ಹದಗೆಟ್ಟ ರಸ್ತೆ. ಕಿಲ್ಲರ್ ಗುಂಡಿಗಳು ಬೈಕ್ ಸವಾರನ್ನ ಜೀವವನ್ನೇ ನುಂಗುತ್ತಿದ್ರೆ. ಜನ ಹಿಡಿಶಾಪ ಹಾಕ್ತಾನೇ ಇದ್ದಾರೆ. ಇದರ ನಡುವೆ ಬೈಕ್ ಸವಾರರಿಗೆ ಜಲ್ಲಿ-ಕಲ್ಲು ಹೊತ್ತೊಯ್ಯುವ ಲಾರಿಗಳು ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರ್ತಿವೆ.
ಸಿಲಿಕಾನ್‌ ಸಿಟಿಯಲ್ಲಿ ಜಲ್ಲಿ-ಕಲ್ಲು, ಎಂ ಸ್ಯಾಂಡ್ ಸಾಗಟ ಮಾಡುವ ಲಾರಿಗಳು ನಾನಾ ಅವಾಂತರಕ್ಕೆ‌ ಕಾರಣ.

ಸಿಲಿಕಾನ್‌ ಸಿಟಿಯಲ್ಲಿ ನಿತ್ಯ ಸಾವಿರಾರು ಲೋಡ್ ಲಾರಿಗಳು ಓಡಾಡ್ತಾವೆ. ಒವರ್ ಲೋಡ್ ಮಾಡೋದಲ್ಲದೆ, ಲೋಡ್ ತುಂಬಿದ ಲಾರಿಗೆ ಹೊದಿಕೆ‌ ಮುಚ್ಚದೇ ರಸ್ತೆಯ ತುಂಬೆಲ್ಲಾ ಜಲ್ಲಿ-ಕಲ್ಲುಗಳು ಬಿದ್ದು ಅವಾಂತರ ಆಗ್ತಿದೆ. ಹಂಪ್ಸ್, ಇಳಿಜಾರು, ಹಾಗೂ ಅಪ್​ನಲ್ಲಿ ಲಾರಿಯಿಂದ ಜಲ್ಲಿಕಲ್ಲು ರಸ್ತೆಗೆ ಬೀಳ್ತಿವೆ.‌ ಇದರಿಂದ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಗಾಯ ಮಾಡ್ಕೊಳ್ತಿದ್ದಾರೆ.‌ ಕೆಲವರು ಪ್ರಾಣವನ್ನೇ ಬಿಟ್ಟಿದ್ದಾರೆ.‌ ಲಾರಿಯ ಲೋಡ್ ಸಾಮರ್ಥ್ಯ ಎಷ್ಟಿದೆ ಜೊತೆಗೆ ಕವರ್ ಮಾಡಿದ್ದಾರಾ ಇಲ್ವಾ ಅಂತ ಟ್ರಾಫಿಕ್‌ ಪೊಲೀಸರು ಚೆಕ್ ಮಾಡಿ, ಕ್ರಮಕೈಗೊಳ್ಳಬೇಕು, ಆದರೆ ಬೆಂಗಳೂರಿನಲ್ಲಿ ಬಹುತೇಕ ಲಾರಿ ಚಾಲಕರು ಈ ನಿಯಮ ಪಾಲಿಸ್ತಿಲ್ಲ.‌ ಪೊಲೀಸರು ಇತ್ತ ಗಮನ ಹರಿಸಿ, ಆಗ್ತಿರುವ ಅವಾಂತರಕ್ಕೆ ಕಡಿವಾಣ ಹಾಕಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​ ಸವಾರರೇ ಹುಷಾರ್​​.. ಬೆಂಗಳೂರಲ್ಲಿ ರಸ್ತೆ ಚೆನ್ನಾಗಿದ್ರೂ ಬಿದ್ದು ಕಾಲು ಮುರ್ಕೋತೀರಾ!

https://newsfirstlive.com/wp-content/uploads/2024/01/bng-67.jpg

Load More