newsfirstkannada.com

ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

Share :

Published May 16, 2024 at 10:05am

Update May 16, 2024 at 12:16pm

    ಡು ಆರ್​​ ಡೈ ಕದನಕ್ಕೂ ಮುನ್ನ ಆರ್​​ಸಿಬಿಗೆ ಹಿನ್ನಡೆ

    ಆರ್​​ಸಿಬಿ ಕ್ಯಾಂಪ್​ನಲ್ಲಿ ಟೆನ್ಶನ್.. ಟೆನ್ಶನ್​​.. ಟೆನ್ಶನ್​​

    ಹಿಂದಿನ ತಪ್ಪನ್ನ ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ.?

ಡು ಆರ್​​ ಡೈ ಕದನಕ್ಕೂ ಮುನ್ನ ಹಿನ್ನಡೆಯ ಮೇಲೆ ಹಿನ್ನಡೆ ಆರ್​​ಸಿಬಿಗೆ ಎದುರಾಗಿತ್ತು. ಆ ದೇವರೇ ಆರ್​​ಸಿಬಿಯನ್ನ ಕಾಪಾಡಬೇಕು ಅನ್ನೋ ಪರಿಸ್ಥಿತಿ ಈಗ​ ನಿರ್ಮಾಣವಾಗಿದೆ. ಅಭಿಮಾನಿಗಳ ವಲಯದಲ್ಲೂಂತೂ ಪ್ರಾರ್ಥನೆ ಜೋರಾಗಿದೆ. ಆರ್​​ಸಿಬಿ ಇಷ್ಟೆಲ್ಲಾ ಸಂಕಷ್ಟಕ್ಕೆ ಸಿಲುಕಿರೋದಕ್ಕೆ ಕಾರಣ ಏನ್​ ಗೊತ್ತಾ? ಆ ಒಂದು ರನ್​ ಮತ್ತು ಆ ಒಂದು ಸೋಲು.

ಕ್ರಿಕೆಟ್​ ಲೋಕದಲ್ಲೀಗ ಒಂದೇ ಸುದ್ದಿ.. ಚೆನ್ನೈ vs ಬೆಂಗಳೂರು ಮಹಾಸಮರವೇ ಟಾಕ್​ ಆಫ್ ದ ಟೌನ್​​..! ಸೋಷಿಯಲ್​ ಮೀಡಿಯಾದಲ್ಲಂತೂ ಕ್ವಾಲಿಫೈಯರ್​ ಲೆಕ್ಕಾಚಾರ ಜೋರಾಗಿದೆ. ಆರ್​​ಸಿಬಿ-ಸಿಎಸ್​ಕೆ ಯಾವ ತಂಡ ಪ್ಲೇ ಆಫ್​ಗೆ ಎಂಟ್ರಿ ಕೊಡುತ್ತೆ ಅನ್ನೋ ಕುತೂಹಲದ ಪ್ರಶ್ನೆ ಎಲ್ಲರ ಮನದಲ್ಲಿ ಕಾಡ್ತಿದೆ. ಸತತ 5 ಪಂದ್ಯಗಳನ್ನ ಗೆದ್ದಿರುವ ಆರ್​​​ಸಿಬಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಪ್ಲೇ ಆಫ್​ ರೇಸ್​​ಗೆ ಎಂಟ್ರಿ ಕೊಟ್ಟಿದೆ. ಸತತ ಸೋಲುಗಳಿಂದ ಕೆಂಗೆಟ್ಟಿದ್ದ ಆರ್​​ಸಿಬಿಯ ರಣರೋಚಕ ಕಮ್​ಬ್ಯಾಕ್​ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಇದೀಗ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಭರ್ಜರಿಯಾಗಿ ಗೆದ್ದು ಪ್ಲೇ ಆಫ್​ಗೆ ಎಂಟ್ರಿ ಕೊಡೋ ಸವಾಲು ತಂಡದ ಮುಂದಿದೆ.

ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..

ಆರ್​​ಸಿಬಿ ಕ್ಯಾಂಪ್​ನಲ್ಲಿ ಟೆನ್ಶನ್.. ಟೆನ್ಶನ್​​.. ಟೆನ್ಶನ್.​​.!
ಡು ಆರ್​ ಡೈ ಫೈಟ್​​ಗೆ ಇನ್ನೂ 3 ದಿನ ಬಾಕಿಯಿದೆ. ಅದಕ್ಕೂ ಮುನ್ನವೇ ಆರ್​​ಸಿಬಿ ಕ್ಯಾಂಪ್​ನಲ್ಲಿ ಆತಂಕ ಶುರುವಾಗಿದೆ. ಡು ಆರ್​ ಡೈ ಕದನದಲ್ಲಿ ಬಿಗ್​ ಮಾರ್ಜಿನ್​ನಲ್ಲಿ ಗೆಲ್ಲಲೇಬೇಕಾಗಿರೋದು ಮೊದಲೇ ಒತ್ತಡ ಹೆಚ್ಚಿಸಿದೆ. ಜೊತೆಗೆ ಸ್ಫೋಟಕ ಬ್ಯಾಟ್ಸ್​ಮನ್​ ವಿಲ್​ ಜಾಕ್ಸ್​ ತವರಿಗೆ ಹಾರಿರೋದು ಹಿನ್ನಡೆಯಾಗಿದೆ. ಇದ್ರ ನಡುವೆ ಈ ಪಂದ್ಯಕ್ಕೆ ಮಳೆ ಭೀತಿ ಕೂಡ ಶುರುವಾಗಿದೆ. ಮಳೆ ಬಂದು ಪಂದ್ಯ ರದ್ದಾದ್ರೆ, ಆರ್​​ಸಿಬಿ ಪ್ಲೇ ಆಫ್​ ಕನಸು ಕೊಚ್ಚಿ ಹೋಗಲಿದೆ.

ಆ 1 ರನ್​, ಆ ಒಂದು ಸೋಲು.. ಸಂಕಷ್ಟದಲ್ಲಿ ಆರ್​​ಸಿಬಿ
ಎಪ್ರಿಲ್​ 21.. ಈ ದಿನಾಂಕ ಸದ್ಯ ಆರ್​​ಸಿಬಿ ಅಭಿಮಾನಿಗಳನ್ನ ಬಿಡದೇ ಕಾಡ್ತಿದೆ. ಅಂದು ಭಾರತದ ಕ್ರಿಕೆಟ್​ ಕಾಶಿ ಈಡನ್​ಗಾರ್ಡನ್​ನಲ್ಲಿ ನಡೆದ ಪಂದ್ಯದಲ್ಲಿ ಆರ್​​ಸಿಬಿ ಕೊದಲೆಳೆ ಅಂತರದಲ್ಲಿ ಎಡವಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಕೆಕೆಆರ್​ 6 ವಿಕೆಟ್​ ನಷ್ಟಕ್ಕೆ 222 ರನ್​ಗಳಿಸಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ 221 ರನ್​ಗಳಿಸಲಷ್ಟೇ ಶಕ್ತವಾಯ್ತು. ರಣ ರೋಚಕ ಪಂದ್ಯದಲ್ಲಿ 1 ರನ್​​​ ಅಂತರದಲ್ಲಿ ಆರ್​​ಸಿಬಿ ಸೋಲಿಗೆ ಶರಣಾಯ್ತು. ಆ ಒಂದು ಪಂದ್ಯದಲ್ಲಿ ಆರ್​​ಸಿಬಿ ಬ್ಯಾಟರ್ಸ್​ ಒಂದು ರನ್​ಗಳಿಸಿದ್ರೆ, ಆರ್​​ಸಿಬಿ ಬೌಲರ್ಸ್​​ ಒಂದೇ ಒಂದು ಎಕ್ಸ್​​ಟ್ರಾ ರನ್​ ನೀಡದಿದ್ರೆ, ಆರ್​​ಸಿಬಿ ಇಂದು ಇಂತಹ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಪ್ಲೇ ಆಫ್​ ಎಂಟ್ರಿಗಾಗಿ ಪರದಾಡಬೇಕಾಗಿರಲಿಲ್ಲ.. ದೇವರ ಮೇಲೆ ಭಾರವನ್ನೂ ಹಾಕೋ ಪರಿಸ್ಥಿತಿ ಬರ್ತಾ ಇರಲಿಲ್ಲ..

ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್​.. ಹೈದರಾಬಾದ್​ ಸೋತರೆ ಆರ್​ಸಿಬಿಗೆ ಭಾರೀ ಲಾಭ.. ಅದು ಹೇಗೆ..?

ತಪ್ಪನ್ನು ತಿದ್ದಿಕೊಂಡಿದ್ರೆ ಇಂತಹ ಪರಿಸ್ಥಿತಿ ಬರ್ತಿತ್ತಾ?
ಮೊದಲ 8 ಪಂದ್ಯಗಳಲ್ಲಿ ಆರ್​​ಸಿಬಿ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಈ ಸೋಲಿಗೆ ಕಾರಣ ಇಡೀ ತಂಡ. ಪರ್ಫೆಕ್ಟ್​ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯಲ್ಲೇ ಆರ್​​ಸಿಬಿ ಎಡವಿತ್ತು. ಡುಪ್ಲೆಸಿ, ಮ್ಯಾಕ್ಸ್​ವೆಲ್​ ಕಳಪೆಯಾಟ, ದುರ್ಬಲ ನಾಯಕತ್ವ, ಮಿಡಲ್​ ಆರ್ಡರ್​ ಬ್ಯಾಟಿಂಗ್​ ವೈಫಲ್ಯ, ಎಲ್ಲಕ್ಕಿಂತ ಹೆಚ್ಚಾಗಿ ದುಬಾರಿ ಬೌಲಿಂಗ್​​ ತಂಡಕ್ಕೆ ಮಾರಕವಾಗಿತ್ತು. ಈ ತಪ್ಪುಗಳನ್ನ ಆಗಲೇ ತಿದ್ದಿಕೊಂಡು ಒಂದೇ ಒಂದು ಪಂದ್ಯ ಆಗಲೇ ಗೆದ್ದಿದ್ರೆ, ಈಗ ಕಥೆ ಬೇರೆನೆ ಇರ್ತಿತ್ತು.

ಆಗಿದ್ದೆಲ್ಲಾ ಆಯ್ತು.. ಇದೀಗ ಡು ಆರ್​ ಡೈ ರಣಕಣ ಸಜ್ಜಾಗಿದೆ. ಮಸ್ಟ್​​​ ವಿನ್​ ಗೇಮ್​​ಗೆ ಮಳೆಯ ಭೀತಿ ಕೂಡ ಶುರುವಾಗಿದೆ. ಬಲಿಷ್ಟ ಸಿಎಸ್​ಕೆ ತಂಡದ ಎದುರು ಬಿಗ್​ ಮಾರ್ಜಿನ್​ ವಿಕ್ಟರಿ ಬೇಕಾಗಿದೆ. ಸಾಲಿಡ್​​ ಪರ್ಫಾಮೆನ್ಸ್​ ನೀಡ್ತಿರೋದ್ರಿಂದ, ಆರ್​​ಸಿಬಿ ಟೀಮ್​ಗೆ ಗೆಲ್ಲೋದು ದೊಡ್ಡ ವಿಚಾರವೇನಿಲ್ಲ. ಜೊತೆಗೆ ಅದೃಷ್ಟ ಕೈ ಹಿಡಿದ್ರೆ, ಪ್ಲೇ ಆಫ್​ಗೆ ಆರ್​​ಸಿಬಿ ಎಂಟ್ರಿ ಪಕ್ಕಾ.

ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

https://newsfirstlive.com/wp-content/uploads/2024/05/RCB-45.jpg

Load More