newsfirstkannada.com

ಸ್ಯಾಂಟ್ರೋ ರವಿ ಕತೆ ಆಯ್ತು.. ಈಗ ಸೈಕಲ್ ರವಿ ಕಿತಾಪತಿ.. ಇಬ್ಬರು ಸಹಚರರು, ಓರ್ವ ಡೀಲರ್ ಅರೆಸ್ಟ್..!   

Share :

Published February 17, 2024 at 7:11am

    5 ಲಕ್ಷ ರೂಪಾಯಿ ನೀಡಲು ನಿರಾಕರಿಸಿದ್ದ ಟ್ರಾವೆಲ್ಸ್ ವ್ಯವಹಾರದ ವ್ಯಕ್ತಿ

    ಸದ್ಯ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು

    ಇನ್ನೂ 5 ಲಕ್ಷ ಹಣವನ್ನ ನೀನು ಕೊಡಬೇಕು ಎಂದು ಪಟ್ಟು ಹಿಡಿದಿದ್ದ

ಬೆಂಗಳೂರು: ಮೀಟರ್ ಬಡ್ಡಿ ದಂಧೆಯಲ್ಲಿ ವ್ಯಕ್ತಿಯೋರ್ವನಿಂದ ಸಾಲ ವಸೂಲಿಗೆ ಮುಂದಾಗಿದ್ದ ಸೈಕಲ್ ರವಿಯ ಇಬ್ಬರು ಸಹಚರರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಟ್ರಾವೆಲ್ಸ್ ವ್ಯವಹಾರ ಮಾಡುವ ರಂಗನಾಥ್​ ಎನ್ನುವ ವ್ಯಕ್ತಿಯು ಮಂಜುನಾಥ್ ಎಂಬುವವರಿಂದ  23 ಲಕ್ಷ ರೂಪಾಯಿಗಳನ್ನು ಬಡ್ಡಿ ಲೆಕ್ಕದಲ್ಲಿ ಸಾಲ ಪಡೆದಿದ್ದರು. ಹಲವು ದಿನಗಳ ನಂತರ ಬಡ್ಡಿ ಸಮೇತ 23 ಲಕ್ಷ ಹಣ ಹಿಂದಿರುಗಿಸಿದ್ದರು. ಆದರೆ  ಮಂಜುನಾಥ್ ನಾನು ಮೀಟರ್​ ಬಡ್ಡಿಗೆ ಹಣ ಕೊಟ್ಟಿರೋದು ಇನ್ನು, 5 ಲಕ್ಷ ರೂಪಾಯಿ ಕೊಡುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಆದರೆ ಈ ಹಣ ಕೊಡಲು ನಿರಾಕರಿಸಿದ್ದಕ್ಕೆ ಅದನ್ನು ವಸೂಲಿ ಮಾಡಲು ಸೈಕಲ್ ರವಿ ಸಹಚರನಾದ ಉಮೇಶ್​ಗೆ ಡೀಲ್ ಒಪ್ಪಿಸಿದ್ದ.

ಅದರಂತೆ ಉಮೇಶ್​ ತನ್ನ ಸಹಚರನಾದ ಸುರೇಶ್​ನನ್ನ ಕರೆದುಕೊಂಡು ಮೀಟರ್​ ಬಡ್ಡಿ ವಸೂಲಿಗೆ ಮುಂದಾಗಿದ್ದರು. ಅಲ್ಲದೇ ರಂಗನಾಥ್​ಗೆ ಜೀವ ಬೆದರಿಕೆ ಕೂಡ ಹಾಕಿದ್ದರು. ಈ ಸಂಬಂಧ ಸೈಕಲ್ ರವಿಯ ಇಬ್ಬರು ಸಹಚರರು ಹಾಗೂ ಹಣ ನೀಡಿದ್ದ ಮಂಜುನಾಥ್​​ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರ್​ಆರ್ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಯಾಂಟ್ರೋ ರವಿ ಕತೆ ಆಯ್ತು.. ಈಗ ಸೈಕಲ್ ರವಿ ಕಿತಾಪತಿ.. ಇಬ್ಬರು ಸಹಚರರು, ಓರ್ವ ಡೀಲರ್ ಅರೆಸ್ಟ್..!   

https://newsfirstlive.com/wp-content/uploads/2024/02/BNG_CYCLE_RAVI.jpg

Load More