newsfirstkannada.com

DK ಬ್ರದರ್ಸ್​ಗೆ ಟಕ್ಕರ್ ಕೊಡಲು ಮಾಸ್ಟರ್ ಪ್ಲಾನ್.. ಗೌಡ್ರ ಜತೆ ಸಿಪಿವೈ ರಹಸ್ಯ ಮಾತುಕತೆ!

Share :

Published February 13, 2024 at 11:05am

Update February 13, 2024 at 4:29pm

    ಈ ಇಬ್ಬರಲ್ಲಿ ಯಾರಾದ್ರೂ ಕಣಕ್ಕಿಳಿದರೂ ಗೆಲುವು ಸುಲಭವಾಗಲಿದೆ

    ಗೆಲ್ಲಿಸಿಕೊಂಡು ಬರುತ್ತೇವೆ ಎಂದು ದೇವೇಗೌಡರಿಗೆ ಹೇಳಿದ ಸಿಪಿವೈ

    JDS ಅಭ್ಯರ್ಥಿ ಕಣಕ್ಕಿಳಿಸುವ ಹಿಂದಿದೆ CPY ರಾಜಕೀಯ ಲೆಕ್ಕಾಚಾರ

ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಸುರೇಶ್​ಗೆ ಟಕ್ಕರ್ ಕೊಡಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್​ BJPಗೆ ಬೇಡ. ಜೆಡಿಎಸ್​ನ ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದ್ರೆ ಒಳ್ಳೆಯದು ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಬಳಿ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಫೆ.11 ರ ತಡರಾತ್ರಿ ಹೆಚ್​.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸತತ 2ಗಂಟೆಗಳಿಗೂ ಅಧಿಕ ಸಮಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ BJPಗೆ ಬೇಡ. ಜೆಡಿಎಸ್​ನ ಪ್ರಬಲ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಘೋಷಣೆ ಮಾಡಬೇಕು. ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಕಣಕ್ಕಿಳಿದರೆ ಸೂಕ್ತ ಎಂದಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಸ್ಪರ್ಧಿಸದಿದ್ದರೇ ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರನ್ನು ಅಖಾಡಕ್ಕೆ ಇಳಿಸಬೇಕು. ಈ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದರೆ ಗೆಲುವು ಸುಲಭವಾಗಬಹುದು ಎಂದಿದ್ದಾರೆ.

ಇದನ್ನು ಓದಿ: ತಡರಾತ್ರಿ ದಿಢೀರ್ ದೊಡ್ಡಗೌಡರನ್ನ ಭೇಟಿ ಮಾಡಿದ ಸಿಪಿವೈ.. 2 ಗಂಟೆಗೂ ಹೆಚ್ಚು ಕಾಲ ‘ರಹಸ್ಯ ಮಾತುಕತೆ’

ಕುಮಾರಸ್ವಾಮಿ ಅಥವಾ ಮಂಜುನಾಥ್ ಅವರು ಎಲೆಕ್ಷನ್​​ಗೆ ನಿಂತರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರುತ್ತೇವೆ. ಯೋಗೇಶ್ವರ್ ಅವರು ಈ ರೀತಿ ಯೋಚನೆ ಮಾಡಿರುವುದರ ಹಿಂದೆ ಒಂದು ಗುಟ್ಟು ಇದೆ. ಅದೇ ಒಂದು ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಬಿಗ್ ಪ್ಲಾನ್ ಮಾಡಿಕೊಂಡಿದ್ದಾರೆ. ಎಲೆಕ್ಷನ್​​ನಲ್ಲಿ ಡಿ.ಕೆ ಸುರೇಶ್​ ಸೋತರೆ ಡಿ.ಕೆ.ಸಹೋದರರಿಗೆ ಮಣ್ಣು ಮುಕ್ಕಿಸಿದಂತೆ ಆಗುತ್ತದೆ. ಇನ್ನೊಂದು ಕಡೆ ಕುಮಾರಸ್ವಾಮಿ ಗೆದ್ದು ಸಂಸದನಾದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತನಗೆ ಸಿಗುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಜೆಡಿಎಸ್​​ನವರಿಗೆ ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸಲಿ ಎಂದು ದೇವೇಗೌಡರ ಬಳಿ ಯೋಗೇಶ್ವರ್ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK ಬ್ರದರ್ಸ್​ಗೆ ಟಕ್ಕರ್ ಕೊಡಲು ಮಾಸ್ಟರ್ ಪ್ಲಾನ್.. ಗೌಡ್ರ ಜತೆ ಸಿಪಿವೈ ರಹಸ್ಯ ಮಾತುಕತೆ!

https://newsfirstlive.com/wp-content/uploads/2024/02/CPY_DKS_HDD.jpg

Load More