/newsfirstlive-kannada/media/post_attachments/wp-content/uploads/2024/11/Car-Accident-Sandhya-Case.jpg)
ಬೆಂಗಳೂರು: ರಸ್ತೆ ದಾಟುವಾಗ ಗುದ್ದಿದ ಬೆಂಜ್ ಕಾರು. ಪುಡಿ, ಪುಡಿಯಾದ ದೇಹದಿಂದ ಹಾರಿ ಹೋದ ಪ್ರಾಣ ಪಕ್ಷಿ. ಯಾವುದೇ ತಪ್ಪು ಮಾಡದ ಸಂಧ್ಯಾ ದುರಂತ ಅಂತ್ಯ ನಿಜಕ್ಕೂ ಘನ ಘೋರವಾದದ್ದು. ಪ್ರತಿಭಾವಂತೆ ಸಂಧ್ಯಾ ಸಾವಿನ ಕೇಸ್‌ನಲ್ಲಿ ಕೋಟಿ, ಕೋಟಿ ದುಡ್ಡಿನ ಧಿಮಾಕು ಎದ್ದು ಕಾಣುತ್ತಿದೆ. ಸಂಧ್ಯಾ ಕುಟುಂಬಸ್ಥರು ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.
ಕುಡಿದು ಕಾರು ಚಲಾಯಿಸಿ ಸಂಧ್ಯಾ ಸಾವಿಗೆ ಕಾರಣವಾದ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ FIR ಮತ್ತು ತನಿಖೆ ಮೇಲೆ ಮೃತ ಸಂಧ್ಯಾ ಕುಟುಂಬಸ್ಥರು ಅನುಮಾನಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯ ಬಗ್ಗೆ ಟೀಕೆಗೆ ಗುರಿಯಾದ ಮೇಲೆ ಪೊಲೀಸರು ಆರೋಪಿ ಧನುಷ್ ಅನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಂಠ ಪೂರ್ತಿ ಕುಡಿದು ಅಮಾಯಕ ಮಹಿಳೆಯ ಕೊ*ಲೆ ಮಾಡಿದ ಹಂತಕನ ಹಿನ್ನೆಲೆ ಏನು ಅನ್ನೋದು ಈ ಕೇಸ್‌ನಲ್ಲಿ ಬಹಳ ಮುಖ್ಯವಾಗಿದೆ. ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುವವರ ಒಬ್ಬನೇ ಪ್ರೀತಿಯ ಪುತ್ರ. ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್‌ಗೆ ಸೇರಿದ್ದು ಎನ್ನಲಾಗಿದೆ.
ಟ್ರಾವೆಲ್ಸ್ ಮಾಲೀಕರಾಗಿರುವ ಪರಮಶಿವಯ್ಯ ಅವರು ಅತ್ಯಂತ ಪ್ರೀತಿಯಿಂದ ಒಬ್ಬನೇ ಮಗನನ್ನು ಬೆಳೆಸಿದ್ದಾರೆ. ಅದೇ ಮಮತೆಯಲ್ಲಿ ಐಷಾರಾಮಿ ಬೆಂಜ್ ಕಾರನ್ನು ಕೊಡಿಸಿದ್ದಾರೆ. ಏಕೈಕ ಪುತ್ರನ ಮೇಲಿದ್ದ ಅತಿಯಾದ ಪ್ರೀತಿ ಕೂಡ ಈ ದುರಂತಕ್ಕೆ ಕಾರಣವಾಗಿರಬಹುದು.
ಇದನ್ನೂ ಓದಿ: ಸಂಧ್ಯಾ ಕೇಸ್; ಹಂತಕನ ತಂದೆಯಿಂದ ಕಾಂಪ್ರಮೈಸ್ಗೆ ಯತ್ನ; ಎಷ್ಟು ಕೋಟಿ ಆಫರ್ ಕೊಟ್ರು ಗೊತ್ತಾ?
ಯಾರು ಈ ಪರಮಶಿವಯ್ಯ?
ಬೆಂಜ್ ಕಾರು ಅಪಘಾತಕ್ಕೆ ಕಾರಣವಾದ ಆರೋಪಿ ಧನುಷ್ ತಂದೆ ಮೂಲತಃ ರಾಮನಗರ ಜಿಲ್ಲೆಯವರು. ಪರಮಶಿವಯ್ಯ ಅವರ ಹುಟ್ಟೂರು ಮಾಗಡಿ ತಾಲ್ಲೂಕಿನ ಅಲಶೆಟ್ಟ ಗ್ರಾಮ. ಮಾಗಡಿಯಿಂದ ಬೆಂಗಳೂರಿಗೆ ಬಂದಿರುವ ಪರಮಶಿವಯ್ಯ ಅವರ ಕುಟುಂಬ ಕಳೆದ 20 ವರ್ಷಗಳಿಂದ ಪಾಪರೆಡ್ಡಿಪಾಳ್ಯದಲ್ಲಿ ನೆಲೆಸಿದ್ದಾರೆ.
ಪರಮಶಿವಯ್ಯ ಅವರು 9 ವರ್ಷಗಳ ಕಾಲ SRS ಟ್ರಾವೆಲ್ಸ್‌ನಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡಿದ್ದರು. ಬಳಿಕ 2015ರಲ್ಲಿ LV ಟ್ರಾವೆಲ್ಸ್ ಶುರು ಮಾಡಿದ್ದಾರೆ. ಎಲ್‌ವಿ ಟ್ರಾವೆಲ್ಸ್‌ನಿಂದ ಪರಮಶಿವಯ್ಯ ಅವರು ಕೋಟ್ಯಾಂತರ ರೂಪಾಯಿ ಸಂಪಾದಿಸಿ ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಸಾವಿಗೆ ಸಿಗುತ್ತಾ ನ್ಯಾಯ?; ಒಂದಲ್ಲ, ಎರಡಲ್ಲ, ಪೊಲೀಸರ ನಡೆ ಸುತ್ತ ಹಲವು ಅನುಮಾನಗಳು!
ಬೆಂಗಳೂರಿನ ದೊಡ್ಡ, ದೊಡ್ಡ ಟ್ರಾವೆಲ್ಸ್‌ಗಳಲ್ಲಿ LV ಟ್ರಾವೆಲ್ಸ್ ಕೂಡ ಒಂದು. ಪಾಪರೆಡ್ಡಿಪಾಳ್ಯದಲ್ಲಿ ಇವರ LV ಟ್ರಾವೆಲ್ಸ್ ಇದೆ. ಟ್ರಾವೆಲ್ಸ್ ಮಾಲೀಕ ಪರಮಶಿವಯ್ಯ ಅವರು ನಾಗರಭಾವಿಯ ದೀಪಾ ಕಾಂಪ್ಲೆಕ್ಸ್ ಬಳಿ ಐಷಾರಾಮಿ ಮನೆ, ಸೈಟ್, ಕಾಂಪ್ಲೆಕ್ಸ್ ಕೂಡ ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ