/newsfirstlive-kannada/media/post_attachments/wp-content/uploads/2025/02/INTEREST-ON-FEES.jpg)
ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ದೊಡ್ಡದಾಗಿ ಸುದ್ದಿಯಾಗುತ್ತಿರುವುದು ಮೈಕ್ರೋ ಫೈನಾನ್ಸ್ಗಳ ಕಾಟ. ಬಡ್ಡಿ ದಂಧೆಯಿಂದ ಹಲವಾರು ಜನರು ಜೀವ ಕಳೆದುಕೊಂಡಿರುವ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಬಡ್ಡಿ ದಂಧೆಯ ಹುಚ್ಚಾಟ ಶಾಲೆಗಳಿಗೂ ತಟ್ಟಿದೆಯಾ ಅನ್ನೋ ಅನುಮಾನ ಈಗ ಶುರುವಾಗಿದೆ. ಯಾಕಂದ್ರೆ ಮಕ್ಕಳ ಫೀಸ್ ಉಳಿಸಿಕೊಂಡಿದ್ದಕ್ಕೆ ಅದಕ್ಕೆ ಬಡ್ಡಿ ಹಾಕಲು ಬೆಂಗಳೂರಿನ ಕೆಲವು ಪ್ರತಿಷ್ಠಿತ ಶಾಲೆಗಳು ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಪ್ರತಿಷ್ಠಿತ ವಿಬ್ ಗಯಾರ್ ಶಾಲೆ ಹೈಸ್ಕೂಲ್ ಈ ರೀತಿಯ ಬಡ್ಡಿ ದಂಧೆಗೆ ಇಳಿದಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಮಕ್ಕಳ ಫೀಸ್ ಉಳಿಸಿಕೊಂಡಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಇಂಟ್ರೆಸ್ಟ್ ಹಾಕುತ್ತಿದೆಯಂತೆ. ತಿಂಗಳಿಗೆ ಸುಮಾರು 3%ನಷ್ಟು ಬಡ್ಡಿ ಹಾಕಿ ವರ್ಷಕ್ಕೆ ಶೇಕಡಾ 36 ರಷ್ಟು ಬಡ್ಡಿ ಸಮೇತ ಫೀಸ್ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಲಾ ಮಕ್ಕಳ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ:‘ರಾತ್ರಿ ಆಗಿದ್ದೇನು..?’ ಬಾಗಪ್ಪ ಹರಿಜನ್ ಕೇಸ್ ಬಗ್ಗೆ ಅಸಲಿ ಮಾಹಿತಿ ಬಿಚ್ಚಿಟ್ಟ ಎಸ್ಪಿ
ಪೋಷಕರಿಗೆ ಬಡ್ಡಿ ಸಮೇತ ಸ್ಕೂಲ್ ಫೀಸ್ ಕಟ್ಟುವಂತೆ ಟಾರ್ಚರ್ ನೀಡ್ತಿರುವ ಆಡಳಿತ ಮಂಡಳಿ, ಬಡ್ಡಿ ಸಹಿತ ಫೀಸ್ ಕಟ್ಟದಿದ್ದರೆ ನಿಮ್ಮ ಮಕ್ಕಳ ಪರೀಕ್ಷೆಯ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ಧಮ್ಕಿ ಹಾಕುತ್ತಿದೆಯಂತೆ. ಈ ಬಾರಿ ಎಸ್ಎಸ್ಎಲ್ಸಿ ಎಕ್ಸಾಂ ಬರೆಯಲಿರುವ ವಿದ್ಯಾರ್ಥಿಗಳು ಪೋಷಕರು ಈ ವಿಚಾರ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಶಾಲಾ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಹೋಗಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಬ್ ಗಯಾರ್ ಶಾಲೆಯ ಮೇಲೆ ಇಂತಹದೊಂದು ಆರೋಪ ಕೇಳಿ ಬಂದಿದೆ. ಶಾಲೆಯ ಕ್ರಮವನ್ನು ಖಂಡಿಸಿ ವಿವಿಧ ಪೋಷಕರು ಕೆಲ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸೇರಿ ಶಾಲೆಯ ಮುಂದೆ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಷಕರ ಮನವೊಲಿಕೆಗೆ ಶಾಲಾ ಮಂಡಳಿ ಯತ್ನಿಸಿದೆ. ಒಳಗೆ ಕೂತು ಶುಲ್ಕ ಸಮ್ಯೆ ಬಗೆಹರಿಸಿಕೊಳ್ಳುವುದಾಗಿ ಮನವಿ ಮಾಡಿದ್ದಾರೆ.
ಆದರೆ ಇದಕ್ಕೆ ಒಪ್ಪದ ಪೋಷಕರು ಶಾಲಾ ಶುಲ್ಕಕ್ಕೆ ಬಡ್ಡಿ ವಿಧಿಸುವ ನಿಯಮ ಯಾವ ಕಾನೂನಿನಲ್ಲಿದೆ ತೋರಿಸಿ ಎಂದು ಪಟ್ಟು ಹಿಡಿದಿದ್ದಾರೆ. ಫೀಸ್ ಕಟ್ಟಲು ಬಂದಾಗ ಬಡ್ಡಿ ಕಟ್ಟಲೇಬೇಕು ಎಂದು ಹೇಳಿದಿರಿ. ಈಗ ಸಂಧಾನಕ್ಕೆ ಕರೆಯುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ