/newsfirstlive-kannada/media/post_attachments/wp-content/uploads/2025/02/BNG_Sheshadripuram_Station_3.jpg)
ಬೆಂಗಳೂರು: ಸುಮಾರು 133 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಮೊದಲ ಲಾಕ್ ಅಫ್ ಡೆತ್ ಘಟನೆಯಿಂದ ಸಿಎಂ ರಾಜೀನಾಮೆಗೆ ಕಾರಣವಾಗಿದ್ದ ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆ ಇನ್ಮುಂದೆ ನೆನಪು ಮಾತ್ರ. ಈ ಠಾಣೆಯನ್ನು ಕೆಡವಲು ಪೊಲೀಸ್ ಇಲಾಖೆ ಮುಂದಾಗಿದ್ದರಿಂದ ಸಿಲಿಕಾನ್ ಸಿಟಿಯ ಪುರಾತನ ಠಾಣೆ ಇತಿಹಾಸ ಪುಟ ಸೇರಲಿದೆ.
1958ರಲ್ಲಿ ಮುನಿಯಮ್ಮ ಎನ್ನುವ ಮಹಿಳೆಯೊಬ್ಬರನ್ನ ಶೇಷಾದ್ರಿಪುರಂ ಠಾಣೆಯ ಅಂದಿನ ಪೊಲೀಸರು ಬಂಧಿಸಿದ್ದರು. ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಆಕೆಯನ್ನು ಅರೆಸ್ಟ್ ಮಾಡಿ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದ್ದರು. ಈ ವೇಳೆ ಮಹಿಳೆ ಠಾಣೆಯಲ್ಲೇ ಜೀವ ಬಿಟ್ಟಿದ್ದಳು. ರಾಜ್ಯದಲ್ಲಿ ಮಹಿಳೆಯ ಲಾಕ್ ಅಪ್ ಡೆತ್ ಆಗಿದೆ ಎಂದು ವಿಧಾನಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಇದನ್ನೂ ಓದಿ; ರೋಹಿತ್- ಗಂಭೀರ್ ಮಧ್ಯೆ ಟಾಕ್ ವಾರ್.. ವಿಕೆಟ್ ಕೀಪರ್, ಸ್ಪಿನ್ನರ್ಗಾಗಿ ಬಿಗ್ ಫೈಟ್
ವಿರೋಧ ಪಕ್ಷದ ಸ್ಥಾನದಲ್ಲಿದ್ದ ಶಾಂತವೇರಿ ಗೋಪಾಲಗೌಡ ಅವರು ಆಡಳಿತ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಪಕ್ಷದ ವತಿಯಿಂದ ಆಂತರಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಲಾಗಿತ್ತು. 1956 ರಲ್ಲಿ ಸಿಎಂ ಆಗಿದ್ದ ಎಸ್.ನಿಜಲಿಂಗಪ್ಪ ಅವರು 1958 ರಲ್ಲಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಂತೆ. ಮಹಿಳೆ ಲಾಕಪ್ ಡೆತ್ ಕೇಸ್ನಿಂದ ಎಸ್.ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಈಗಲೂ ಹೇಳಲಾಗುತ್ತದೆ.
ಅತ್ಯಂತ ಹಳೆಯ ಪೊಲೀಸ್ ಠಾಣೆಗಳಲ್ಲಿ ಒಂದಾಗಿರುವ ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸದ್ಯ ನೆಲಸಮಗೊಳಿಸಲು ತಯಾರಿ ನಡೆಸಲಾಗಿದೆ. ಇದೇ ವೇಳೆ ಹಳೆಯ ವಿಚಾರವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ. ಈ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಯೋಜನೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ