/newsfirstlive-kannada/media/post_attachments/wp-content/uploads/2023/07/BNG_RAID_POLICE.jpg)
ಬೆಂಗಳೂರು: ಸೋಲದೇವನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಮನೆಯಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳಾದ 1.8 ಕೆ.ಜಿ ತೂಕದ 15 rex ಎಕ್ಸ್ಪ್ಲೋಸಿವ್ ಜೆಲ್, 1.9 ಕೆ.ಜಿ ಕಾರ್ಕೋಲ್ ಫೌಡರ್, 7.8 ಕೆ.ಜಿ ಸಲ್ಫರ್ ಫೌಡರ್, 13 ಕೆ.ಜಿ ಪೊಟಾಶಿಯಂ ನೈಟ್ರೇಟ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಶ್ರೀನಿವಾಸ್, ಕುಮಾರ್ ಮತ್ತು ಶಂಕರ್ ಪೊಲೀಸರ ವಶದಲ್ಲಿರುವ ಆರೋಪಿಗಳು. ಇವರು ಹೆಸರುಘಟ್ಟದ ಕಲ್ಲುಗುಡ್ಡದಹಳ್ಳಿ, ದಾಸೇನಹಳ್ಳಿಯ 2 ಮನೆಗಳಲ್ಲಿ ಸ್ಫೋಟಕ ವಸ್ತುಗಳಾದ 1.8 ಕೆ.ಜಿ ತೂಕದ 15 rex ಎಕ್ಸ್ಪ್ಲೋಸಿವ್ ಜೆಲ್, 1.9 ಕೆ.ಜಿ ಕಾರ್ಕೋಲ್ ಫೌಡರ್, 7.8 ಕೆ.ಜಿ ಸಲ್ಫರ್ ಫೌಡರ್, 13 ಕೆ.ಜಿ ಪೊಟಾಷಿಯಂ ನೈಟ್ರೇಟ್ ಅನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಸೇನಹಳ್ಳಿಯ ರಾಘವೇಂದ್ರ ಲೇಔಟ್ನ ಶ್ರೀನಿವಾಸ್ ಮನೆ ಮೇಲೂ ದಾಳಿ ಮಾಡಿದಾಗ ಕೆಜಿಗಟ್ಟಲೇ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಯಾವುದೇ ಅನುಮತಿಯಿಲ್ಲದೇ ಸ್ಫೋಟಕಗಳನ್ನು ಸಂಗ್ರಹಿಸಿದ್ದಕ್ಕೆ 2 ಪ್ರತ್ಯೇಕ ಪ್ರಕರಣಗಳನ್ನು ಸೋಲದೇವನಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಕಲ್ಲು ಕ್ವಾರಿಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ