/newsfirstlive-kannada/media/post_attachments/wp-content/uploads/2025/07/DOGS.jpg)
ಇದು ಬೌ.. ಬೌ ಬಿರಿಯಾನಿ ಸ್ಟೋರಿಯಲ್ಲ. ಬೌಬೌ ಅನ್ನೋ ಶ್ವಾನಗಳ ಊಟದ ನೆಪದಲ್ಲಿ ಪಾಲಿಕೆ ಮಾಡಿದ ಯಡವಟ್ಟಿನ ಕಹಾನಿ. ಬಿಬಿಎಂಪಿ ನಡೆಯ ವಿರುದ್ಧ ಸಾರ್ವಜನಿಕ ಪಡಸಾಲೆಯಲ್ಲಿ ಅಸಮಾಧಾನ ಹೊಗೆಯಾಡಿದೆ. ಊಟ ವಿಚಾರದಲ್ಲಿ ಬೀದಿ ನಾಯಿಗಳಿಗಿಂತಲೂ ಬಡ ಮಕ್ಕಳು ಕೇವಲವಾದ್ರಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.
ಬೆಂಗಳೂರಿನ ಬೀದಿನಾಯಿಗಳಿಗೆ ಮಾಂಸದೂಟ ನೀಡಲು ಪಾಲಿಕೆ ಹೊಸ ಯೋಜನೆಯೊಂದನ್ನ ಹಾಕಿಕೊಂಡಿರುವ ವಿಚಾರ ನಿನ್ನೆ ನಾವೇ ನಿಮ್ಮ ಮುಂದಿಟ್ಟಿದ್ವಿ. ಆದ್ರೆ, 2.80 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕನ್​ ರೈಸ್​ ಭಾಗ್ಯ ಸ್ಟ್ರೀಟ್​ ಡಾಗ್ಸ್​​ ಪಾಲಾಗ್ತಾಯಿರೋದು ಸದ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
/newsfirstlive-kannada/media/post_attachments/wp-content/uploads/2025/07/DOGS_1.jpg)
5 ಸಾವಿರ ಬೀದಿ ನಾಯಿಗಳಿಗೆ ಚಿಕನ್ ರೈಸ್
ಬೀದಿ ನಾಯಿ ಒಂದಕ್ಕೆ ಚಿಕನ್ ರೈಸ್​ ನೀಡಲು ದಿನಕ್ಕೆ 24 ರೂಪಾಯಿ ಖರ್ಚು ಮಾಡ್ತಿರೋದಾಗಿ ಹೇಳಿದ್ದಾರೆ. ಆದರೆ ಅದೇ ಬಿಬಿಎಂಪಿ ಶಾಲೆಯ ಮಕ್ಕಳ ಊಟಕ್ಕೆ ಕೇವಲ 12 ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದನ್ನೆಲ್ಲಾ ಕೇಳಿದಾಗ ಪಿತ್ತ ನೆತ್ತಿಗೇರತ್ತೆ ಅಲ್ವಾ?. ಎಂಟು ವಲಯದಲ್ಲಿ ಒಟ್ಟು 5000 ಬೀದಿ ನಾಯಿಗಳಿಗೆ ಚಿಕನ್ ರೈಸ್ ಅಥವಾ ಎಗ್ ರೈಸ್ ನೀಡುವ ಯೋಜನೆ ಪಾಲಿಕೆಯದ್ದು. ಇದಕ್ಕೆ ಒಂದು ನಾಯಿಗೆ 24 ರೂಪಾಯಿ ಪ್ರತಿ ದಿನ ಪಾಲಿಕೆ ವೆಚ್ಚ ಮಾಡಲು ಅಂದಾಜು ಮಾಡಿದೆ.
ಇದು ಒಳ್ಳೆ ವಿಚಾರವೇ. ಆದ್ರೆ, ಬಡ ಮಕ್ಕಳು ಓದುವ ಪಾಲಿಕೆ ಶಾಲೆಯಲ್ಲೂ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಅಲ್ವಾ. ಪಾಲಿಕೆ ಶಾಲೆಯಲ್ಲಿ ಓದುವ ಓರ್ವ ಮಗುವಿನ ಊಟಕ್ಕೆ ಪಾಲಿಕೆ ಖರ್ಚು ಮಾಡ್ತಿರುವುದು ಕೇವಲ 12 ರೂಪಾಯಿ. ಅಂದ್ರೆ, ಬೀದಿನಾಯಿಗಳಿಗೆ ಮಕ್ಕಳ ಊಟಕ್ಕಿಂತ ಡಬಲ್ ವೆಚ್ಚ ಮಾಡ್ತಿದೆ.
/newsfirstlive-kannada/media/post_attachments/wp-content/uploads/2025/03/CHICKEN-TIKKA-MASALA.jpg)
ಕಾರ್ಮಿಕ ಮಕ್ಕಳೇ ಇಲ್ಲಿ ವಾಸ ಮಾಡುತ್ತಿರುವುದು. ಇಲ್ಲಿ ಬೀದಿ ನಾಯಿಗಳಿಗೆ ಕಡಿಮೆ ಕೊಟ್ಟು, ಮಕ್ಕಳಿಗೆ ಜಾಸ್ತಿ ಕೊಡಬೇಕಿತ್ತು. ಮಕ್ಕಳಿಗೆ 12 ರೂಪಾಯಿ ಕೊಡುವುದು ತಪ್ಪು. ಯಾವಾಗಲೂ ಮಕ್ಕಳಿಗೆ ಮೊದಲ ಆದ್ಯತೆ ಕೊಡಬೇಕು. ಆ ಮೇಲೆ ಪ್ರಾಣಿಗಳಿಗೆ ಕೊಡಬೇಕು.
ಸ್ಥಳೀಯರು
ಬೀದಿನಾಯಿಗಳಿಗೆ ಬಾಡೂಣ ಕೊಡೋಕೆ ಮುಂದಾಗಿರುವ ಪಾಲಿಕೆ ಅದೇ ಬಡವರ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಕೊಡೋಕೆ ಮರೆತಂತ್ತಿದೆ. ಪಾಲಿಕೆಯ ನಡೆ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದ್ದು, ಮುಂದೇನಾಗುತ್ತೋ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us