ಪ್ರಬುದ್ಧ ಆತ್ಮಹತ್ಯೆ ಎಂದು ನಂಬಿಸಲು ಸಖತ್ ಪ್ಲಾನ್.. ಕೊಲೆಯ ಸುಳಿವು ಸಿಕ್ಕಿದ್ದೇ ರೋಚಕ; ಸಾಯಿಸಿದ ಮೇಲೆ ಆಗಿದ್ದೇನು?

author-image
Veena Gangani
Updated On
ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಾಯಿ ಸೌಮ್ಯಾ
  • ಮನೆಯ ಮಾಲಕಿ ಫೋನ್ ನಾಪತ್ತೆ ಬಗ್ಗೆ ವ್ಯಕ್ತಪಡಿಸಿದ್ರು ಅನುಮಾನ
  • ತಾಯಿ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಹೆಣವಾಗಿದ್ದಳು ಪುತ್ರಿ!

ಬೆಂಗಳೂರು: ಇಡೀ ಜಗತ್ತೆ ಎದುರಿಗಿದ್ರೂ ತಾಯಿಯೊಬ್ಬಳು ಜೊತೆಗಿದ್ರೆ ಸಾಕಂತೆ. ಹಾಗೆ ಇಲ್ಲೂ ಊರೆಲ್ಲ ತನ್ನ ಮಗಳದ್ದೂ ಸೂಸೈಡ್​ ಅಂದ್ರೂ ಈ ತಾಯಿ ಮಾತ್ರ ಅದು ಕೊಲೆ ಕೊಲೆ ಅಂತ ಕಣ್ಣೀರಿಟ್ಟಿದ್ಳು. ಕೊನೆಗೆ ತಾಯಿ ಮಾತೇ ಸತ್ಯವಾಗಿದೆ. ಪ್ರಬುದ್ಧ ಸಾವು ಆತ್ಮಹತ್ಯೆ ಅಲ್ಲ. ಅದು ಕೊಲೆ ಅನ್ನೋದು ಸಾಬೀತಾಗಿದೆ. ಕೊಲೆಗಾರ ಪೊಲೀಸರ ವಶದಲ್ಲಿದ್ದಾನೆ. ಈ ಕೇಸ್​ನಲ್ಲಿ ಕೊಲೆ ಅಂತ ಹೇಳೋದಕ್ಕೆ ಪೊಲೀಸರಿಗೆ ಒಂದೇ ಒಂದು ಸುಳಿವು ಇರಲಿಲ್ಲ. ಹುಡುಗಿ ಯಾರ ಜೊತೆ ಗಲಾಟೆ ಮಾಡ್ಕೊಂಡಿರಲಿಲ್ಲ. ಲವ್ ಮ್ಯಾಟರ್ ಕೂಡ ಇರಲಿಲ್ಲ.

ಇದನ್ನೂ ಓದಿ:ಪ್ರಬುದ್ಧ ಕೊಲೆ ಕೇಸ್‌ಗೆ ಕಾರಣವಾಗಿದ್ದು ಬರೀ 2 ಸಾವಿರ ರೂ. ಅಲ್ಲ.. ಅಸಲಿಗೆ ಅಂದು ನಡೆದಿದ್ದೇನು?

publive-image

ಆದ್ರೆ ಹೆತ್ತ ಕರುಳು ಮಾತ್ರ ಮಗಳ ಮೇಲೆ ನಂಬಿಕೆ ಇಟ್ಟಿತ್ತು. ತನ್ನ ಮಗಳದ್ದು ಸೂಸೈಡ್ ಅಲ್ಲ ಕೊಲೆ ಕೊಲೆ ಅಂತ ಹೇಳಿತ್ತು. ಈ ಹೇಳಿಕೆಗಳೇ ಇಂದು ಕೊಲೆಗಾರನನ್ನ ಪತ್ತೆ ಮಾಡೋದಕ್ಕೆ ಪೊಲೀಸರಿಗೆ ಸಹಾಯ ಮಾಡಿದ್ವು. ಮುತ್ತಿಟ್ಟು ಮುದ್ದಾಗಿ ಬೆಳೆಸಿ ಅಪಾರ ಕನಸು ಕಟ್ಟಿದ್ದ ಮಗಳು. ಕಣ್ಣ ಮುಂದೆಯೇ ಸತ್ತು ಬಿದ್ದಿರೋದನ್ನು ಕಂಡು ಈ ತಾಯಿ ಅಕ್ಷರಶಃ ಕುಸಿದು ಹೋಗಿದ್ಳು. ಕರುಳ ಬಳ್ಳಿಯನ್ನು ಕಳೆದುಕೊಂಡ ತಾಯಿಯ ರೋದನೆ, ವೇದನೆ ನೋಡಿದವರು ಈ ನೋವು ಯಾವ ಪಾಪಿಗೂ ಬೇಡ ಎಂದಿದ್ರು. ಈ ನೋವಲ್ಲೇ ಮಗಳ ಸಾವಿನ ಬಗ್ಗೆ ಪ್ರಭುದ್ಧ ತಾಯಿ ಸೌಮ್ಯಾ ಹತ್ತಾರು ಅನುಮಾನಗಳನ್ನ ವ್ಯಕ್ತಪಡಿಸಿದ್ರು.

ತಾಯಿ ಕೆಲಸ ಮುಗಿಸಿ ಮನೆಗೆ ಬರುವಷ್ಟರಲ್ಲಿ ಹೆಣವಾಗಿದ್ದಳು ಪುತ್ರಿ!

ಮೇ 15 ಬುಧವಾರ ಬೆಳಗ್ಗೆ ಸೌಮ್ಯಾ ಕೆಲಸಕ್ಕೆ ಹೋಗಿದ್ದರು. ಕಾಲೇಜಿಗೆ ಹೋಗಿದ್ದ ಪ್ರಭುದ್ಧ ಮನೆಗೆ ವಾಪಸ್ ಬಂದಿದ್ಳು. ಈ ವೇಳೆ ಮನೆಯಲ್ಲಿದ್ದ ತಮ್ಮ ಕ್ರಿಕೆಟ್ ಆಡೋದಕ್ಕೆ ಅಂತ ಹೊರಗೆ ಹೋದ. ಸಂಜೆ 7 ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದಿದ್ದ. ಮನೆಗೆ ಬಂದವನು ಡೋರ್ ಬೆಲ್ ಮಾಡಿದ್ದಾನೆ. ನೋಡಿದ್ರೆ ಮನೆ ಒಳಗಿಂದ ಡೋರ್ ಲಾಕ್ ಆಗಿತ್ತು. ನಾಲ್ಕೈದು ಬಾರಿ ಬೆಲ್ ಬಾರಿಸಿದ್ರೂ ಡೋರ್ ಓಪನ್ ಆಗಿಲ್ಲ. ಇದರಿಂದ ಆತಂಕಗೊಂಡು ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಭಯಗೊಂಡೇ ಮನೆಗೆ ಆಗಮಿಸಿದ ಸೌಮ್ಯಾ, ಸ್ಥಳೀಯ ನಿವಾಸಿಗಳ ಜತೆಗೂಡಿ ಹಿಂದಿನ ಬಾಗಿಲು ತೆರೆದು ಒಳಪ್ರವೇಶಿಸಿದಾಗ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ಮುದ್ದಿನ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ಳು.

ಸುಳಿವು 01 - ಮನೆ ಮುಂಬಾಗಿಲು ಮುಚ್ಚಿತ್ತು.. ಹಿಂಬಾಗಿಲು ತೆರೆದಿತ್ತು

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಾಯಿ ಸೌಮ್ಯಾ ಮೊದಲು ಹೇಳಿದ್ದೇ ಈ ಮಾತು. ಯಾಕಂದ್ರೆ ಸೌಮ್ಯಾ ತನ್ನ ಮನೆಗೆ ಬಂದಾಗ ಮುಂಬಾಗಿಲು ಕ್ಲೋಸ್ ಆಗಿತ್ತು. ಹಿಂಬಾಗಿಲು ಮಾತ್ರ ಓಪನ್ ಆಗಿತ್ತು. ಅಲ್ಲದೆ, ಮನೆಗೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮನೆಯಲ್ಲಿದ್ದ ಮೊಬೈಲ್ ವಾಪಸ್ ಮನೆಗೆ ಬಂದಾಗ ಇರಲಿಲ್ಲ. ಹೀಗಾಗಿ ಇದು ಪಕ್ಕಾ ಕೊಲೆಯೇ ಅನ್ನೋದು ಸೌಮ್ಯರಿಗೆ ಕನ್ಫರ್ಮ್ ಆಗಿತ್ತು. ಫೋನ್ ಮಿಸ್ಸಿಂಗ್ ವಿಚಾರವಾಗಿ ಪ್ರಭುದ್ಧ ತಾಯಿ ಹೇಳಿಕೆಯಿಂದ ಈ ಕೇಸ್​ ಬಗ್ಗೆ ಇನ್ನಷ್ಟು ಅನುಮಾನಗಳು ವ್ಯಕ್ತವಾಗಿದ್ವು. ಪ್ರಭುದ್ಧ ತಾಯಿ ಸೌಮ್ಯ ಹೇಳಿಕೆಗೆ ಪುಷ್ಟಿ ಕೊಡುವಂತೆ. ಮನೆಯ ಮಾಲಕಿ ಕೂಡ ಫೋನ್ ನಾಪತ್ತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಪ್ರಭುದ್ಧಳ ಸಾವು ತುಂಬಾ ನಿಗೂಢವಾಗಿದೆ ಎಂದು ಹೇಳೋ ಮೂಲಕ ಬೇರೇನೋ ನಡೆದಿದೆ ಎಂಬ ಆತಂಕ ಹೊರ ಹಾಕಿದ್ರು. ಆದ್ರೀಗ ಮನೆ ಮಾಲಕಿ ಹೇಳಿದ ಮಾತು ಕೂಡ ನಿಜವಾಗಿದೆ.

publive-image

ಸುಳಿವು 02.. ಪ್ರಭುದ್ಧ ಕುತ್ತಿಗೆ ಕೊಯ್ದಿರುವ ರೀತಿ!

ಕುತ್ತಿಗೆ, ಮಣಿಕಟ್ಟು ಮತ್ತು ಎಡಗೈ ಭಾಗದಲ್ಲಿ ಕುಯ್ದುಕೊಂಡಿರೋದ್ರ ಬಗ್ಗೆಯೂ ಪ್ರಭುದ್ಧ ತಾಯಿ ಶಂಕೆ ವ್ಯಕ್ತಪಡಿಸಿದ್ರು. ಆ ರೀತಿ ಕುಯ್ದುಕೊಳ್ಳೋಕೆ ಸಾಧ್ಯವೇ ಇಲ್ಲ. ಏನೇ ನಡೆದಿದ್ರೂ ನನ್ನ ಬಳಿ ಹೇಳ್ತಿದ್ಲು ಅಂತ ಹೇಳಿದ್ರು. ಈಗ ತನಿಖೆಯಲ್ಲೂ ಕೂಡ ಇದೇ ವಿಚಾರ ರಿವೀಲ್ ಆಗಿದೆ. ಪ್ರಭುದ್ಧ ಜೊತೆ ತಮ್ಮನ ಸ್ನೇಹಿತ ಕಿರಿಕ್ ಮಾಡ್ಕೊಂಡಿದ್ದ. ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಈ ಹಿಂದೆ ಆಕೆ ಗಾಯ ಮಾಡಿಕೊಂಡಿದ್ದ ಜಾಗದಲ್ಲೇ ಚಾಕುವಿನಿಂದ ಕೊಯ್ದಿದ್ದ. ಅದನ್ನ ಸೂಸೈಡ್ ಅಂತ ಬಂಬಿಸೋಕ್ಕೆ ಇನ್ನಿಲ್ಲದ ಡ್ರಾಮಾ ಮಾಡಿದ್ದ. ಆದ್ರೆ ಆರೋಪಿತನ ನಾಟಕವೆಲ್ಲ ಬಟಾಬಯಲಾಗಿದೆ.  ಪ್ರಬುದ್ಧ ತಾಯಿ ಸೌಮ್ಯಾ ಅವರು ಸಾಮಾಜಿಕ ಕಾರ್ಯಕರ್ತೆ. ಸಮಾಜದಲ್ಲಿ ನಡೆಯೋ ಅನ್ಯಾಯಗಳ ವಿರುದ್ಧ ಧ್ವನಿಯೆತ್ತೋ ಧೈರ್ಯವಂತೆ. ತನ್ನ ಮಗಳೂ ಕೂಡ ತನ್ನಂತೆ ಧೈರ್ಯವಂತೆ. ಆಕೆ ಮೈನಲ್ಲಿ ಹರಿಯುತ್ತಿರೋದು ತನ್ನ ರಕ್ತ. ಅವಳು ಈ ರೀತಿ ಮಾಡಿಕೊಳ್ಳೋಕೆ ಹೇಗೆ ಸಾಧ್ಯ ಎಂದು ದುಃಖ ತೋಡಿಕೊಂಡಿರೋ ತಾಯಿ. ಯಾರೋ ನರರಾಕ್ಷಸರು ಈ ಕೃತ್ಯ ಎಸಗಿದ್ದಾರೆ ಎಂದಿದ್ರು. ಆದ್ರೆ ಅಕ್ಕ ಅಕ್ಕ ಅಂತಿದ್ದವನೇ ತನ್ನ ಮಗಳ ಪ್ರಾಣ ತೆಗೆದಿದ್ದ ಅನ್ನೋ ವಿಚಾರ ಈಗ ಹೆತ್ತ ಕರುಳಿಗೆ ಇನ್ನಷ್ಟು ಸಂಕಟ ನೀಡಿದೆ.

ಸುಳಿವು 03 - ಮೂರು ಡೆತ್ ನೋಟ್.. ಮ್ಯಾಚ್ ಆಗದ ಬರವಣಿಗೆ!

ಕೊಲೆಯಾದ ದಿನ ರೂಮ್ ಪರಿಶೀಲನೆ ನಡೆಸಿದಾಗ, ಪ್ರಭುದ್ಧ ಬ್ಯಾಗ್‌ನಲ್ಲಿನ ನೋಟ್‌ಬುಕ್‌ ಮಧ್ಯದಲ್ಲಿ ಒಂದು ಚೀಟಿ ದೊರೆತಿದ್ದು, ಇಂಗ್ಲಿಷ್‌ನಲ್ಲಿ 'ಕ್ಷಮಿಸು ಅಮ್ಮಾ' ಎಂದು ಬರೆಯಲಾಗಿತ್ತು. ಮತ್ತೆರಡು ಚೀಟಿಗಳಲ್ಲೂ ಇದೇ ರೀತಿಯ ಸಾಲುಗಳು ಇದ್ವು. ಆದ್ರೆ ಆ ಹ್ಯಾಂಡ್‌ರೈಟಿಂಗೂ, ಈಕೆಯ ಹ್ಯಾಂಡ್‌ರೈಟಿಂಗ್‌ ಮ್ಯಾಚ್ ಆಗ್ತಿರಲಿಲ್ಲ. ಇದು ಕೂಡ ದೊಡ್ಡ ಸುಳಿವು ನೀಡಿತ್ತು. ಆಕೆ ಕೈ ಕೊಯ್ದು ಅದೇ ರಕ್ತದಿಂದ ಡೆತ್​ನೋಟ್ ಬರೆದಿಟ್ಟು ಸೂಸೈಡ್ ಅಂತ ಬಿಂಬಿಸೋಕೆ ಪ್ಲಾನ್ ಮಾಡಿದ್ದ ಅನ್ನೋದು ತನಿಖೆಯಲ್ಲಿ ಬಯಲಾಗಿರುವ ಸತ್ಯ! ಹೀಗಾಗಿ ಈ ಎಲ್ಲ ಅನುಮಾನಗಳು ಪೊಲೀಸರ ತನಿಖೆಗೆ ಸಹಾಯ ಮಾಡಿದ್ವು.

ಇದನ್ನೂ ಓದಿ:ಸ್ಯಾಂಡಲ್​ವುಡ್​​ ನಟಿ ವಿದ್ಯಾ ಕೊಲೆ ಕೇಸ್​ಗೆ ಬಿಗ್​​ ಟ್ವಿಸ್ಟ್​; ಅದೊಂದು ತಪ್ಪು ಮಾಡದಿದ್ರೆ ಬಚಾವ್‌! 

ಅದರಲ್ಲೂ ಮನೆ ಓನರ್ ಹೇಳಿದ್ದ ಹುಡುಗನೊಬ್ಬನ ಸುಳಿವು ಈ ಕೇಸ್​ನಲ್ಲಿ ಕೊಲೆಗಾರನನ್ನ ಲಾಕ್ ಮಾಡೋದಕ್ಕೆ ಸಹಾಯ ಮಾಡಿತ್ತು. ಇದೆಲ್ಲಾ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು 100 ಕ್ಕೂಹೆಚ್ಚು ಸಿಸಿಟಿವಿಗಳನ್ನು, ಡಿವಿಆರ್‌ಗಳನ್ನು ಪರಿಶೀಲನೆ ನಡೆಸಿದ್ದರು. ಮನೆಯ ಸುತ್ತ ನಡೆದಾಡಿರೋ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಈ ವೇಳೆ ಆರೋಪಿ ಮನೆಯ ಟೆರೆಸ್ ಮೇಲಿಂದ ಹಾರಿ ಹೋಗಿರೋದು ಒಂದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು, ಅದನ್ನೇ ಪೊಲೀಸರು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದಾಗ ಪ್ರಭುದ್ಧಳ ತಮ್ಮನ ಗೆಳೆಯನೇ ಕೊಲೆ ಮಾಡಿರೋದು ಗೊತ್ತಾಗಿದೆ. ಆಗ ಕೊಲೆಗಾರನನ್ನ ಪತ್ತೆ ಮಾಡಿ ಅರೆಸ್ಟ್ ಮಾಡ್ದಾಗ ಕೊಲೆಯ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

2000 ರೂಪಾಯಿಗಾಗಿ ಪ್ರಭುದ್ಧ ಮತ್ತು ಹುಡುಗನ ಜೊತೆ ಕಿರಿಕ್ ಶುರುವಾಗಿತ್ತು. ಕೊಟ್ಟಿರುವ ಹಣ ಕೇಳ್ದಾಗ ಇಬ್ಬರ ಮಧ್ಯೆ ಜಗಳ ಶುರುವಾಗಿತ್ತಂತೆ. 2 ಸಾವಿರ ಕದ್ದಿರೋ ವಿಚಾರವನ್ನ ಯಾರಿಗೂ ಹೇಳದಂತೆ ಹುಡುಗ ಪ್ರಭುದ್ಧ ಕಾಲು ಹಿಡಿದಿದ್ದ. ಬಳಿಕ ಆಕೆಯನ್ನ ಜೋರಾಗಿ ತಳ್ಳಿದ್ದ. ತಳ್ಳಿದ ರಭಸಕ್ಕೆ ಪ್ರಭುದ್ಧ ತಲೆ ಗೋಡೆಗೆ ಬಡೆದಿದೆ. ನಂತರ ಆಕೆಯನ್ನ ಬಾತ್​ರೂಮ್​ಗೆ ಎಳೆದೊಯ್ದಿದ್ದ. ಈ ವೇಳೆ ಪ್ರಭುದ್ಧಾ ಆರೋಪಿ ಮುಖಕ್ಕೆ ಪರಚಿ ಗಾಯ ಮಾಡಿದ್ಳು. ಇದಾದ ಮೇಲೆ ಚಾಕುವಿನಿಂದ ಕೈ ಮತ್ತು ಕತ್ತು ಕೊಯ್ದಿದ್ದ. ಇದ್ರಿಂದ ತೀವ್ರವಾದ ರಕ್ತಸ್ರಾವವಾಗಿ ಪ್ರಭುದ್ಧ ಕೊನೆಯುಸಿರು ಎಳೆದಿದ್ಳು. ಪ್ರಭುದ್ಧಾಳನ್ನ ಕೊಂದು ಅಲ್ಲೇ ಕಾದು ಕೂತಿದ್ದ ಪಾಪಿ ಸಾಕ್ಷಿ ನಾಶ ಮಾಡೋದಕ್ಕೆ ಖತರ್ನಾಕ್ ಪ್ಲಾನ್ ಮಾಡಿದ್ದ. ಪ್ರಬುದ್ಧ ಸತ್ತ ನಂತರ ಮ್ಯಾಟ್ ನಿಂದ ಮನೆಯನ್ನ ಒರೆಸಿದ್ದ. ಬಳಿಕ ಚಾಕು ಮತ್ತು ಮ್ಯಾಟ್ ಎಲ್ಲವನ್ನು ತೆಗೆದುಕೊಂಡು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದ.

ಇದಷ್ಟೆ ಅಲ್ಲಾ ಬಲೆಗೆ ಬೀಳಬಾರದು ಅಂತ ಹಾಕಿದ್ದ ಬಟ್ಟೆ ಮ್ಯಾಟ್ ಎಲ್ಲ ಸುಟ್ಟು ಹಾಕಿದ್ದ. ಆದ್ರೆ ಕೊಲೆಯಾದ ದಿನವೇ ಇವನನ್ನ ಪೊಲೀಸರು ಕರೆಸಿ ವಿಚಾರಣೆ ನಡೆಸಿರ್ತಾರೆ. ಆದ್ರೆ ಆಗ ತನಗೇನು ಗೊತ್ತೆ ಇಲ್ಲ ಅಂತ ನಾಟಕವಾಡಿದ್ದ. ಮುಖದ ಮೇಲಿನ ಗಾಯದ ಬಗ್ಗೆಯೂ ಕೇಳ್ದಾಗ ಸಣ್ಣ ಗಲಾಟೆಯಲ್ಲಿ ಆಗಿದ್ದು ಅಂತ ಹೇಳಿದ್ದ. ಆದ್ರೆ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಕೊಲೆಯಾದ ಪ್ರಭುದ್ಧ ಮನೆ ಅಕ್ಕ ಪಕ್ಕ ಓಡಾಡಿರೋದು ಗೊತ್ತಾಗಿದೆ. ಆಗ ಪೊಲೀಸರು ಮತ್ತೆ ವಾಪಸ್ ಕರೆಸಿ ವಿಚಾರಣೆ ನಡೆಸಿದಾಗ ಕೊಲೆಯ ಸತ್ಯವನ್ನ ಪೊಲೀಸರ ಮುಂದೆ ಕಕ್ಕಿದ್ದಾನೆ. ಜಸ್ಟ್ 2 ಸಾವಿರ ರೂಪಾಯಿಗೆ ಒಂದು ಜೀವ ಹೋಗಿತ್ತು. ತಪ್ಪೆ ಮಾಡದ ಹುಡುಗಿಯನ್ನ ಕೊಂದ ಪಾಪಿಯೇನು ಜೈಲು ಸೇರಿದ್ದಾನೆ. ಆದ್ರೆ ಮುದ್ದಿಸಿ ಆಡಿಸಿ ಬೆಳೆಸಿದ ತಾಯಿಗೆ ಮಗಳು ಜೊತೆಗಿಲ್ಲ ಅನ್ನೋ ನೋವು ನಿರಂತರ. ಮಗಳ ಸಾವಿನ ಸಂಕಟದಲ್ಲಿರುವ ತಾಯಿಗೆ ಸಮಧಾನ ಹೇಳೋಱರು? ಅನ್ನೋದೆ ಈಗ ಉತ್ತರ ಸಿಗದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment