newsfirstkannada.com

ಈ ಬೆಂಗಳೂರಿಗೆ ಏನಾಗ್ತಿದೆ? ಚಿನ್ನ, ಬೆಳ್ಳಿ ಅಲ್ಲವೇ ಅಲ್ಲ.. ನೀರಿನ ಡ್ರಮ್‌ಗಳಿಗೆ ಬೀಗ ಹಾಕೋ ಪರಿಸ್ಥಿತಿ!

Share :

Published February 11, 2024 at 3:12pm

  ಉದ್ಯಾನ ನಗರಿಯಲ್ಲಿ ನೀರಿನ ಹಾಹಾಕಾರ ಎದುರಾಯಿತಾ..?

  ಬೇಸಿಗೆಯಿಂದ ವಾರಕ್ಕೆ ಸ್ನಾನ, ತಿಂಗಳಿಗೊಮ್ಮೆ ಬಟ್ಟೆ ವಾಶಿಂಗ್​

  ಡ್ರಮ್​ಗಳಿಗೆ ಕಬ್ಬಿಣದ ಲಾಕರ್ ಮಾಡಿಸಿ ಬೀಗ ಹಾಕಿದ್ದು ಏಕೆ?

ಬೆಂಗಳೂರು: ಬೇಸಿಗೆ ಆಗಮನದಿಂದ ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ತಲೆದೂರುವುದು ಸಾಮಾನ್ಯ. ಹೀಗಾಗಿಯೇ ಬೆಳ್ಳಿಯು ಅಲ್ಲದ, ಬಂಗಾರವೂ ಅಲ್ಲದ ನೀರಿನ ಡ್ರಮ್​ಗಳಿಗೆ ಕಬ್ಬಿಣದ ಲಾಕರ್ ಮಾಡಿಸಿ ಬೀಗ ಹಾಕಿ ಇಡಲಾಗಿದೆ. ಯರಾದರೂ ನೀರನ್ನು ಕಳ್ಳತನ ಮಾಡಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಉದ್ಯಾನ ನಗರದ ಥಣಿಸಂದ್ರ ಏರಿಯಾ ಜನರು ಈ ರೀತಿ ಪ್ಲಾನ್ ಮಾಡಿದ್ದಾರೆ.

‘ಇದೇ ರೀತಿ ಮುಂದುವರೆದರೆ ಸಾಯಬೇಕಷ್ಟೇ’

ಬೆಂಗಳೂರಿಗೆ ಬೇಸಿಗೆ ಮುನ್ನವೇ ಜಲಕ್ಷ್ಯಾಮ, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದ್ದು ಡ್ರಮ್‌ನಲ್ಲಿರುವ ನೀರನ್ನ ಕಳ್ಳತನ ಮಾಡುವ ಭಯದಲ್ಲಿ ಕೀಯನ್ನು ಹಾಕಿ ಜೋಪಾನ ಮಾಡಲಾಗಿದೆ. ನಮ್ಮ ಏರಿಯಾದಲ್ಲಿ ನೀರಿನ ಹಾಹಾಕಾರ ಇದೇ ರೀತಿ ಮುಂದುವರೆದರೆ ಸಾಯಬೇಕಷ್ಟೇ. ನಲ್ಲಿಯಲ್ಲಿ ನೀರು ಬರಲ್ಲ. ಟ್ಯಾಂಕರ್​ನವರೂ ಸರಿಯಾಗಿ ಸ್ಪಂದಿಸಲ್ಲ. ಒನ್ ಟು ತ್ರಿಬಲ್ ಚಾರ್ಜ್ ಮಾಡಿದರೂ ಟ್ಯಾಂಕರ್ ನೀರು ಸಿಗಲ್ಲ. ವಾರಕ್ಕೊಮ್ಮೆ ನೀರು ಬಂದಾಗ ಡ್ರಮ್​ನಲ್ಲಿ ನೀರು ತುಂಬಿ ಇಡುತ್ತೇವೆ. ಆದರೆ ಈ ನೀರನ್ನು ಯಾರದರೂ ಕದಿಯುತ್ತಾರೆಂಬ ಭಯದಲ್ಲಿ ಕೀ ಹಾಕಿ ಇಡುತ್ತೇವೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.

ಸಮಸ್ಯೆಯನ್ನ ಸಂಬಂಧಪಟ್ಟವರ ಗಮನಕ್ಕೆ ತಂದ್ರೂ ಪ್ರಯೋಜನವಿಲ್ಲ

ಥಣಿಸಂದ್ರ ಏರಿಯಾ ಜನರ ಕಣ್ಣೀರು ನೀರಿನಂತೆ ಹರಿಯುತ್ತಿದ್ದರೂ ಅವರಿಗೆ ಕುಡಿಯಲು ನೀರಿಲ್ಲ. ಇಷ್ಟು ದಿನ ದಿನಕೊಮ್ಮೆ ಸ್ನಾನ ಮಾಡುತತ್ತಿದ್ದವರು ಬೇಸಿಗೆ ಹಿನ್ನೆಲೆಯಲ್ಲಿ ವಾರಕೊಮ್ಮೆ ಸ್ನಾನ ಮಾಡಬೇಕಾದ ದುಸ್ಥಿತಿ ಬಂದುದೋಗಿದೆ. ಇನ್ನು ಬಟ್ಟೆಯನ್ನ ತಿಂಗಳಿಗೆ ಒಮ್ಮೆ ವಾಶ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೌಚಕ್ಕೂ ನೀರಿಲ್ಲವೆಂದು ಎಂದು ಅಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಬೆಂಗಳೂರಿಗೆ ಏನಾಗ್ತಿದೆ? ಚಿನ್ನ, ಬೆಳ್ಳಿ ಅಲ್ಲವೇ ಅಲ್ಲ.. ನೀರಿನ ಡ್ರಮ್‌ಗಳಿಗೆ ಬೀಗ ಹಾಕೋ ಪರಿಸ್ಥಿತಿ!

https://newsfirstlive.com/wp-content/uploads/2024/02/BNG_THANISANDRA.jpg

Load More