newsfirstkannada.com

ಬೆಂಗಳೂರಿಂದ ಅಯೋಧ್ಯೆಗೆ ಹೊರಟ ರಾಮಭಕ್ತರಿಗೆ ಬಿಗ್‌ ಶಾಕ್‌; ವಿಮಾನದ ಟಿಕೆಟ್‌ ದರ ಈಗ ಎಷ್ಟು?

Share :

Published January 12, 2024 at 2:30pm

Update January 12, 2024 at 2:31pm

    ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಹೆಚ್ಚಳ

    ಕೆಲವೇ ದಿನಗಳಲ್ಲಿ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗಗನಕ್ಕೇರಿದ ದರ

    ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಟಿಕೆಟ್‌ ದರದಲ್ಲಿ ಶೇ. 395 ರಷ್ಟು ಏರಿಕೆ

ಬೆಂಗಳೂರು: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳಲಿದ್ದು ಎಲ್ಲೆಡೆಯಿಂದ ರಾಮಭಕ್ತರು ಅಯೋಧ್ಯೆಯತ್ತ ತೆರಳುತ್ತಿದ್ದಾರೆ. ಸದ್ಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವ ಕಾರಣ ವಿಮಾನ ದರವನ್ನು ಶೇಕಡಾ 400ರಷ್ಟು ಹೆಚ್ಚಿಸಲಾಗಿದೆ.

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಮೂಲಕ ಪ್ರಯಾಣಿಸಬೇಕು ಎಂದರೆ ಈ ಮೊದಲು ಕೇವಲ 6 ಸಾವಿರ ರೂಪಾಯಿ ಇತ್ತು. ಆದರೆ ಇದೀಗ ಒಂದೇ ಬಾರಿಗೆ ₹6000 ರಿಂದ ₹21,500ಗೆ ಹೆಚ್ಚಳ ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ವಿಮಾನ ಪ್ರಯಾಣದ ಟಿಕೆಟ್ ದರವನ್ನು ವಿಮಾನಯಾನ ಸಂಸ್ಥೆಗಳು ಹೆಚ್ಚಳ ಮಾಡಿವೆ. ಇದು ರಾಮಭಕ್ತರಿಗೆ ಬೇಸರ ತರಿಸಿದೆ.

ಜನವರಿಗೆ 19ರ ವರೆಗೆ ₹21,500 ಇರುವ ವಿಮಾನದ ಟಿಕೆಟ್​ ಅನ್ನು ಜನವರಿ 20 ರಂದು ಮಧ್ಯಾಹ್ನ ಹೊರಡುವ ವಿಮಾನದ ಟಿಕೆಟ್‌ ದರ ₹29,700ಕ್ಕೆ ಹೆಚ್ಚಳ ಮಾಡಲಾಗಿದೆ. ಮಾಮೂಲಿ ದಿನಕ್ಕೆ ಹೋಲಿಸಿದರೆ ಟಿಕೆಟ್‌ ದರದಲ್ಲಿ ಶೇ.395 ಏರಿಕೆ ಕಂಡಿದೆ.

ಈಗಾಗಲೇ ಜ.20ಕ್ಕೂ ಮೊದಲೇ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್‌ ಎಲ್ಲ ಸೋಲ್ಡ್​ ಔಟ್ ಆಗಿವೆ. ಕೆಲವೇ ಟಿಕೆಟ್‌ಗಳು ಲಭ್ಯವಿದ್ದರೂ ಕೂಡ ಆ ಬೆಲೆ ಕೈಗೆಟುಕದ ಬೆಲೆಯಾಗಿದೆ. ಜನವರಿ 22 ರಂದು ಭಾನುವಾರ ರಜೆ ಇರುವುದರಿಂದ ಜನರು ಅಯೋಧ್ಯೆಯತ್ತ ಪ್ರಯಾಣಿಸುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ಭಕ್ತರು ಅಯೋಧ್ಯೆ ಕಡೆಗೆ ಮುಖ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಂದ ಅಯೋಧ್ಯೆಗೆ ಹೊರಟ ರಾಮಭಕ್ತರಿಗೆ ಬಿಗ್‌ ಶಾಕ್‌; ವಿಮಾನದ ಟಿಕೆಟ್‌ ದರ ಈಗ ಎಷ್ಟು?

https://newsfirstlive.com/wp-content/uploads/2024/01/RAM_MANDIR.jpg

Load More