ಪ್ರಯಾಣಿಕರೇ ಗಮನಿಸಿ; ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲುಗಳು ರದ್ದು

author-image
Bheemappa
Updated On
ಪ್ರಯಾಣಿಕರೇ ಗಮನಿಸಿ; ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲುಗಳು ರದ್ದು
Advertisment
  • ಎಷ್ಟು ತಿಂಗಳವರೆಗೆ ರೈಲುಗಳ ಸಂಚಾರ ರದ್ದು ಮಾಡಲಾಗಿದೆ?
  • ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಿದೆ
  • ಯಶವಂತಪುರ- ಮಂಗಳೂರು ಮಧ್ಯೆ ಸಂಚರಿಸುವ ರೈಲು ರದ್ದು

ಬೆಂಗಳೂರು: ಸಿಲಿಕಾನ್ ಸಿಟಿಯ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚಾರ ಮಾಡುವ ಕೆಲವು ರೈಲುಗಳನ್ನು ರದ್ದು ಮಾಡಲಾಗುತ್ತಿದೆ. ಹಾಸನದ ಸಕಲೇಶಪುರ- ಸುಬ್ರಹ್ಮಣ್ಯ ಸಂಚಾರ ಮಾರ್ಗದಲ್ಲಿ ಕಾಮಗಾರಿ ನಡೆಯುವುದರಿಂದ ಈ ರೈಲುಗಳ ಸಂಚಾರ ಸ್ಥಗಿತ ಮಾಡಲಾಗುತ್ತಿದೆ.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್​ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1, 2025ರ ವರೆಗೆ ಸುರಕ್ಷತೆ ಹಾಗೂ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಜೂನ್​ದಿಂದ ನವೆಂಬರ್​​ವರೆಗೆ ಎಂದರೆ ಒಟ್ಟು ಆರು ತಿಂಗಳುಗಳ ಕಾಲ ರೈಲು ಸಂಚಾರ ಇರುವುದಿಲ್ಲ.

ಇದನ್ನೂ ಓದಿ: ಐಪಿಎಲ್ ಫ್ಯಾನ್ಸ್​ಗೆ ಶಾಕ್.. ಕೋಲ್ಕತ್ತಾ ಜೊತೆಗಿನ RCB ಮ್ಯಾಚ್ ನಡೆಯೋದು ಅನುಮಾನ

publive-image

ಯಾವೆಲ್ಲ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ?

ಮೇ 31 ರಿಂದ ನವೆಂಬರ್ 1, 2025 ರವರೆಗೆ ಪ್ರತಿ ಶನಿವಾರದಂದು ಬೆಂಗಳೂರಿನ ಸಂಚರಿಸುವ ಯಶವಂತಪುರದಿಂದ ಮಂಗಳೂರು ಜಂಕ್ಷನ್​ಗೆ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದು ಆಗಲಿದೆ. ಅದೇ ರೀತಿ ಜೂನ್ 1 ರಿಂದ ನವೆಂಬರ್ 2 ರವರೆಗೆ ಪ್ರತಿ ಭಾನುವಾರದಂದು ಸಂಚರಿಸುವ ಮಂಗಳೂರಿನಿಂದ ಯಶವಂತಪುರಕ್ಕೆ ತೆರಳುವ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ಕೂಡ ಇರುವುದಿಲ್ಲ.

ಜೂನ್ 1 ರಿಂದ ಅಕ್ಟೋಬರ್ 30, 2025 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರದಿಂದ ಮಂಗಳೂರು ಜಂಕ್ಷನ್​ವರೆಗೆ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) ರದ್ದು ಆಗಲಿದೆ. ಇದರ ಜೊತೆಗೆ ಜೂನ್ 2ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಮಂಗಳೂರು ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ಸಹ ರದ್ದು ಆಗುತ್ತದೆ.

ಜೂನ್ 2 ರಿಂದ ಅಕ್ಟೋಬರ್ 31 ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಯಶವಂತಪುರದಿಂದ ಕಾರವಾರಗೆ ತೆರಳುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ಸಂಚಾರ ಇರುವುದಿಲ್ಲ. ಜೂನ್ 3 ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸುವ ಕಾರವಾರ ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರ ರದ್ದುಗೊಳಿಸಲಾಗಿರುತ್ತದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment