Advertisment

ಸಿಲಿಕಾನ್​ ಸಿಟಿ ವಾಹನ ಸವಾರರಿಗೆ ಬಿಗ್​ ಶಾಕ್​.. ಮತ್ತೆ ಶುರು ಟೋಯಿಂಗ್​; ಎತ್ಹಾಕೊಂಡು ಹೋಯ್ತಾ ಇರೋದೆ!

author-image
admin
Updated On
ಸಿಲಿಕಾನ್​ ಸಿಟಿ ವಾಹನ ಸವಾರರಿಗೆ ಬಿಗ್​ ಶಾಕ್​.. ಮತ್ತೆ ಶುರು ಟೋಯಿಂಗ್​; ಎತ್ಹಾಕೊಂಡು ಹೋಯ್ತಾ ಇರೋದೆ!
Advertisment
  • ಬೆಂಗಳೂರು ನಗರದಲ್ಲಿ ಮತ್ತೆ ಶುರುವಾಗಲಿದೆ ಟೋಯಿಂಗ್​
  • 21 ದಿನ ವೆಹಿಕಲ್​ ಒಂದ್ಕಡೆ ಇದ್ರೆ ಹರಾಜು ಎಂದಿದ್ದ ಡಿಕೆ ಶಿವಕುಮಾರ್
  • ರೋಡ್​ ರೋಡ್​​ನಲ್ಲಿ ವೆಹಿಕಲ್​ ಪಾರ್ಕ್​ ಮಾಡಿದ್ರೆ ಎತ್ತಂಗಡಿ ಫಿಕ್ಸ್‌!

ಬೆಂಗಳೂರು: ಸಿಲಿಕಾನ್​ ಸಿಟಿ ವಾಹನ ಸವಾರರಿಗೆ ಇದು ನಿಜಕ್ಕೂ​ ಶಾಕಿಂಗ್‌ ನ್ಯೂಸ್. ಬೆಂಗಳೂರು ನಗರದಲ್ಲಿ ಮತ್ತೆ ಟೋಯಿಂಗ್​ ಶುರುವಾಗಲಿದೆ. ಇನ್ಮುಂದೆ ರೋಡ್​ ರೋಡ್​​ನಲ್ಲಿ ವೆಹಿಕಲ್​ ಪಾರ್ಕ್ ಮಾಡಿದ್ರೆ ಟ್ರಾಫಿಕ್ ಪೊಲೀಸರು ಎತ್ಹಾಕೊಂಡು ಹೋಗ್ತಾ ಇರ್ತಾರೆ.

Advertisment

ಹಲವು ದಿನಗಳಿಂದ ನಿಂತಿದ್ದ ಟೋಯಿಂಗ್ ರೂಲ್ಸ್‌ ಅನ್ನ ಮತ್ತೆ ಆರಂಭಿಸಲು ಪೊಲೀಸರು ಸಜ್ಜಾಗಿದ್ದಾರೆ. ಇನ್ಮುಂದೆ ಎಲ್ಲೆಲ್ಲೆಂದ್ರಲ್ಲಿ ಗಾಡಿ ನಿಂತಿದ್ದರೆ ಎತ್ತಂಗಡಿ ಫಿಕ್ಸ್​​​.

publive-image

ಇತ್ತೀಚೆಗೆ ಬೆಂಗಳೂರು ಉಸ್ತುವಾರಿ ಸಚಿವ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಗರದಲ್ಲಿ 21 ದಿನ ವಾಹನಗಳನ್ನು​ ಒಂದೇ ಕಡೆ ಪಾರ್ಕ್ ಮಾಡಿದ್ರೆ ಹರಾಜು ಮಾಡುತ್ತೇವೆ ಎಂದಿದ್ದರು. ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಂದಲೂ ಟೋಯಿಂಗ್ ಜಾರಿಗೆ ತರುವುದಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಪ್ಪನ ಎದೆ ಮೇಲೆ ನಿದ್ದೆ.. ತಂದೆಗೆ ಮಗಳ ಕೈ ತುತ್ತು; ಮಂಡ್ಯದ ಹೃತಿಕ್ಷಾ ವಿಡಿಯೋ ನೋಡಿ ಹೆತ್ತವರ ಕಣ್ಣೀರು 

Advertisment

publive-image

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಗೃಹಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಈ ಸಭೆ ಬಳಿಕ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು, ಬೆಂಗಳೂರು ನಗರದಲ್ಲಿ ಟೋಯಿಂಗ್ ಅನ್ನು ಹಿಂದೆ ನಿಲ್ಲಿಸಿದ್ದೇವು. ಅದನ್ನ ರೀ ಇಂಟ್ರಡ್ಯೂಸ್ ಮಾಡ್ತೀವಿ.

ಈ ಹಿಂದೆ ಟೋಯಿಂಗ್‌ಗೆ ಬಾಡಿಗೆ ವಾಹನಗಳನ್ನು ತೆಗೆದುಕೊಳುತ್ತಾ ಇದ್ವಿ. ಈಗ ನಮ್ಮದೆ ವೆಹಿಕಲ್, ನಮ್ಮದೇ ಸಿಬ್ಬಂದಿಗಳಿಂದ ಅದನ್ನ ಹ್ಯಾಂಡಲ್ ಮಾಡ್ತೀವಿ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment