/newsfirstlive-kannada/media/post_attachments/wp-content/uploads/2024/09/Bangalore-University.jpg)
ಬೆಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಅಪ್ಲಿಕೇಷನ್ಸ್ ಡಿಪಾರ್ಟ್‌ಮೆಂಟ್ ಬಿಸಿಎ ವಿದ್ಯಾರ್ಥಿಗಳಿಗೆ ಒಂದು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಬೆಂಗಳೂರು ವಿವಿಯಿಂದ ಪದವಿ ಪಡೆದುಕೊಂಡು ಅನೇಕ ಕಡೆ ಒಳ್ಳೆಯ ಹುದ್ದೆಯಲ್ಲಿರುವ ಹಳೇ ವಿದ್ಯಾರ್ಥಿಗಳು ಬಿಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಇದು ಎಲ್ಲಾ ಬಿಸಿಎ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹ್ವಾನ ಎಂದು ತಿಳಿಸಲಾಗಿದೆ.
/newsfirstlive-kannada/media/post_attachments/wp-content/uploads/2024/09/BANGALURU-UNIVERSITY-1.jpg)
ಇದನ್ನೂ ಓದಿ:ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!
Industry Alumni Mentorship program ಅನ್ನೋ ಹೆಸರಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಒಟ್ಟು 26 ಹಳೆಯ ವಿದ್ಯಾರ್ಥಿಗಳು ಬಿಸಿಎ ಕಲಿಯುತ್ತಿರುವ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ 26 ಹಳೆಯ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಅತ್ಯುನ್ನತವಾದ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಅವರಲ್ಲಿ ಐದು ಜನ ಅಮೆರಿಕ, ಒಬ್ಬರು ಗಲ್ಫ್​ ರಾಷ್ಟ್ರ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯೋಗ ಮಾಡಿರುವ ಅನುಭವವಿದ್ದು ಅವರಿಂದ ಬಿಸಿಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಕಂಪ್ಯೂಟರ್ ಸೈನ್ಸ್​ ವಿಭಾಗದ ಹಿರಿಯ ಪ್ರೊಫೆಸರ್ ಬಿ ಮುರಳಿಧರ್​ ಬಿ.ಎಲ್​ ಅವರು ನ್ಯೂಸ್ ​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ
ಇದನ್ನೂ ಓದಿ:ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?
ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಸದ್ಯ ಶೈಕ್ಷಣಿಕ ವರ್ಷ ಮುಗಿಸಲು ಬೇಕಾದ ಕೌಶಲ್ಯ, ಸದ್ಯದ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು. ಉದ್ಯಮಗಳು ಅಪೇಕ್ಷಗಳು ಏನು? ಉದ್ಯಮಗಳ ಗುಣಮಟ್ಟ, ಪ್ರೊಜೆಕ್ಟ್​, ಇಂಟರ್​ಶಿಪ್ಸ್ ಹಾಗೂ ಪ್ಲೇಸ್​ಮೆಂಟ್​ಗಳ ಬಗ್ಗೆ ಹಳೆಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಮಾಹಿತಿ ನೀಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us