ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ; ಬೆಂಗಳೂರಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಉಳಿಯಿತು ಒಂದು ಜೀವ

author-image
admin
Updated On
ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ; ಬೆಂಗಳೂರಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಉಳಿಯಿತು ಒಂದು ಜೀವ
Advertisment
  • ವೈದ್ಯರನ್ನ ಕಾಣಲು ಆಸ್ಪತ್ರೆಗೆ ಬಂದು ರಿಸೆಪ್ಶನ್ ಬಳಿ ಕೂತಿದ್ದರು
  • ಗ್ಯಾಸ್ಟ್ರಿಕ್ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಿದ್ದವರಿಗೆ ಹಾರ್ಟ್ ಅಟ್ಯಾಕ್‌!
  • ಕೂಡಲೇ ಡ್ಯೂಟಿಯಲ್ಲಿದ್ದ ಡಾಕ್ಟರ್ ರಾಕಿ ಕಾತ್ರೆಯಾ ಓಡಿ ಬಂದಿದ್ದಾರೆ

ಬೆಂಗಳೂರು: ವರ್ತೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿರೋ ಈ ಘಟನೆ ನಿಜಕ್ಕೂ ಮೈ ಜುಮ್ಮೆನ್ನಿಸುವಂತಿದೆ. ವೈದ್ಯರ ಸಮಯ ಪ್ರಜ್ಞೆಯಿಂದ ಒಂದು ಜೀವ ಉಳಿದಿದ್ದು, ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿ, ಡಾಕ್ಟರ್‌ಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಕಳೆದ ವಾರ 67 ವರ್ಷದ ವ್ಯಕ್ತಿಯೊಬ್ಬರು ಗ್ಯಾಸ್ಟ್ರಿಕ್ ಸಮಸ್ಯೆ ಅಂತ ವರ್ತೂರಿನ ಮಣಿಪಾಲ್ ಆಸ್ಪತ್ರೆಗೆ ಬಂದಿದ್ದಾರೆ. ಇವರಿಗೆ 3 ದಿನದಿಂದ ಎದೆ ನೋವು ಕಾಣಿಸಿಕೊಂಡಿತ್ತು. ವೈದ್ಯರನ್ನ ಕಾಣಲು ಬಂದು ಆಸ್ಪತ್ರೆಯ ರಿಸೆಪ್ಶನ್ ಬಳಿ ಕೂತಿದ್ದರು.

publive-image

ಕೂತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಚೇರ್‌ನಿಂದ ಕುಸಿದು ಬೀಳುತ್ತಾರೆ. ಗಾಬರಿ ಆದ ಸಿಬ್ಬಂದಿ ಕೂಡಲೇ ಡ್ಯೂಟಿಯಲ್ಲಿ ಡಾಕ್ಟರ್ ರಾಕಿ ಕಾತ್ರೆಯಾ ಅವರಿಗೆ ತಿಳಿಸುತ್ತಾರೆ. ಅದೃಷ್ಟವಶಾತ್ ಡಾಕ್ಟರ್ ರಾಕಿ ಕಾತ್ರೆಯಾ ಒಪಿಡಿಯಲ್ಲಿದ್ದ ಕಾರಣ ಓಡಿ ಬಂದಿದ್ದಾರೆ. ಬಂದ ಕೂಡಲೇ ಆ ವ್ಯಕ್ತಿಗೆ CPR ಮಾಡಿದ್ದಾರೆ. ಸ್ಪಾಟ್‌ನಲ್ಲೇ CPR ಮಾಡಿದ್ದರಿಂದ ಆ ವ್ಯಕ್ತಿಯ ಜೀವ ಉಳಿದಿದೆ.

publive-image

ಆ ನಂತರ ಎಮರ್ಜೆನ್ಸಿ ವಿಭಾಗಕ್ಕೆ‌ ಕರೆದುಕೊಂಡು ಹೋಗಿ ಕೆಲವು ಪರೀಕ್ಷೆಗಳು ಮಾಡಿದಾಗ ಲಘು ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಒಂದು ಗಂಟೆಯೊಳಗೆ ವೆಂಟಿಲೇಟರ್‌ ಸಹಾಯದಿಂದ ಆ ವ್ಯಕ್ತಿಗೆ ಪ್ರಜ್ಞೆ ಬಂದಿದೆ. ಕುಸಿದು ಬಿದ್ದ ವ್ಯಕ್ತಿಯನ್ನು ಡಾಕ್ಟರ್ ರಾಕಿ ಕಾತ್ರೆಯಾ ಅವರು ಪ್ರಥಮ ಚಿಕಿತ್ಸೆ ಹಾಗೂ ಸಮಯ ಪ್ರಜ್ಞೆಯಿಂದ ಬದುಕಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಅಮೆರಿಕಾದ ಮೇಲೆ ಚೀನಾ ಬಯೋಲಾಜಿಕಲ್ ವಾರ್‌; ಈ ಹುಳ ಮನುಷ್ಯನಿಗೆ ಎಷ್ಟು ಡೇಂಜರ್ ಗೊತ್ತಾ? 

ವೈದ್ಯರಿಗೆ ಕುಟುಂಬಸ್ಥರ ಧನ್ಯವಾದ!
ವೈದ್ಯರ ಈ ಸಮಯ ಪ್ರಜ್ಞೆ ಬಗ್ಗೆ ಮಾತನಾಡಿರುವ ಕುಟುಂಬಸ್ಥರು ನಮ್ಮ ತಂದೆಗೆ ಸ್ವಲ್ಪ ದಿನದಿಂದ ಎದೆ ನೋವಿತ್ತು. ಅದರ ಬಗ್ಗೆ ನಾವು ಸರಿಯಾಗಿ ನೋಡಿಕೊಳ್ಳಲಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದೇ ಮಾತ್ರೆಯಿಂದಲೇ ಸರಿಯಾಗ್ತಾರೆ ಅಂತ ನಿರ್ಲಕ್ಷ್ಯ ಮಾಡಿದ್ವಿ.

publive-image

ತುಂಬಾ ಎದೆನೋವು ಬಂದಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಲು ಬಂದಿದ್ದಾರೆ. ಬಂದಾಗ ಆಸ್ಪತ್ರೆಯ ಸೆಕ್ಯೂರಿಟಿ ಹತ್ತಿರ ಕುಳಿತಿರುವಾಗಲೇ ಕುಸಿದಿದ್ದಾರೆ. ಸೂಕ್ತ ಸಮಯಕ್ಕೆ ಡಾಕ್ಟರ್ ರಾಕಿ ಅವರು ಸಹಾಯ ಮಾಡಿದ್ದಾರೆ. ನಮ್ಮ ತಂದೆಗೆ ತಕ್ಷಣ ಚಿಕಿತ್ಸೆ ಕೊಟ್ಟು ಪ್ರಾಣ ಉಳಿಸಿದ ಡಾಕ್ಟರ್ ರಾಕಿ, ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment