/newsfirstlive-kannada/media/post_attachments/wp-content/uploads/2024/12/Bangalore-VV-Mylarappa-1.jpg)
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಸ್ಟೋರಿ ದೇಶಾದ್ಯಂತ ಸದ್ದು ಮಾಡಿದೆ. ಪತ್ನಿ ಕಾಟಕ್ಕೆ ಬೇಸತ್ತು ಜಸ್ಟೀಸ್ ಡ್ಯೂ ಅಂತ ಬರೆದಿಟ್ಟು ಜೀವನದ ಕಥೆಗೆ ಅಂತ್ಯ ಹಾಡಿದ್ದ. ಈಗ ಬೆಂಗಳೂರಲ್ಲಿ ಮತ್ತೊಬ್ಬ ಪತಿ ಉಸಿರು ಚೆಲ್ಲಿದ್ದಾನೆ. ಇಲ್ಲೂ ಎಲ್ಲರೂ ಬೆರಳು ಮಾಡ್ತಿರೋದು ಪತ್ನಿಯತ್ತ. ಆದ್ರೆ ಈ ಸ್ಟೋರಿಯಲ್ಲಿ ಒಂದು ಟ್ವಿಸ್ಟ್ ಇದೆ. ನಿವೃತ್ತ ಉಪ ಕುಲಸಚಿವ ಮೈಲಾರಪ್ಪನವರ ಹೆಸರು ಈ ಕೇಸಲ್ಲಿ ಕೇಳಿ ಬಂದಿದೆ.
ಈ ಸೋಮಶೇಖರ್ ಸಾವು.. ಸಹಜ ಸಾವಲ್ಲ. ಜೀವನದಲ್ಲಿ ನೊಂದು ಮಾಡಿಕೊಂಡ ದುರಂತ ಅಂತ್ಯ. 45 ವರ್ಷದ ಲಾರಿ ಮಾಲೀಕ ಸೋಮಶೇಖರ್ ಸಾವಿಗೆ ಕಾರಣ ಕೈ ಹಿಡಿದು 2 ದಶಕ ಜೀವನ ನಡೆಸಿದ್ದ ಪತ್ನಿ ಅನ್ನೋ ಆರೋಪ ಕೇಳಿ ಬಂದಿದೆ. ಆಕೆಯ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಸಚಿವ ಮೈಲಾರಪ್ಪನವರ ಹೆಸರೂ ತಳುಕು ಹಾಕಿಕೊಂಡಿದೆ.
ತಾನೇ ಓದಿಸಿ, ಕೆಲಸಕ್ಕೆ ಸೇರಿಸಿದ್ದ ಪತ್ನಿಯಿಂದ್ಲೇ ಆಯ್ತಾ ದೋಖಾ?
ದುರಂತಕ್ಕೆ ಮಾಜಿ ಉಪ ಕುಲಸಚಿವ ಮೈಲಾರಪ್ಪರೇ ಕಾರಣನಾ?
20 ವರ್ಷದ ಹಿಂದೆ ಮೃತ ಸೋಮಶೇಖರ್, ಆಗತಾನೇ ಪಿಯುಸಿ ಮುಗಿಸಿದ್ದ ಪವಿತ್ರಾಳನ್ನು ಮದುವೆಯಾಗಿದ್ದ. ಬಳಿಕ ಪತ್ನಿಯನ್ನ ವಿದ್ಯಾವಂತಳನ್ನಾಗಿ ಮಾಡಬೇಕು ಅಂತ ಕಾಲೇಜಿಗೆ ಸೇರಿಸಿ ಓದಿಸಿದ್ದ.
ಇಷ್ಟೇ ಅಲ್ಲ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೂ ಸೇರಿಸಿದ್ದ. ಕೆಲಸಕ್ಕೆ ಸೇರಿದ ಮೇಲೆಯೇ ಎಲ್ಲವೂ ಬದಲಾಗಿದ್ದು ಅನ್ನೋದು ಸಂಬಂಧಿಕರು ಮಾಡ್ತಿರೋ ಆರೋಪ. ಯಾಕಂದ್ರೆ ಅಲ್ಲಿ ಮಾಜಿ ಉಪ ಕುಲಸಚಿವ ಮೈಲಾರಪ್ಪರ ಪರಿಚಯ ಆಗಿತ್ತಂತೆ. ನಂತರ ಪವಿತ್ರಾ ಹಾಗೂ ಮೈಲಾರಪ್ಪ ಮಧ್ಯೆ ಸಂಬಂಧ ಬೆಳೆದಿತ್ತು. ಇದು ಸೋಮಶೇಖರ್‌ಗೆ ಗೊತ್ತಾಗಿ, ಮೈಲಾರಪ್ಪರ ಪತ್ನಿಯ ಗಮನಕ್ಕೂ ತಂದಿದ್ದರಂತೆ. ಪತ್ನಿಯನ್ನ ತನ್ನ ಜೊತೆ ಉಳಿಸಿಕೊಳ್ಳೋ ಯಾವ ಪ್ರಯತ್ನ ಮಾಡಿದ್ರೂ ಕೈಗೂಡಿರ್ಲಿಲ್ಲ. ಅಲ್ಲದೇ ಇತ್ತೀಚೆಗೆ ಸೋಮಶೇಖರ್ ಮನೆಗೆ ಬಂದು ಪವಿತ್ರಾ ವಾರ್ನ್ ಮಾಡಿ ಹೋಗಿದ್ದಳು ಎನ್ನಲಾಗ್ತಿದ್ದು ಇದೇ ಕಾರಣಕ್ಕೆ ಸೋಮಶೇಖರ್ ಸಾವಿಗೆ ಶರಣಾಗಿದ್ದಾನೆ ಅಂತ ಕುಟುಂಬಸ್ಥರು ನೇರ ಆರೇಪ ಮಾಡ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಭಕ್ತರ ದುರಂತ.. 8 ಮಾಲಾಧಾರಿಗಳ ಸ್ಥಿತಿ ಚಿಂತಾಜನಕ; ಆಗಿದ್ದೇನು?
ಸೋಮಶೇಖರ್ ಸಾವಿನ ಸುದ್ದಿ ಕೇಳಿ ಪವಿತ್ರಾ ಸ್ಥಳಕ್ಕೆ ಬಂದಾಗ ದೊಡ್ಡ ರಂಪಾಟ ನಡೆದು ಹೋಗಿದೆ. ಸೋಮಶೇಖರ್ ಕುಟುಂಬಸ್ಥರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕುಟುಂಬಸ್ಥರು ಪತ್ನಿ ಪವಿತ್ರಾ ಮತ್ತು ಮಾಜಿ ಕುಲಸಚಿವ ಮೈಲಾರಪ್ಪ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಅವರನ್ನ ಅರೆಸ್ಟ್ ಮಾಡಿಲ್ಲ ಅಂದ್ರೆ ಧರಣಿ ಮಾಡ್ತೀವಿ ಅಂತ ಠಾಣೆ ಮುಂಭಾಗ ಆಕ್ರೋಶ ಹೊರಹಾಕಿದ್ದಾರೆ.
ಪತ್ನಿಯ ಕನಸಿಗೆ ಬೆನ್ನೆಲುಬಾಗಿ ನಿಲ್ಲೋಕೆ ಹೊರಟವನಿಗೆ ಬದುಕಲ್ಲಿ ದೋಖಾ ಆಗಿದ್ದು ವಿಪರ್ಯಾಸ. ಅದಕ್ಕಾತ ಜೀವನವನ್ನೇ ಕೊನೆ ಮಾಡ್ಕೊಂಡಿದ್ದು ಮಾತ್ರ ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ