ಇಂದಿನಿಂದ 7 ದಿನ ಬೆಂಗಳೂರಿನ ಹವಾಮಾನದಲ್ಲಿ ಬದಲಾವಣೆ; ಬೇಸಿಗೆ ಕಾಲ ಬಂದೇ ಬಿಟ್ಟಿದ್ಯಾ?

author-image
admin
Updated On
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ಕೆಲಸ ಮಾಡಲೇಬೇಕು; ನೀವು ಓದಲೇಬೇಕಾದ ಸ್ಟೋರಿ!
Advertisment
  • ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೆವ ಚಳಿ, ತಂಗಾಳಿ
  • ಭಾರತೀಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?
  • ಮುಂದಿನ ಒಂದು ವಾರ ರಾಜ್ಯಾದ್ಯಂತ ಒಣ ಹವೆಯದ್ದೇ ಹವಾ

ಬೆಂಗಳೂರು: ಮಳೆ ಬಂತು, ಚಳಿಯೂ ಹೊಯ್ತು. ಈಗ ಸಿಲಿಕಾನ್ ಸಿಟಿ ಸದ್ದಿಲ್ಲದೇ ಬೇಸಿಗೆ ಕಾಲಕ್ಕೆ ಸಜ್ಜಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣ ಹವೆ ಆರಂಭವಾಗಿದ್ದು, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೆವ ಚಳಿ ಕಡಿಮೆ ಆಗುತ್ತಾ ಬಂದಿದೆ. ಅಂದ್ರೆ ಈ ಬಾರಿ ಚಳಿ ಸ್ವಲ್ಪ ಬೇಗನೆ ಮುಗಿಯುತ್ತಿದ್ದು, ಒಣ ಹವೆಯ ವಾತಾವರಣ ಶುರುವಾಗಿದೆ. ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಶಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಅವರು ಬೇಸಿಗೆ ಕಾಲದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

publive-image

ಸದ್ಯ ಮಧ್ಯಭಾರತದಲ್ಲಿ ಗಾಳಿ ವಿರುದ್ಧ ದಿಕ್ಕಿನಲ್ಲಿದೆ. ಇದರಿಂದ ಮುಂದಿನ ಒಂದು ವಾರ ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಫೆಬ್ರವರಿ 1ರಿಂದ ಫೆಬ್ರವರಿ 7ರವರೆಗೆ ಒಣ ಹವೆ ಮುಂದುವರಿಯುವ ಹೆಚ್ಚಿನ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಟೀ ಕುಡಿಯೋದು ಎಷ್ಟು ಡೇಂಜರ್​​? ಚಹಾ ಬಿಟ್ರೆ ಲಾಭಗಳೇನು? ಎಲ್ಲರೂ ಓದಲೇಬೇಕಾದ ಸ್ಟೋರಿ 

ಇನ್ನು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 18 ರಿಂದ 19 ಡಿಗ್ರಿ ಸೆಂಟಿಗ್ರೇಟ್ ಹಾಗೂ ಗರಿಷ್ಠ ಉಷ್ಣಾಂಶ 31-32 ಡಿ.ಸೆ ದಾಖಲಾಗುವ ಸಾಧ್ಯತೆ ಇದೆ. ವಿಜಯಪುರ, ಕಲಬುರ್ಗಿ ಸೇರಿದಂತೆ ಉತ್ತರ ಒಳನಾಡಿನ ಗರಿಷ್ಠ ಉಷ್ಣಾಂಶ 32-34 ಡಿ.ಸೆ. ಕನಿಷ್ಠ ಉಷ್ಣಾಂಶ 16 ಡಿ.ಸೆ ಇರುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಕನಿಷ್ಟ ಉಷ್ಣಾಂಶ 23 ಡಿ.ಸೆ. ಗರಿಷ್ಟ 33 ಡಿ.ಸೆ. ಇರುವ ಸಾಧ್ಯತೆ ಇದೆ.

ರಾಜ್ಯಾದ್ಯಂತ ಬೆಳಗಿನ ಜಾವ ಬೀಳುತ್ತಿದ್ದ ಚುಮು, ಚುಮು ಚಳಿ ಮಾಯವಾಗುತ್ತಿದ್ದು, ಈ ವರ್ಷದ ಬೇಸಿಗೆ ಕಾಲ ಮಾರ್ಚ್ 1ರಿಂದ ಆರಂಭವಾಗುವುದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment