/newsfirstlive-kannada/media/post_attachments/wp-content/uploads/2025/02/BNG_weather.jpg)
ಬೆಂಗಳೂರು: ಇನ್ನೂ ಚಳಿಗಾಲ ಮುಗಿದಿಲ್ಲ. ಆದರೆ ಆಗಲೇ ನಿಗಿ ನಿಗಿ ಬಿಸಿಲು ಬರುತ್ತಿದೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚಳಿಗಾಲ ಮುಗಿಯುವ ಮೊದಲೇ ಬಿಸಿಲ ಝಳ ಗರಿಷ್ಠವಾಗಿದೆ. ಫೆಬ್ರುವರಿಯಲ್ಲೇ ಕ್ರಮೇಣವಾಗಿ ತಾಪಮಾನ ಹೆಚ್ಚುತ್ತಿರುವ ಕಾರಣ ಮಾರ್ಚ್ನಿಂದ ಬಿಸಿಲಿನ ಝಳ ತೀವ್ರವಾಗಿ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಫೆಬ್ರವರಿ ಅಂದರೇ ಇದೆ ತಿಂಗಳಲ್ಲೇ 32 ರಿಂದ 37 ಡಿಗ್ರಿಯವರೆಗೆ ತಾಪಮಾನ ದಾಖಲು ಆಗುತ್ತಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 31.9 ಡಿಗ್ರಿ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 28 ರಿಂದ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ತಮಿಳುನಾಡಿನಿಂದ ಪೂರ್ವ ಮಾರುತಗಳು ಬೀಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚುತ್ತಿದೆ.
ಇದನ್ನೂ ಓದಿ:ಮಹಾ ಕುಂಭಮೇಳಕ್ಕೆ ಹೋಗಿ ಜೀವ ಕಳೆದುಕೊಂಡ ಕರ್ನಾಟಕದ ಮತ್ತೊಬ್ಬ ಯುವಕ
ಫೆಬ್ರುವರಿ 5, ಬುಧವಾರದ ನಂತರ ತಾಪಮಾನದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಈ ತಿಂಗಳಲ್ಲೇ ಬಿಸಿಲು ಹೀಗೆದೆ ಎಂದರೆ ಮಾರ್ಚ್ನಲ್ಲಿ ನಗರದ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಬೇಸಿಗೆಯ ಬಿಸಿಲಿನ ತೀವ್ರತೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಹವಾಮಾನ ಇಲಾಖೆ ತಜ್ಞರ ಸಲಹೆ ನೀಡಿದ್ದಾರೆ.
ಬೆಳಗ್ಗೆ 10 ಗಂಟೆ ಆಗುವಷ್ಟರಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಹೀಗಾಗಿ ಮನೆಯಿಂದ ಹೊರಡುವಾಗ ಜೊತೆಯಲ್ಲಿ ನೀರಿನ ಬಾಟಲ್, ಕೊಡೆ, ತೆಳು ಬಟ್ಟೆ ತೆಗೆದುಕೊಂಡು ಹೋದರೆ ಉತ್ತಮ. ಇನ್ನು ಶಾಲಾ ಮಕ್ಕಳಿಗೆ ಜೊತೆಯಲ್ಲಿ ನೀರಿನ ಬಾಟಲ್ ಅನ್ನು ಪೋಷಕರು ಕೊಟ್ಟು ಕಳಿಸಲೇಬೇಕು. ನಗರ ಪ್ರದೇಶಗಳಲ್ಲಿ ಧೂಳು ಹೆಚ್ಚಾಗುವುದರಿಂದ ಮುಖಕ್ಕೆ ಮಾಸ್ಕ್ ಅಥವಾ ಕರ್ಚೀಪ್ನಿಂದ ರಕ್ಷಣೆ ಮಾಡಿಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ