newsfirstkannada.com

ಮಳೆಗಾಲದಲ್ಲಿ ಅವಾಂತರಗಳು ಸೃಷ್ಟಿ ಆಗಬಾರ್ದು.. ಅಧಿಕಾರಿಗಳಿಗೆ DK ಶಿವಕುಮಾರ್ ಖಡಕ್ ವಾರ್ನಿಂಗ್

Share :

Published May 24, 2024 at 9:06am

    ನಗರದ ಎಲ್ಲಾ ಕಡೆಗಳಲ್ಲಿ ಸಮಸ್ಯೆಗಳನ್ನ ಬಗೆಹರಿಸಲು ಡಿಸಿಎಂ ಸೂಚನೆ

    110 ಹಳ್ಳಿಗಳಿಗೆ ಜೂನ್ ಮೊದಲ ವಾರದಲ್ಲಿ ನೀರು ಪೂರೈಕೆ ಮಾಡಬೇಕು

    ಮಳೆಯಿಂದ ಅವಾಂತರ ಸೃಷ್ಟಿಯಾಗೋ ಸಾಧ್ಯತೆ, ಜಾಗ್ರತೆ ವಹಿಸಬೇಕು

ರಾಜಧಾನಿಯಲ್ಲಿ ಮಳೆಗಾಲದ ಅವಾಂತರಗಳನ್ನ ತಡೆಯೋಕೆ ಸರ್ಕಾರ ಸಜ್ಜಾಗಿದ್ದು ರಾಜಕಾಲುವೆ, ಕೆರೆಗಳ ಒತ್ತುವರಿ ತೆರವಿಗೂ ತಯಾರಿ ನಡೆಸಿದೆ. ಸಿಟಿ ರೌಂಡ್ಸ್ ಹಾಕಿದ್ದ ಸಿಎಂ ಸಿದ್ದರಾಮಯ್ಯ ಒತ್ತುವರಿ ತೆರವಿನ ಬಗ್ಗೆ ಸೂಚನೆ ನೀಡ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ, ಬಿಡಿಎ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಒಂದಷ್ಟು ಸೂಚನೆಗಳನ್ನೂ ನೀಡಿದ್ದಾರೆ.

ಮಳೆ ಆರಂಭವಾಗ್ತಿದ್ದಂತೆ ಸಿಎಂ ಹಾಗೂ ಡಿಸಿಎಂ ಬೆಂಗಳೂರು ರೌಂಡ್ಸ್​ ಹಾಕಿ ನಗರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ರು. ಈ ಬೆನ್ನಲ್ಲೇ ಮಲ್ಲೇಶ್ವರಂನ BBMP ಕಚೇರಿಯಲ್ಲಿ ಬೆಸ್ಕಾಂ, BWSDB, BDA ಅಧಿಕಾರಿಗಳ ಜೊತೆ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ರು. ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗೋ ಸಾಧ್ಯತೆಯಿದ್ದು, ಮಳೆಗಾಲ ಅರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಇದನ್ನೂ ಓದಿ: ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳ ಜನರಿಗೆ ಸಂಕಷ್ಟ.. ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ಹರಿದು ಬರ್ತಿದ್ದಾಳೆ ಗಂಗೆ

BWSDB, BDA, ಬಿಎಂಟಿಎಫ್, ಅರ್ಬನ್ ಡೆವಲಪ್​ಮೆಂಟ್ ಹಾಗೂ ಕಾರ್ಪೋರೇಷನ್ ಸೇರಿ ಎಲ್ಲ ಅಧಿಕಾರ ಜೊತೆ ಕುಳಿತು ಚರ್ಚೆ ಮಾಡಿದ್ದೇನೆ. 5 ಪ್ರಮುಖ ಆದೇಶಗಳನ್ನು (ಫೈವ್ ಪಾಯಿಂಟ್ ಪ್ರೋಗ್ರಾಮ್) ಅವರಿಗೆ ಕೊಟ್ಟಿದ್ದೇನೆ.

ಡಿ.ಕೆ ಶಿವಕುಮಾರ್, ಡಿಸಿಎಂ

ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಏನೇನು ಸೂಚನೆ ನೀಡಿದರು?.

ಮಳೆಗಾಲ ಆರಂಭಕ್ಕೂ ಮೊದಲೇ ಗುಂಡಿ ಮುಚ್ಚಿ ಅಂತಾ ಡಿಕೆಶಿ ಸೂಚನೆ ನೀಡಿದ್ರು. ರಾಜಕಾಲುವೆಯಿಂದ ಮಳೆ ಬಂದ್ರೆ ಪ್ರವಾಹ ಸ್ಥಿತಿ ಆಗುತ್ತೆ. ಈ ಬಗ್ಗೆ ಎಚ್ಚರ ವಹಿಸಬೇಕು. ಅಲ್ಲದೇ ಸಿಟಿಯ ಎಲ್ಲ ಕಡೆ ಪರಿಶೀಲನೆ ಮಾಡಿ ಸಮಸ್ಯೆಗಳನ್ನ ಬಗೆಹರಿಸಲು ಸೂಚನೆ ನೀಡಿದ್ರು. ಜೊತೆಗೆ ರಾಜಕಾಲುವೆ ಹಾಗೂ ಸಿಟಿಯ ಕೆರೆ ಒತ್ತುವರಿ ಬಗ್ಗೆ ಕ್ರಮಕೈಗೊಳ್ಳಲು‌ ಪಾಲಿಕೆ ವ್ಯಾಪ್ತಿಗೆ ಬರುವ BMTF ಗೆ ಹೆಚ್ಚುವರಿ ಜವಬ್ದಾರಿ ನೀಡಿದ್ರು. ಇತ್ತ ಜಲಮಂಡಳಿಗೆ 110 ಹಳ್ಳಿಗಳಿಗೆ ಜೂನ್ ಮೊದಲ ವಾರದಲ್ಲಿ ನೀರು ಪೂರೈಸುವಂತೆ ಸೂಚಿಸಿದ್ರು. ಕುಡಿಯೋ ನೀರಿಗೆ ಕಲುಷಿತ ನೀರು ಮಿಕ್ಸ್ ಆಗ್ತಿರೋದನ್ನ ಪತ್ತೆ ಹಚ್ಚಿ ಸರಿಪಡಿಸಬೇಕು. ಇದರ ಜೊತೆಗೆ ಕುಡಿಯೋನೀರಿನ ಘಟಕಗಳ ಶುದ್ಧೀಕರಣಕ್ಕೂ ಡಿಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇರೋದನ್ನ ಪರಿಶೀಲಿಸಿ, ಅವಶ್ಯಕ ಬಿದ್ರೆ ವಿಶೇಷ ವಕೀಲರನ್ನ ನೇಮಿಸಿ ಕೇಸ್ ಇತ್ಯರ್ಥಗೊಳಿಸಲು ಕೂಡ ಸೂಚಿಸ್ತೀವೆ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ: ‘ಸಿಡಿ ಶಿವು.. ಪೆನ್​ಡ್ರೈವ್ ಸ್ವಾಮಿ..’ ರಾಜ್ಯ ರಾಜಕಾರಣದಲ್ಲಿ ನಾಮಕರಣದ ಸಮರ..!

ಮಳೆಗಾಲದ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿ.ಕೆ ಶಿವಕುಮಾರ್, ಮಳೆಗಾಲ ಶುರುವಾಗೋದರೊಳಗೆ ರಾಜಕಾಲುವೆ, ರಸ್ತೆಗುಂಡಿ ಸೇರಿದಂತೆ ಬೆಂಗಳೂರಿನ ಸಮಸ್ಯೆಗಳಿಗೆ ಮುಕ್ತಿ ನೀಡಿ ಅಂತಾ ಸೂಚಿಸಿದ್ದು, ಸದ್ಯ ಅಧಿಕಾರಿಗಳು ಈಗಲಾದ್ರೂ ಮಳೆ ಅವಾಂತರಗಳಿಗೆ ಕಡಿವಾಣ ಹಾಕ್ತಾರಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗಾಲದಲ್ಲಿ ಅವಾಂತರಗಳು ಸೃಷ್ಟಿ ಆಗಬಾರ್ದು.. ಅಧಿಕಾರಿಗಳಿಗೆ DK ಶಿವಕುಮಾರ್ ಖಡಕ್ ವಾರ್ನಿಂಗ್

https://newsfirstlive.com/wp-content/uploads/2024/05/DK_SHIVAKUMAR_BBMP.jpg

Load More