newsfirstkannada.com

ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?

Share :

Published May 23, 2024 at 4:42pm

    ಮಕ್ಕಳು ಕಣ್ಣು ತೆರೆದು ಪ್ರಪಂಚ ನೋಡೋ ಮುನ್ನವೇ ಕಣ್ಮುಚ್ಚಿದ ತಾಯಿ

    ತನ್ನ ಮಕ್ಕಳನ್ನ ಮುದ್ದಾಡೋ ಮೊದಲೇ ಹಾರಿ ಹೋದ ತಾಯಿಯ ಜೀವ

    ಜುಲೈ 5ಕ್ಕೆ ಡೆಲಿವರಿ ಡೇಟ್ ಇದ್ದಿದ್ರೆ ಏಕಾಏಕಿ ಮೇ 2ರಂದೇ ಹೆರಿಗೆ ಮಾಡಿದ್ರು

ಕಾಲ ಬದಲಾಗಿದೆ ನಿಜ ಆದ್ರೆ, ಹಣದ ಮುಂದೆ ಮಾನವೀಯತೆ ಸತ್ತೋಗಿದ್ಯಾ ಎಂದು ಅನಿಸುತ್ತದೆ. ಈ ಮಾತು ಸತ್ಯ ಅನ್ಸುತ್ತೆ. ಆಕೆ ಬಾಣಂತಿ ಅವಳಿ ಮಕ್ಕಳನ್ನ ಮಡಿಲಲ್ಲಿ ಮುದ್ದಾಡಬೇಕು ಅಂತಾ ಕನಸು ಕಂಡಿದ್ದಳು. ಆದ್ರೆ, ವೈದ್ಯರ ನಿರ್ಲಕ್ಷ್ಯವೋ, ವಿಧಿಯಾಟವೋ ಆ ಮಕ್ಕಳು ಕಣ್ಣು ತೆರೆದು ಪ್ರಪಂಚ ನೋಡೋ ಮುನ್ನವೇ ತಾಯಿ ಕಣ್ಮುಚ್ಚಿದ್ದಾಳೆ.

ಅರಗಿಸಿಕೊಳ್ಳಲಾಗದ ಆಕ್ರಂದನ.. ಮರೆಯಲಾರದ ನೋವು.. ಮಗಳನ್ನ ಕಳೆದುಕೊಂಡ ಸಂಕಟ.. ಮೊಮ್ಮಕ್ಕಳನ್ನ ನೆನೆದು ಗೋಳಾಟ.. ಕಣ್ಣೀರು.. ಬರೀ ಕಣ್ಣೀರು.. ಈ ತಾಯಿಯ ಕಣ್ಣೀರನ ನೋವು ಯಾವ ಶತ್ರುವಿಗೂ ಬೇಡ.. ಹೆತ್ತ ಮಗಳು ಕಣ್ಣೇದುರೇ ಮರೆಯಾದ್ರೆ, ಅದ್ಯಾವ ತಾಯಿ ತಾನೇ ಸಹಿಸುತ್ತಾಳೆ ಹೇಳಿ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್​ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?

ಹೆಸರು ಜನನಿ ಇಂದಿರಾನಗರದ ನಿವಾಸಿ. ಜನನಿ ಹಾಗೂ ಕೇಶವ್ ದಂಪತಿಗೆ ಹಸೆಮಣೆ ಏರಿ 10 ವರ್ಷದ ಬಳಿಕ ದೇವರು ಅವಳಿ ಮಕ್ಕಳನ್ನ ಕರುಣಿಸಿದ್ದ. ಬಟ್ ದೇವರ ಅದ್ಹೇನಿತ್ತೋ ಏನೋ ಯಾಕಂದ್ರೆ ಜನನಿ ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಣು ಮುಚ್ಚಿದ್ದಾಳೆ. ಮಕ್ಕಳನ್ನ ಮುದ್ದಾಡೋ ಕನಸು ಈಡೇರುವ ಮುನ್ನವೇ ಈಕೆ ಜೀವವೇ ಹಾರಿ ಹೋಗಿದೆ. ಒಂದ್ಕಡೆ ಮನೆ ಸೊಸೆಯನ್ನ ಕಳ್ಕೊಂಡು ಅತ್ತೆ ಕುಸಿದು ಬಿದ್ದಿದ್ರೆ, ಇನ್ನೊಂದೆಡೆ ಬಾಳ ಸಂಗಾತಿಯನ್ನ ಕಳ್ಕೊಂಡು ಗಂಡ ನೋವಲ್ಲೇ ಮೌನಕ್ಕೆ ಶರಣಾಗಿದ್ದಾರೆ. ಅಷ್ಟಕ್ಕೂ ಈ ಯಾತನೆಗೆ ಕಾರಣವಾಗಿದ್ದಾದ್ರೂ ಏನು ಗೊತ್ತಾ?.

ಕೊಟ್ಟಿದ್ದು ಒಂದು ಡೇಟ್.. ಡೆಲಿವೆರಿ ಮಾಡಿದ್ದು ಒಂದು ಡೇಟ್!

ಜನನಿ ತುಂಬು ಗರ್ಭಿಣಿಯಾಗಿದ್ದಾಗ ಬೆಂಗಳೂರಿನ ಕ್ಲೌಡ್​ ನೈನ್ ಆಸ್ಪತ್ರೆಯಲ್ಲಿ ರೆಗ್ಯುಲರ್ ಚೆಕ್​ಅಪ್ ಮಾಡಿಸ್ತಿದ್ರು. ​​ಆಸ್ಪತ್ರೆಯವರು ಜುಲೈ 5ಕ್ಕೆ ಡೆಲಿವರಿ ಡೇಟ್ ಕೂಡ ಕೊಟ್ಟಿದ್ರು. ಆದ್ರೆ, ಏಕಾಏಕಿ ಮೇ 2 ರಂದೇ ಜನನಿಗೆ ಡೆಲಿವರಿ ಮಾಡ್ಲಾಗಿತ್ತು. ಜನನಿ ಚೆಂದದ ಅವಳಿ ಮಕ್ಕಳಿಗೆ ಜನ್ಮ ಕೂಡ ನೀಡಿದರು. ದುರಂತ ಏನಂದ್ರೆ, ಜನನಿಗೆ ಇಂಟರ್​ನೆಲ್​ ಬ್ಲೀಡಿಂಗ್ ಶುರುವಾಗಿದೆ. ಈ ವೇಳೆ ಕ್ಲೌಡ್​ ನೈನ್ ಆಸ್ಪತ್ರೆಯವರೇ ಕುಟುಂಬಸ್ಥರಿಗೆ ಮಾಹಿತಿ ನೀಡದೇ ಜನನಿಯನ್ನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರಂತೆ. ಕಳೆದ 20 ದಿನಗಳಿಂದ ಇದೇ ಮಣಿಪಾಲ್ ಆಸ್ಪತ್ರೆಯಲ್ಲಿ ಜನನಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೀಗ ಜನನಿ ಕೊನೆಯುಸಿರು ಎಳೆದಿದ್ದು, ಕುಟುಂಬಸ್ಥರು ಕ್ಲೌಡ್​ ನೈನ್ ಆಸ್ಪತ್ರೆಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮೃತದೇಹ ನೀಡಲು ಆಸ್ಪತ್ರೆಯಿಂದ ₹10 ಲಕ್ಷಕ್ಕೆ ಡಿಮ್ಯಾಂಡ್​ ಆರೋಪ

ಅಲ್ಲದೇ ಆಸ್ಪತ್ರೆಯರು ಬೇಕಾಬಿಟ್ಟಿ ಹಣ ವಸೂಲಿ ಮಾಡಿರುವ ಆರೋಪ ಇದ್ದು, ಬರೋಬ್ಬರಿ 29 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆಂದು ಮೃತಳ ಗಂಡ ಕಣ್ಣೀರಿಟ್ಟಿದ್ದಾರೆ. ನಾನ್ ಬಡ ಡ್ರೈವರ್, ಬಡ್ಡಿಗೆ ದುಡ್ಡು ತಗೊಂಡು ಆಸ್ಪತ್ರೆಗೆ ಬಿಲ್ ಕಟ್ಟೀದ್ದೀನಿ. ಇದೀಗ ಮೃತದೇಹಕ್ಕಾಗಿ ಮತ್ತೆ ಹಣಕ್ಕೆ 10-14 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರಿಂದ ಕಂಗಲಾದ ಜನನಿ ಗಂಡ ನ್ಯೂಸ್​ ಫಸ್ಟ್​ ಮುಂದೆ ತಮ್ಮ ಅಳಲನ್ನ ತೋಡ್ಕೊಂಡಿದ್ರು.

ಇದನ್ನೂ ಓದಿ: BBMPಯಲ್ಲಿ ಕೆಲಸ ಮಾಡ್ತಿದ್ದ ಖತರ್ನಾಕ್.. 19 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಂಧಿಸಿದ್ದೇ ರೋಚಕ

ಸತತ ಸುದ್ದಿ ಪ್ರಸಾರ ಮಾಡಿದ್ದ ನ್ಯೂಸ್​ಫಸ್ಟ್​​ಗೆ ಪ್ರಶಂಸೆಗಳ ಮಹಾಪೂರ

ಅದ್ಯಾವಾಗ ಕ್ಲೌಡ್​ ನೈನ್​ ಆಸ್ಪತ್ರೆಯಲ್ಲಿ ಈ ರೀತಿಯಲ್ಲಿ ಘಟನೆ ನಡೆದಿದೆ ಅನ್ನೋ ವಿಚಾರ ಗೊತ್ತಾಯ್ತು. ನ್ಯೂಸ್ ಫಸ್ಟ್​ ವಾಹಿನಿಯೂ ಸತತವಾಗಿ ಸುದ್ದಿಯನ್ನ ಪ್ರಸಾರ ಮಾಡಿತ್ತು. ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿತ್ತು. ನ್ಯೂಸ್​ ಫಸ್ಟ್​ ಸತತವಾಗಿ ಸುದ್ದಿ ಪ್ರಸಾರ ಮಾಡಿದ್ದರಿಂದ ಮಣಿದ ಆಸ್ಪತ್ರೆಯ ಆಡಳಿತ ಮಂಡಳಿ,ಕಡೆಗೆ ಯಾವುದೇ ಹಣ ಪಡೆಯದೇ ಉಚಿತವಾಗಿಯೇ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂಸ್ತರ ಮಾಡಿದೆ. ನೊಂದವರ ಪರ ನಿಂತು ಸತತವಾಗಿ ಸುದ್ದಿ ಪ್ರಸಾರ ಮಾಡಿದ ನ್ಯೂಸ್​ ಫಸ್ಟ್​ಗೆ, ಕುಟುಂಬಸ್ಥರು, ಸಾಮಾಜಿಕ ಹೋರಾಟಗಾರರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್ ಕೇಸ್​; 2 ಪಬ್​ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್​ ಕಟ್ಟಿದ್ದ ಬಾಲಕ?

ಘಟನೆ ಸಂಬಂಧ ಮೃತ ಜನನಿ ಕುಟುಂಬಸ್ಥರು ಆರೋಗ್ಯಾಧಿಕಾರಿಗೆ ದೂರು ನೀಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಜಿಲ್ಲಾ ಆರೋಗ್ಯಾಧಿಕಾರಿ ರವೀಂದ್ರನಾಥ್ ಮೇಠಿ ಮಾಹಿತಿ ನೀಡಿದ್ದಾರೆ. ಅದ್ಹೇನೆ ಹೇಳಿ, ದುಡ್ಡಿನ ಮುಂದೆ ಮಾನವೀಯತೆ ಮರೀಚಿಕೆಯಾಗಿದ್ದು ಮಾತ್ರ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?

https://newsfirstlive.com/wp-content/uploads/2024/05/Bangalore-pregnant-Death-1.jpg

Load More