/newsfirstlive-kannada/media/post_attachments/wp-content/uploads/2024/02/cyber_crime_2.jpg)
ವಿಶ್ವದಲ್ಲಿ ಟೆಕ್ನಾಲಜಿ ಡೆವಲಪ್​ ಆಗುತ್ತಿದ್ದಂತೆ ಆನ್​ಲೈನ್​ ಮೂಲಕ ಹಣ ಲಪಟಾಯಿಸುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಇಷ್ಟು ದಿನ ಆನ್​ಲೈನ್​ ಆ್ಯಪ್​, ಆನ್​ಲೈನ್​ ಮಾರ್ಕೆಟಿಂಗ್, ಮೆಸೇಜ್​ಗಳು, ಇನ್​ಸ್ಟಾ ಹಾಗೂ ಫೇಸ್​ಬುಕ್​ ಮೂಲಕ ಬ್ಯಾಂಕ್​ ಅಕೌಂಟ್​ಗೆ ಕನ್ನ ಹಾಕುತ್ತಿದ್ದರು. ಕೇವಲ ಒಂದೇ ಒಂದು ಕಾಲ್​ ರಿಸೀವ್​ ಮಾಡಿದ್ದಕ್ಕೆ ಒಂದು ಕೋಟಿಗೂ ಹೆಚ್ಚು ರೂಪಾಯಿಗಳನ್ನು ವೃದ್ಧೆಯೊಬ್ಬರು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
ಈ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದ ವೃದ್ಧೆ ಎಲ್ಲೋ ಅಮೆರಿಕದವರೋ, ಫ್ರಾನ್ಸ್​​ನವರೋ ಅಲ್ಲ. ಇದೇ ಬೆಂಗಳೂರಿನ ಆರ್​.ಟಿ ನಗರದವರು. ಹೆಸರು ಲಕ್ಷ್ಮಿ ಶಿವಕುಮಾರ್ ಇವರಿಗೆ 76 ವರ್ಷಗಳು ಆಗಿವೆ. ಇವರಿಗೆ ಕಳೆದ ತಿಂಗಳು ಜೂನ್​ನಲ್ಲಿ ಅಪರಿಚಿತ ನಂಬರ್​​ನಿಂದ ಫೋನ್ ಕಾಲ್ ಬಂದಿದ್ದರಿಂದ ರಿಸೀವ್ ಮಾಡಿ ಮಾತನಾಡಿದ್ದಾರೆ. ನಾವು ಟೆಲಿಕಮ್ಯುನಿಕೇಷನ್​ ಮಾತನಾಡುತ್ತಿದ್ದೇವೆ. ನೀವು ಸಿಮ್​ಕಾರ್ಡ್​ ಅನ್ನು ಖರೀದಿ ಮಾಡಿ ಅಕ್ರಮ ಚಟುವಟಿಕೆಗಳಿಗೆ ಬಳಸಿದ್ದೀರಿ. ಹೀಗಾಗಿ ಮುಂಬೈಯಲ್ಲಿರೋ ಕ್ರೈಂ ಬ್ರ್ಯಾಂಚ್​ನಲ್ಲಿ ಕೇಸ್ ದಾಖಲಾಗಿದ್ದು ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸುಳ್ಳು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್​ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಇದರಿಂದ ವೃದ್ಧೆ ಗಾಬರಿಗೊಂಡಿದ್ದರು. ಮತ್ತೊಂದು ಕಾಲ್ ಅದೇ ರೀತಿ ಬಂದಿದೆ. ಸಂದೀಪ್ ರಾವ್ ಮತ್ತು ಆಕಾಶ್ ಎಂದು ಕ್ರೈಂ ಬ್ರಾಂಚ್‌ನಿಂದ ಮಾತಾಡುತ್ತಿದ್ದೇವೆ ಎಂದಿದ್ದಾರೆ. ನಿಮ್ಮ ಅಕೌಂಟ್​​ನಿಂದ ಸುಮಾರು 60 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದನ್ನ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಅಕೌಂಟ್, ಇನ್ವೆಸ್ಟ್​​ಮೆಂಟ್​ ದಾಖಲೆ ಕೊಡಿ. ಇಲ್ಲದಿದ್ದರೇ ನಿಮ್ಮನ್ನ ಬಂಧಿಸಬೇಕಾಗುತ್ತದೆ ಎಂದು ನಕಲಿ ಎಫ್‌ಐಆರ್ ಕಾಪಿ​ ತೋರಿಸಿದ್ದಾರೆ. ಇದೆಲ್ಲವನ್ನು ಕೇಳಿದ ವೃದ್ಧೆ ನಿಜ ಇರಬಹುದೆಂದು ನಂಬಿದ್ದಾರೆ.
ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
ಹೀಗಾಗಿ ತನ್ನ ಬ್ಯಾಂಕ್​ ಖಾತೆಯ ವಿವರ, ಆಧಾರ್ ಕಾರ್ಡ್​ ಇತ್ಯಾದಿಗಳನ್ನು ದಾಖಲೆಗಳನ್ನ ಖದೀಮರಿಗೆ ನೀಡಿದ್ದಾರೆ. ಈ ಎಲ್ಲವನ್ನು ಕೊಟ್ಟಿದ್ದೇ ತಡ ವೃದ್ಧೆಯ ಅಕೌಂಟ್​ನಿಂದ 1 ಕೋಟಿ 28 ಲಕ್ಷದ 70 ಸಾವಿರ ರೂಪಾಯಿಗಳನ್ನ ಲಪಟಾಯಿಸಿ ಮತ್ತೆ ವಾಪಸ್ ಮಾಡುವುದಾಗಿ ಹೇಳಿದ್ದಾರೆ. ಅವರು ಹಣ ಹಾಕಬಹುದೆಂದು ತನ್ನ ಬ್ಯಾಂಕ್ ಅಕೌಂಟ್​ ಅನ್ನು ವೃದ್ಧೆ ಚೆಕ್​ ಮಾಡುತ್ತಾ ಇದ್ದರಂತೆ. ಆದ್ರೆ ಹಣನೂ ಇಲ್ಲ, ಯಾವುದು ಫೋನ್ ಕಾಲ್ ಕೂಡ ಬಂದಿಲ್ಲ. ಹಾಗಾಗಿ ತನಗೆ ಬಂದ ನಂಬರ್​ಗೆ ಫೋನ್ ಮಾಡಿದರೆ ಸ್ವಿಚ್​ ಆಫ್​ ಎಂದು ಹೇಳುತ್ತಿದೆ. ಇದರಿಂದ ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್​ ಪೊಲೀಸರಿಗೆ ವೃದ್ಧೆಯ ಕುಟುಂಬಸ್ಥರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆನ್​ಲೈನ್​ ಮೂಲಕ ಹಣ ಮೋಸವಾದರೆ ಸಿಕ್ಕರೆ ಸಿಗಬಹುದು, ಇಲ್ಲ ಅಂದರೆ ದುಡ್ಡು ಹೋದಾಗೆ ಆಗುತ್ತದೆ. ಹೀಗಾಗಿ ಜನರು ಹಣದ ಬಗ್ಗೆ ಜಾಗೃತಿಯಾಗಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ