newsfirstkannada.com

ಬೆಂಗಳೂರು ಯೂಟ್ಯೂಬರ್​ ವಿಕಾಸ್​ ಗೌಡ ಅರೆಸ್ಟ್​! ನಿರ್ಬಂಧಿತ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿದ್ದಕ್ಕೆ ಬಂಧನ

Share :

Published April 17, 2024 at 8:44am

    ಕನ್ನಡದ ಯೂಟ್ಯೂಬರ್ ವಿಕಾಸ್​ ಗೌಡನನ್ನು ಅರೆಸ್ಟ್​ ಮಾಡಿದ ಪೊಲೀಸರು

    ನಿಯಮ ಮೀರಿ ವಿಡಿಯೋ ಮಾಡಿ ಯ್ಯೂಟೂಬ್​ನಲ್ಲಿ ಹಂಚಿಕೊಂಡ ವ್ಲಾಗರ್

    ಯೂಟ್ಯೂಬ್​ ವಿಡಿಯೋ ಆಧರಿಸಿ ವಿಕಾಸ್​ ಗೌಡನ ಬಂಧನ, ಮುಂದುವರೆದ ತನಿಖೆ

ಬೆಂಗಳೂರು: ಕನ್ನಡದ ಯೂಟ್ಯೂಬರ್​ವೋರ್ವ ನಿರ್ಬಂಧಿತ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿ ಅರೆಸ್ಟ್ ಆದ ಘಟನೆ ಏರ್ಪೋರ್ಟ್​ನಲ್ಲಿ ಬೆಳಕಿಗೆ ಬಂದಿದೆ. ಬಂಧಿತನನ್ನು ಯಲಹಂಕ ಮೂಲಕ ಯೂಟ್ಯೂಬರ್ ವಿಕಾಸ್ ಗೌಡ ಎಂದು ಗುರುತಿಸಲಾಗಿದೆ.

ವಿಕಾಸ್ ಗೌಡ ವೀವ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಿಯಮ ಮೀರಿ ವಿಡಿಯೋ ಮಾಡಿದ್ದನು. ಏರ್ಪೋರ್ಟ್ ರನ್ ವೇ ಚಿತ್ರೀಕರಣ ಮಾಡಿ ತಗ್ಲಾಕೊಂಡಿದ್ದನು. ಹೀಗಾಗಿ ನಿರ್ಬಂಧಿತ ಪ್ರದೇಶಕ್ಕೆ ಹೋಗಿ ವಿಡಿಯೋ ಮಾಡಿದ್ದಕ್ಕೆ ಯೂಟ್ಯೂಬರ್​ ಕೇಸ್ ಹಾಕಿಸಿಕೊಂಡಿದ್ದನು.

ವಿಕಾಸ್​ ಗೌಡ ವಿಡಿಯೋದಲ್ಲಿ 24 ಗಂಟೆ ರನ್ ವೇ ಬಳಿಯೇ ಇದ್ದೆ ಎಂದು ಹೇಳಿಕೊಂಡು ವಿಡಿಯೋ ಮಾಡಿದ್ದನು. ಟಿಕೆಟ್ ಇಲ್ಲದೆ ಒಳಗಡೆ ಹೋಗಿದ್ದೆ ಎಂದು ಹೇಳಿಕೊಂಡಿದ್ದನು. ವಿಡಿಯೋ ಮಾಡಿ ತನ್ನ ಯೂಟ್ಯೂಬ್ ನಲ್ಲಿ ಹಾಕಿಕೊಂಡಿದ್ದನು.

ಇದನ್ನೂ ಓದಿ: iPhone​ ಕೊಡಿಸಿಲ್ಲವೆಂದು ಮನೆಬಿಟ್ಟು ಹೋದ 10 ತರಗತಿ ಬಾಲಕ.. ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಪೋಷಕರು

ಯೂಟ್ಯೂಬರ್ ವಿಡಿಯೋ ಬಳಿಕ ಏರ್ಪೋರ್ಟ್ ಪೊಲೀಸರಿಂದ ಯೂಟ್ಯೂಬರ್ ವಿಕಾಸ್ ಗೌಡ ಬಂಧನವಾಗಿದೆ. ಆತನ ಮೇಲೆ ಸಿಐಎಸ್ಎಫ್ ಅಧಿಕಾರಿಗಳು ಕೇಸ್​​ ದಾಖಲಿಸಿಕೊಂಡಿದ್ದಾರೆ.

ಇನ್ನು ಪೊಲೀಸರ ವಿಚಾರಣೆ ವೇಳೆ ವಿಕಾಸ್ ಗೌಡ ಟಿಕೆಟ್ ಪಡೆದಿರೋದಾಗಿ ಒಪ್ಪಿಕೊಂಡಿದ್ದಾನೆ. ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದನು. ಟಿಕೆಟ್ ಪಡೆದು ಟ್ರಾವೆಲ್ ಮಾಡದೇ ರನ್ ವೇಯಲ್ಲಿ ಉಳಿದುಕೊಂಡಿದ್ದನು. ಸುಮಾರು ನಾಲ್ಕೈದು ಗಂಟೆಗಳ ಕಾಲ ಉಳಿದುಕೊಂಡಿದ್ದನು. ನಂತರ ಅಲ್ಲಿಯೇ ವಿಡಿಯೋ ಮಾಡಿಕೊಂಡು ಬಂದಿದ್ದನು.

ವಿಕಾಸ್​ ಗೌಡ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಣ್ತಪ್ಪಿಸಿ ಏರ್ಪೋರ್ಟ್ ಪ್ರವೇಶ ಮಾಡಿದ್ದಾನೆ. ಬಳಿಕ ವಿಡಿಯೋ ಮಾಡಿದ್ದಾನೆ. ಸದ್ಯ ಈ ಬಗ್ಗೆ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೂಟ್ಯೂಬರ್ ವಿಕಾಸ್ ಗೌಡನನ್ನ ಬಂಧಿಸಿದ ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಯೂಟ್ಯೂಬರ್​ ವಿಕಾಸ್​ ಗೌಡ ಅರೆಸ್ಟ್​! ನಿರ್ಬಂಧಿತ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿದ್ದಕ್ಕೆ ಬಂಧನ

https://newsfirstlive.com/wp-content/uploads/2024/04/Vikas-Gowda.jpg

Load More