/newsfirstlive-kannada/media/post_attachments/wp-content/uploads/2024/08/BNG-1.jpg)
ರಾಜ್ಯದೆಲ್ಲೆಡೆ ಆರ್ಭಟಿಸಿ ಅವಾಂತರ ಸೃಷ್ಟಿಸಿದ್ದ ವರುಣ ನಿನ್ನೆ ಸಂಜೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತ್ಯಕ್ಷಗೊಂಡು ನರ್ತಿಸಿದ್ದ. ದಿಢೀರ್ ಅಂತ ಆರ್ಭಟಿಸಿದ್ದ ಮಳೆಗೆ ರಾತ್ರಿ ಇಡೀ ರಾಜಧಾನಿ ಬೆಂಗಳೂರು ತತ್ತರಿಸಿದೆ. ಮನೆ ಕಡೆ ಮುಖ ಮಾಡಿದ್ದ ಸಿಟಿ ಮಂದಿ ಮಳೆ ನೀರಿಗೆ ಸಿಲುಕಿ ಒದ್ದಾಡಿದ್ರೆ. ರಸ್ತೆಯೆಲ್ಲಾ ನದಿಯಂತೆ ಮಾರ್ಪಟ್ಟು ನಾನಾ ಅವಾಂತರಕ್ಕೆ ದಾರಿ ಮಾಡಿ ಕೊಟ್ಟಿದೆ.
ಸಂಜೆಗಿಂತ ರಾತ್ರಿ ಮಳೆಯಾರ್ಭಟ... ಬೆಚ್ಚಿಬಿದ್ದ ಸಿಟಿ ಜನ..!
ಮೊದಲ ಶ್ರಾವಣ ಸೋಮವಾರ. ರಾಜಧಾನಿ ಬೆಂಗಳೂರಿಗೆ ಮಳೆರಾಯ ದಿಢೀರ್ ಅಂತ ಎಂಟ್ರಿ ಕೊಟ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ. ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆ ರಾತ್ರಿಯಾಗುತ್ತಿದ್ದಂತೆ ಜೋರಾಗಿ ಅಬ್ಬರಿಸಿತ್ತು. ಕಣ್ಣು ಮುಚ್ಚಿ ತೆರೆದುಕೊಳ್ಳುವಷ್ಟುರಲ್ಲಿ ರಸ್ತೆಯೆಲ್ಲಾ ನದಿಯಂತೆ ಮಾರ್ಪಟ್ಟಿದ್ರೆ, ಕೆಲ್ಸ ಮುಗಿಸಿ ಮನೆಯತ್ತ ಮುಖ ಮಾಡಿದ್ದ ಸಿಟಿ ಮಂದಿ ಬೆಚ್ಚಿಬಿದ್ದಿದ್ರು.
ಅವಾಂತರ 1 : ಮಿನಿ ಕೆರೆಯಂತಾದ ಪ್ರಮುಖ ರಸ್ತೆಗಳು
ಅಬ್ಬಬ್ಬಾ..! ದೃಶ್ಯ ನೋಡ್ತಿದ್ರೆ ಕೆರೆಯಲ್ಲಿ ವಾಹನ ಸಂಚಾರವೋ ಎಂಬಂತೆ ಬಾಸವಾಗ್ತಿದೆ.. ಇದು ಜಯಮಹಲ್ ರಸ್ತೆಯ ಅವಾಂತರ ಆಗಿದ್ದು, ರಾತ್ರಿ ಇಡೀ ಸುರಿದ ಮಳೆ ನೀರಿಗೆ ಮಿನಿ ಕೆರೆಯಂತಾಗಿದೆ.. ಇತ್ತ ನಾಯಂಡಹಳ್ಳಿಯ ಪ್ರಮುಖ ರಸ್ತೆಗೂ ನುಗ್ಗಿದ ಮಳೆ ನೀರು ವಾಹನ ಸವಾರರ ಹಿಡಿಶಾಪಕ್ಕೆ ಕಾರಣ ಆಗಿದೆ.. ಕೋರಮಂಗಲ, ಪುಲಕೇಶಿ ನಗರ, ನರ್ತನಪೇಟೆಯಲ್ಲೂ ವರುಣನ ಕೋಪಕ್ಕೆ ರಸ್ತೆಯೆಲ್ಲಾ ಜಲಾವೃತ ಗೊಂಡಿದ್ದು, ಸಾಕಷ್ಟು ವಾಹನ ಸವಾರರು, ಪಾದಾಚಾರಿಗಳು ರಸ್ತೆದಾಟಲು ಪರದಾಡಿದ್ದಾರೆ..
ಅವಾಂತರ 2 : ರಸ್ತೆಗಳು ಜಲಾವೃತ ಸವಾರರು ಹೈರಾಣು
ಧಾರಾಕಾರವಾಗಿ ಸುರಿದ ಮಳೆ ನೀರಿಗೆ ಬ್ರಿಗೇಡ್ ರಸ್ತೆ, ಮಡಿವಾಳ, ಶಾಂತಿನಗರ ಬಸ್ ಸ್ಟ್ಯಾಂಡ್, ಯಡಿಯೂರು ಕೆರೆ, ವಿಲ್ಸನ್ ಗಾರ್ಡನ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. 2 ಅಡಿಗೂ ಹೆಚ್ಚು ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ವಾಹನಗಳೆಲ್ಲಾ ಅರ್ಧ ಮುಳುಗಡೆಯಾಗಿದ್ವು. ನಿಧಾನಗತಿ ಸಂಚಾರದಿಂದ ವಾಹನ ಸವಾರರು ಅಕ್ಷರಶಃ ಹೈರಾಣಾಗ್ಬಿಟ್ಟಿದ್ದಾರೆ.
ಅವಾಂತರ 3 : ಅಂಡರ್ ಪಾಸ್ಗಳಲ್ಲಿ ನಿಂತ ಮಳೆ ನೀರು
ಇನ್ನು ಆಡುಗೋಡಿ, ಅಗರ, ಮೆಜೆಸ್ಟಿಕ್, ನಾಗವಾರ, ಟಾಟ ಇನ್ಸ್ಟಿಟ್ಯೂಟ್ ಅಂಡರ್ ಪಾಸ್ ಸೇರಿದಂತೆ ನಗರದ ಹಲವು ಅಂಡರ್ ಪಾಸ್ಗಳಲ್ಲಿ ಮಳೆ ನೀರು ನಿಂತಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಜೋರು ಮಳೆ ಹಿನ್ನೆಲೆ ಮುಂದೆ ಸಾಗಲಾಗದೆ ಸವಾರರು ಕೈಕಟ್ಟಿನಿಂತಿದ್ರು..
ಅವಾಂತರ 4 : ಮಳೆಗೆ ರಸ್ತೆಗೆ ಉರುಳಿದ ಮರದ ಕೊಂಬೆ
ಇತ್ತ ಅಬ್ಬರಿಸಿದ ವರುಣನ ಆರ್ಭಟಕ್ಕೆ ಹನುಮಂತ ನಗರದ ಪ್ರಮುಖ ರಸ್ತೆ ಮತ್ತು ವೈಯಾಲಿಕಾವಲ್ ರಸ್ತೆಯಲ್ಲಿ ಮರದ ಕೊಂಬೆಗಳು ಉರುಳಿ ಬಿದ್ದಿದೆ. ರಸ್ತೆ ಬಂದ್ ಆಗಿದ್ದ ಪರಿಣಾಮ ರಾತ್ರಿ ಮನೆಯತ್ತ ಮುಖ ಮಾಡಿದ್ದ ಸವಾರರು ಒದ್ದಾಡಿದ್ದಾರೆ.
ಅವಾಂತರ 5 : ಸೋರುತ್ತಿರೋ ಮೆಜೆಸ್ಟಿಕ್ ರೈಲ್ವೆ ಸ್ಟೇಶನ್ ಮಾಳಿಗೆ
ನಿರಂತರವಾಗಿ ಸುರಿದ ಮಳೆಗೆ ಮೆಜೆಸ್ಟಿಕ್ ರೈಲ್ವೆ ಸ್ಟೇಶನ್ ಮಾಳಿಗೆ ಸೋರ್ತಿರೋ ದೃಶ್ಯ ಕಂಡು ಬಂದಿತ್ತು. ಎಷ್ಟೇ ಹೇಳಿದ್ರೂ ಬಿಬಿಎಂಪಿ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ ಅಂತ ಸೋರುತ್ತಿರೋ ಮಾಳಿಗೆ ಕಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ರು.
ಅವಾಂತರ 6 : ರಸ್ತೆ ಜಲಾವೃತ.. ಫೀಲ್ಡ್ಗಿಳಿದ ಟ್ರಾಫಿಕ್ ಪೊಲೀಸ್
ಇತ್ತ ನಾಗವಾರ ಜಂಕ್ಷನ್ನಲ್ಲಿ ಮಳೆಯಿಂದಾಗಿ ವಾಟರ್ ಲಾಗಿಂಗ್ ಆಗಿತ್ತು. ಮುಂದೆ ಹೋಗೋದಕ್ಕೂ ಆಗದೇ ನಿಧಾನಗತಿಯ ಸಂಚಾರ ನಿರ್ಮಾಣ ವಾಗಿತ್ತು. ತಕ್ಷಣ ಫೀಲ್ಡ್ಗಿಳದ ಸಂಚಾರಿ ಪೊಲೀಸರು ಜೆಸಿಬಿ ಮೂಲಕ ನೀರು ಕ್ಲೀಯರ್ ಮಾಡೋ ತಂತ್ರಕ್ಕೆ ಕೈ ಹಾಕಿದ್ರು. ಈ ವೇಳೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅವಾಂತರ 7 : ಅಂಗಡಿಗಳಿಗೆ ನುಗ್ಗಿದ ನೀರು.. ಜನರ ಕಿಡಿ
ಪುಲಕೇಶಿ ನಗರದಲ್ಲಿ ನೀರು ಕಟ್ಟಿ ನಿಂತು ಅಂಗಡಿಗಳಿಗೆ ನುಗ್ಗಿದ್ದು, ವ್ಯಕ್ತಿಯೋರ್ವ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾನೆ. ಇದಕ್ಕೇನಾ ನಿಮಗೆ ನಾವು ಓಟ್ ಹಾಕಿದ್ದು ಅಂತ ಕಾಂಗ್ರೆಸ್ ಸರ್ಕಾರ ವಿರುದ್ಧ ಸಿಟ್ಟಾಗಿದ್ದ.
ಒಟ್ಟಾರೆ, ಮಳೆಯಿಂದಾಗಿ ಮನೆಗಳಿಗೆ ಹೋಗುವ ಜನರಿಗೆ ಮಳೆ ಎಫೆಕ್ಟ್ ತಟ್ಟಿದೆ. ಕಳೆದ ಅರ್ಧ ಗಂಟೆಗೂ ಕಾಲ ಅಧಿಕ ಸುರಿದ ಮಳೆಯಿಂದಾಗಿ ವಾಹನ ಸವಾರರು ಅಕ್ಷರಶಃ ಒದ್ದಾಡಿ ಹೈರಾಣಾಗಿದ್ದಾರೆ. ಪೂರ್ವ ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ ಹಿನ್ನೆಲೆ ಇನ್ನೂ 4 ದಿನ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ