newsfirstkannada.com

ಬೆಂಗಳೂರಿನ 5 ಬಾಂಬ್​ ಬ್ಲಾಸ್ಟ್​ ಪ್ರಕರಣ.. ಒಂದೊಂದು ಸ್ಫೋಟದ ಇಂಚಿಂಚು ಮಾಹಿತಿ ಇಲ್ಲಿದೆ

Share :

Published March 2, 2024 at 5:47pm

Update March 2, 2024 at 6:18pm

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಪತ್ತೆಯಾಗಿತ್ತು ಬಾಂಬ್​

  ಚರ್ಚ್​ ಸ್ಟ್ರೀಟ್​ನ ರೆಸ್ಟ್ರೋರೆಂಟ್​ವೊಂದರ​ ಮುಂಭಾಗ ನಡೆದಿತ್ತು​ ಬ್ಲಾಸ್ಟ್​

  2008ರಿಂದ ಹಿಡಿದು ಬೆಂಗಳೂರಿನಲ್ಲಿ ನಡೆದ ಬಾಂಬ್​ ಬ್ಲಾಸ್ಟ್​ ಪ್ರಕರಣಗಳು ಎಷ್ಟು?

ಬೆಂಗಳೂರು ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಈ ಮಹಾನಗರದಲ್ಲಿ ಒಂದೂವರೆ ಕೋಟಿ ಜನರು ಜೀವಿಸುತ್ತಿದ್ದಾರೆ. ಅಭಿವೃದ್ಧಿಶೀಲ ನಗರವಾದ ಬೆಂಗಳೂರನ್ನು ಈ ಮೊದಲಿನಿಂದಲೂ ಉಗ್ರರು ಟಾರ್ಗೆಟ್​ ಮಾಡಿಕೊಂಡು ಬಂದಿದ್ದಾರೆ. ಇದುವರೆಗೆ ಒಟ್ಟು 5 ಬಾರಿ ದಾಳಿ ನಡೆದಿದ್ದು, 3 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

2008ರಲ್ಲಿ ನಡೆದ ಸ್ಫೋಟ

2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆದಿತ್ತು. 25 ಜುಲೈ ತಿಂಗಳಿನಲ್ಲಿ ಒಂಭತ್ತು ಬಾಂಬ್​ಗಳು ಸರಣಿ ಸ್ಫೋಟಗೊಂಡವು. ಇದರಲ್ಲಿ ಇಬ್ಬರು ಸಾವನ್ನಪ್ಪಿದರು. 20 ಜನರಿಗೆ ಗಾಯಗಳಾಗಿತ್ತು. ಅಂದು ಕಚ್ಚಾ ಬಾಂಬ್​ ಬಳಸಿ ಈ ಸ್ಫೋಟ ನಡೆಸಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು.

2010 ಸ್ಟೇಡಿಯಂ ಬ್ಲಾಸ್ಟ್​

17 ಏಪ್ರಿಲ್​ 2 010ರಲ್ಲಿ ಬೆಂಗಳೂರು ಸ್ಟೇಡಿಯಂ ಬ್ಲಾಸ್ಟ್​ ನಡೆದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ದಾಳಿ ಸಂಭವಿಸಿತ್ತು. ಜನರು ತುಂಬಿದ್ದ ಸ್ಟೇಡಿಯಂನಲ್ಲಿ ಎರಡು ಬಾಂಬ್​ ಸ್ಫೋಟಗೊಂಡಿದ್ದವು. ಈ ದುರ್ಘಟನೆಯಲ್ಲಿ 15 ಜನರು ಗಾಯಗೊಂಡಿದ್ದರು. ಮೂರನೇ ಬಾಂಬ್​ ಕ್ರೀಡಾಂಗಣದ ಹೊರಗಡೆ ಪತ್ತೆಯಾಗಿತ್ತು. ಇದನ್ನು ಭದ್ರತಾ ದಳ ನಿಷ್ಕ್ರೀಯಗೊಳಿಸಿತ್ತು.

2013ರ ಸ್ಫೋಟ

ಇದು 17 ಎಪ್ರಿಲ್​ 2013ರಲ್ಲಿ ನಡೆದ ಸ್ಫೋಟವಾಗಿದೆ. ಮಲ್ಲೇಶ್ವರಂನ ದೇವಸ್ಥಾನದ 11ನೇ ಕ್ರಾಸ್​ನಲ್ಲಿರುವ ಬಿಜೆಪಿ ಹೊಸ ಕಚೇರಿಯ ಬಳಿ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದರು. ಸೈಯದ್​ ಅಲಿ ಮತ್ತು ಜಹಾನ್​ ಅಮೀರ್​ ಎಂಬ ಇಬ್ಬರು ಈ ದಾಳಿಯಲ್ಲಿ ಅರೆಸ್ಟ್​ ಆಗಿದ್ದರು.

ಚರ್ಚ್​ ಸ್ಟ್ರೀಟ್​ನಲ್ಲಿ ನಡೆದ ದುರ್ಘಟನೆ

2014ರ ಸ್ಫೋಟ

28 ಡಿಸೆಂಬರ್​ 2014ರಲ್ಲಿ ನಡೆದ ಸ್ಫೋಟ ಇದಾಗಿದೆ. ಬೆಂಗಳೂರಿನ ಚರ್ಚ್​ ಸ್ಟ್ರೀಟ್​ನಲ್ಲಿ ದುರ್ಘಟನೆ ಸಂಭವಿಸಿದೆ. ಅಲ್ಲಿನ ಕೋಕೋನಟ್​ ಗ್ರೋವ್​ ರೆಸ್ಟೋಂರೆಂಟ್​ ಹೊರಗೆ ಇದ್ದ ಹೂವಿನ ಕುಂಡದಲ್ಲಿ ಐಇಡಿ ಬಳಸಿ ಸ್ಫೋಟಿಸಲಾಗಿತ್ತು. ರಾತ್ರಿ 8;30ಕ್ಕೆ ಈ ಸ್ಫೋಟ ಸಂಭವಿಸಿತ್ತು.

ಈ ಭಯಾನಕ ಘಟನೆ ಬೆಂಗಳೂರನ್ನೇ ಬೆಚ್ಚಿ ಬೀಳಸಿತ್ತು. ಚರ್ಚ್​ ಸ್ಟ್ರೀಟ್ ಬ್ಲಾಸ್ಟ್​ನಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು. ಭವಾನಿ ಎಂಬ 37 ವರ್ಷದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಆದರೆ ಈ ಸ್ಟೋಟದ ಪ್ರಕರಣದಲ್ಲಿ ಹೈದರ್​ ಅಲಿ ಮತ್ತು ಒಮರ್​​ ಸಿದ್ದಿಕಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ನಿನ್ನೆ ನಡೆದ ‘ದಿ ರಾಮೇಶ್ವರಂ ಕೆಫೆ’ ಬ್ಲಾಸ್ಟ್ ಎಲ್ಲರನ್ನು ಬೆಚ್ಚಿ ಬೀಳಿಸಿದೆ​. ಸುಮಾರು 10 ಮಂದಿ ಈ ಸ್ಫೋಟದಿಂದ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

ಭಾರತದಲ್ಲಿ ಇದುವರೆಗೆ ನಡೆದ ದಾಳಿಗಳು

ಬೇಸರದ ಸಂಗತಿ ಎಂದರೆ ಭಾರತದಲ್ಲಿ 1970 ರಿಂದ 2018ರವರೆಗೆ 12 ಸಾವಿರಕ್ಕೂ ಇಂತಹ ಘಟನೆಗಳು ಸಂಭವಿಸಿವೆ. ಅದರಲ್ಲಿ 19,866 ಜನರು ಸಾವನ್ನಪ್ಪಿದರೆ, 30,544 ಜನರು ಗಾಯಗೊಂಡಿದ್ದಾರೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ 5 ಬಾಂಬ್​ ಬ್ಲಾಸ್ಟ್​ ಪ್ರಕರಣ.. ಒಂದೊಂದು ಸ್ಫೋಟದ ಇಂಚಿಂಚು ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/03/Bomb-balst.jpg

Load More