/newsfirstlive-kannada/media/post_attachments/wp-content/uploads/2025/06/cake-boy-death.jpg)
ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದ 5 ವರ್ಷದ ಮಗು ಬಲಿಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ವೊಂದು ಸಿಕ್ಕಿದೆ. ಎಂಟು ತಿಂಗಳ ಬಳಿಕ ಯಾರೂ ಊಹಿಸಲಾರದ ಟ್ವಿಸ್ಟ್ ಪಡೆದುಕೊಂಡಿದೆ ಈ ಕೇಸ್. ಎಫ್ಎಸ್ಎಲ್ ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ರಿವೀಲ್ ಆಗಿದೆ.
ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..
ಏನಿದು ಪ್ರಕರಣ?
2024ರ ಅಕ್ಟೋಬರ್ 7ರಂದು ಬೆಂಗಳೂರಿನ ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಫುಡ್ ಪಾಯಿಸನ್ನಿಂದ 5 ವರ್ಷದ ಮಗು ಬಲಿಯಾಗಿತ್ತು. ಅಲ್ಲದೇ ತಂದೆ ಹಾಗೂ ತಾಯಿ ಸ್ಥಿತಿ ಗಂಭೀರವಾಗಿ, ಇಬ್ಬರಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಫುಡ್ ಪಾಯಿಸನ್ ಆಗಿದೆ ಅನ್ನೋ ವಿಚಾರ ಹರಿದಾಡಿತ್ತು.
ಈ ಬಗ್ಗೆ ಎಫ್ಎಸ್ಎಲ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೀಗ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಅಚ್ಚರಿಯ ವಿಚಾರ ರಿವೀಲ್ ಆಗಿದೆ. ಫ್ರಿಡ್ಜ್ನಲ್ಲಿಟ್ಟ ವಾಂಗಿಬಾತ್ಗೆ ಫಂಗಸ್ ಆಗಿತ್ತು, ಇದೇ ವಾಂಗಿಬಾತ್ ತಿಂದ ಎಫೆಕ್ಟ್ನಿಂದ ಮಗು ಮೃತಪಟ್ಟಿದೆ ಎಂದು ದೃಢವಾಗಿದೆ. ಹೀಗಾಗಿ ಕೆ.ಪಿ ಅಗ್ರಹಾರ ಪೊಲೀಸರು ಕೋರ್ಟ್ಗೆ ವರದಿ ಕೊಡಲು ತಯಾರಿ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ