/newsfirstlive-kannada/media/post_attachments/wp-content/uploads/2025/04/Tejasvi-Surya3.jpg)
ಪಹಲ್ಗಾಮ್.. ಈ ಹೆಸರು ಕೇಳಿದ್ರೆ ಜನ ಬೆಚ್ಚಿಬಿಳುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಜೀವ ಕಳೆದುಕೊಂಡಿರುವ ಕರ್ನಾಟಕದ ಮಂಜುನಾಥ್ ಹಾಗೂ ಭರತ್ ಭೂಷಣ್ ಕುಟುಂಬಸ್ಥರ ನೋವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ಇದನ್ನೂ ಓದಿ:‘ನಾನು ಅಮ್ಮ ಆ ಸೀನ್ ನೋಡಿ ಅಳ್ತಾನೇ ಇದ್ವಿ’.. ಶ್ರಾವಣಿ ತಾಯಿ ಕಣ್ಣಲ್ಲಿ ನೀರು ತರಿಸಿದ್ದೇನು?
ಪೈಶಾಚಿಕ ಕೃತ್ಯ ನಡೆಸಿರುವ ಭಯೋತ್ಪಾದಕರ ವಿರುದ್ಧ ಪ್ರತೀಕಾರ ಆಗಲೇಬೇಕು ಎಂಬ ಕೂಗು ಜೋರಾಗಿದೆ. ಮತ್ತೊಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರಿಂದ ನರಮೇಧ ಹತ್ಯೆಯ ವಿಚಾರದ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತಾಡಿದ್ದಾರೆ.
ಸರ್ಕಾರದ ಈ ನಡೆ ಸರಿಯಿಲ್ಲ. ಕೇರಳದ ವ್ಯಕ್ತಿಯೊಬ್ಬ ಕಳೆದ ವರ್ಷ ರಾಜ್ಯದ ಗಡಿಭಾಗದಲ್ಲಿ ಆನೆ ತುಳಿತಕ್ಕೆ ಒಳಗಾಗಿದ್ದ. ಅವನ ಕುಟುಂಬಕ್ಕೆ 15 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಆದ್ರೆ, ಕಾಶ್ಮೀರದಲ್ಲಿ ಇಂತಹ ಒಂದು ನರಮೇಧ ಹತ್ಯೆ ನಡೆದಿದೆ. ರಾಜ್ಯದ ಇಬ್ಬರು ಈ ಹತ್ಯಾಕಾಂಡದಲ್ಲಿ ಬಲಿಯಾಗಿದ್ದಾರೆ. ಇದನ್ನು ಸರ್ಕಾರ ಖಂಡಿಸಿದೆ ಸರಿ. ಅವರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಹೇಳಿದೆ.
ಎರಡು ಕುಟುಂಬದಲ್ಲಿಯೂ ಓದುತ್ತಿರುವ ಮಕ್ಕಳಿದ್ದಾರೆ. ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಮಗ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಕನಿಷ್ಠ 50 ಲಕ್ಷ ರೂಪಾಯಿ ನೀಡಬೇಕು. ಇನ್ನು ಭರತ್ ಭೂಷಣ್ ಬಹಳ ಚಿಕ್ಕವನು. ಆತನು ಇಂದು ತಂದೆಯನ್ನು ಕಳೆದುಕೊಂಡಿದ್ದಾನೆ. ವಿಮಾನದಲ್ಲಿ ಕರೆದುಕೊಂಡು ಬರುವಾಗ ಆತನಿಗೆ ತನ್ನ ತಂದೆಯ ಮೃತದೇಹ ಅದೇ ವಿಮಾನದಲ್ಲಿದೆ ಎಂಬ ಮಾಹಿತಿ ಇರಲಿಲ್ಲ. ಅವನ ವಿದ್ಯಾಭ್ಯಾಸಕ್ಕೂ ಸರ್ಕಾರ ನಿಲ್ಲಬೇಕು. ಆತನ ಕುಟುಂಬಕ್ಕೂ 50 ಲಕ್ಷ ನೀಡಬೇಕು. ನಿಮಗೆ ಮಾನವೀಯತೆ ಇದೆ ಅಲ್ವಾ? ಇಂತಹ ಕುಟುಂಬದ ಜೊತೆಗೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ