Advertisment

ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಕಳ್ಳಾಟವಾಡಿದ್ದ ನಟಿ ಹೇಮಾಳ ಬ್ಲಡ್​ ಟೆಸ್ಟ್ ಪಾಸಿಟಿವ್..!

author-image
AS Harshith
Updated On
ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಕಳ್ಳಾಟವಾಡಿದ್ದ ನಟಿ ಹೇಮಾಳ ಬ್ಲಡ್​ ಟೆಸ್ಟ್ ಪಾಸಿಟಿವ್..!
Advertisment
  • ರೇವ್​ ಪಾರ್ಟಿ ತಂದ ಕುತ್ತು.. ಎಲ್ಲರಿಗೂ ಆಪತ್ತು
  • ಒಬ್ಬರು, ಇಬ್ಬರಲ್ಲ.. ಎಷ್ಟು ಜನ ಡ್ರಗ್ಸ್​ ಸೇವಿಸಿದ್ದಾರೆ ಗೊತ್ತಾ?
  • ನಟಿಯರೇನು ಕಮ್ಮಿಯಿಲ್ಲ.. ನಾಟಕ ಮಾಡಿದ್ದ ಹೇಮಾನಿಗೀಗ ಸಂಕಷ್ಟ

ಬೆಂಗಳೂರು: ಬರ್ತ್​​ಡೇ ಪಾರ್ಟಿ ಎಂದು ಜಿ. ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಮಾಡಿ ಸಿಕ್ಕಿಬಿದ್ದ ಪ್ರಕರಣವೀಗ ರೋಚಕ ತಿರುವು ಪಡೆದುಕೊಂಡಿದೆ. ನಟಿ ಹೇಮಾ ಸೇರಿದಂತೆ ಹಲವರ ಬ್ಲಡ್ ಟೆಸ್ಟ್ ಮಾಡಲಾಗಿದೆ. ಆದರೀಗ ರಕ್ತ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಎಂದು ಬಂದಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Advertisment

ರೇವ್​ ಪಾರ್ಟಿ ತಂದ ಕುತ್ತು

ಸಿಸಿಬಿ ಪೊಲೀಸರ ನೇತೃತ್ವದಲ್ಲಿ ಜಿ. ಆರ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿತ್ತು. ಎಲೆಕ್ಟ್ರಾನಿಕ್​ ಸಿಟಿ ಬಳಿ ವಾಸು ಎಂಬಾತ ಬರ್ತ್​ಡೇ ಹೆಸರಲ್ಲಿ ಪಾರ್ಟಿ ಆಯೋಜಸಿದ್ದರು. ಸನ್​ ಸೆಟ್​ ಟು ಸನ್​ ರೈಸ್​ ವಿಕ್ಟರಿ ಎಂಬ ಹೆಸರಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ತೆಲುಗು ಕಿರುತೆರೆ ಮತ್ತು ಸಿನಿಮಾ ನಟಿಯರು ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಸಂಜೆಯಿಂದ ಶುರುವಾದ ಪಾರ್ಟಿ ಬೆಳಗ್ಗಿನ ಜಾವದವರೆಗೆ ಆಯೋಜಿಸಲಾಗಿತ್ತು. ಆದರೆ ಈ ವಿಚಾರ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು ನಟಿ ಹೇಮಾ ಸೇರಿ ಅನೇಕರನ್ನು ಬಂಧಿಸಿದ್ದರು. ಬಂಧನದ ವೇಳೆ ಡ್ರಗ್ಸ್​ ಮತ್ತು ಕೊಕೇನ್​ ಕೂಡ ಪತ್ತೆಯಾಗಿತ್ತು.

[caption id="attachment_64978" align="alignnone" width="800"]publive-image ನಟಿ ಹೇಮಾ[/caption]

101 ಜನರ ಬ್ಲಡ್ ಸ್ಯಾಂಪಲ್ ಪಡೆದಿದ್ದ ಪೊಲೀಸರು

ಡ್ರಗ್ಸ್​ ಪತ್ತೆಯಾದ ಕಾರಣ ಸಿಸಿನಿ ಪೊಲೀಸರು ಒಟ್ಟು 101 ಜನರ ಬ್ಲಡ್ ಸ್ಯಾಂಪಲ್ ಪಡೆದಿದ್ದರು. ಇದರಲ್ಲಿ 86 ಜನರ ಬ್ಲಡ್ ಟೆಸ್ಟ್ ಪಾಸಿಟಿವ್ ಬಂದಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.

Advertisment

ಎಷ್ಟು ಜನರದ್ದು ಪಾಸಿಟಿವ್​?

73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಒಟ್ಟು 101 ಮಂದಿಯ ಪೈಕಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ.

[caption id="attachment_65108" align="alignnone" width="800"]publive-image ನಟಿ ಹೇಮಾ[/caption]

ನಟಿ ಹೇಮಾ ಕತೆಯೇನು?

ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವಿಸಿದ್ದಾರೆ. ತೆಲುಗು ಕಿರುತೆರೆ ನಟಿ ಹೇಮಾ(ಕೃಷ್ಣವೇಣಿ) ಬ್ಲಡ್ ರಿಪೋರ್ಟ್ ಸಹ ಪಾಸಿಟಿವ್ ಬಂದಿರೋದು ಅಭಿಮಾನಿಗಳಿಗೆ ಶಾಕ್​ ನೀಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment