/newsfirstlive-kannada/media/post_attachments/wp-content/uploads/2024/11/BANGLADESH.jpg)
ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಪಲಾಯನ ಮಾಡಿದ ನಂತರ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾಗಿದೆ. ಹಿಂದೂಗಳ ಮನೆ ಮೇಲೆ ದಾಳಿ ಮಾಡಿ ಧರ್ಮಾಂಧರು ಅಟ್ಟಹಾಸ ಮೆರೆಯುತ್ತಿದ್ದಾರೆ. ರಕ್ಷಿಸಬೇಕಾದವರೇ ರಾಕ್ಷಸರಾಗಿದ್ದಾರೆ. ಇಸ್ಕಾನ್ ಬಗ್ಗೆ ಮುಸ್ಲಿಂ ವ್ಯಾಪಾರಿ ಹಾಕಿದ ಒಂದು ಪೋಸ್ಟ್ಗೆ ಇಷ್ಟೆಲ್ಲ ಹಿಂಸಾಚಾರ ನಡೆದಿವೆ.
ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ ಜೋರಾಗಿದೆ. ಕಳೆದ ಹಲವು ದಿನಗಳಿಂದ ಧರ್ಮಾಂಧರು ನಡೆಸುತ್ತಿರುವ ಈ ಅಟ್ಯಾಕ್ ಮೇರೆ ಮೀರಿದೆ. ಹಿಂದೂಗಳ ಮನೆ ಮನೆಗೆ ನುಗ್ಗಿ ಧ್ವಂಸ ಮಾಡುತ್ತಿದ್ದು ಜನರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಇದು ಯಾವ ಮಟ್ಟಿಗೆ ಹೋಗಿದೆ ಅಂದ್ರೆ ಜನರನ್ನು ರಕ್ಷಿಸಬೇಕಿದ್ದ ಪೊಲೀಸರು ಹಾಗೂ ಸೈನಿಕರೇ ರಾಕ್ಷಸರಾಗಿದ್ದಾರೆ.
ಇದನ್ನೂ ಓದಿ: CM ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ.. ತೆರೆದ ಪುಸ್ತಕದಲ್ಲಿ ಬರೀ ಕಪ್ಪು ಚುಕ್ಕೆ ಎಂದ R ಅಶೋಕ್
ಚಿತ್ತಗಾಂಗ್‌ನಲ್ಲಿ ಹಿಂದೂಗಳ ಮೇಲೆ ದಾಳಿ
ಇಸ್ಕಾನ್ ನಿಷೇಧಿಸಬೇಕೆಂದು ಸ್ಥಳಿಯ ಮುಸ್ಲಿಂ ವ್ಯಾಪಾರಿ ಉಸ್ಮಾನ್ ಮೊಲ್ಲಾ ಎಂಬಾತ ಅವಹೇಳನಕಾರಿ ಪೋಸ್ಟ್ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣವಾಗಿದೆ. ಇಸ್ಕಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ವ್ಯಾಪಾರಿ ಉಸ್ಮಾನ್ ಮೊಲ್ಲಾ ಫೇಸ್‌ಬುಕ್ ಪೋಸ್ಟ್ ದೇಶದಾದ್ಯಂತ ಗದ್ದಲ ಎಬ್ಬಿಸಿದೆ. ಮಂಗಳವಾರ ರಾತ್ರಿ ಹಜಾರಿ ಗೋಲಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹಿಂದುಗಳು ಉಸ್ಮಾಲ್ ಅಂಗಡಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರ ಜೊತೆ ಕೂಡ ವಾಗ್ವಾದ, ಸಂಘರ್ಷ ನಡೆಸಲಾಗಿದೆ. ಮುಸ್ಲಿಂ ವ್ಯಾಪಾರಿ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದ ನಂತರ ಬಾಂಗ್ಲಾದೇಶದ ಭದ್ರತಾ ಪಡೆಗಳು ಚಿತ್ತಗಾಂಗ್‌ನಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಈ ಬೆನ್ನಲ್ಲೇ ಮೊಲ್ಲಾನನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಚಿತ್ತಗಾಂಗ್‌ನ ಹಜಾರಿ ಲೇನ್‌ನಲ್ಲಿ ಹಿಂದೂಗಳ ಮೇಲೆ ಖುದ್ದು ಸೇನಾ ಸಿಬ್ಬಂದಿ ಮತ್ತು ಪೊಲೀಸರೇ ದಾಳಿ ನಡೆಸುತ್ತಿದ್ದಾರೆ. ಹಿಂದೂಗಳ ಮೇಲೆ ಸೇನಾ ಸಿಬ್ಬಂದಿ ಮತ್ತು ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೇ ಇಸ್ಕಾನ್ ಸಂಸ್ಥೆಯ ಮೇಲೆ ಕಾರ್ಯಾಚರಣೆ ನಡೆಸಿರುವ ವೀಡಿಯೊಗಳು ಸಂಚಲನ ಮೂಡಿಸಿವೆ. ಖುದ್ದು ಲೇಖಕಿ ತಸ್ಲೀಮಾ ನಸ್ರೀನ್ ಈ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ, ಪಾಕ್ ಆಟಗಾರರು ಒಟ್ಟಿಗೆ ಕ್ರಿಕೆಟ್ ಆಡಲಿದ್ದಾರೆ -ಕೊಹ್ಲಿ, ಬಾಬರ್ ಸಂಚಲನ
ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಇಸ್ಕಾನ್
ಇನ್ನು ಇಸ್ಕಾನ್ ವಕ್ತಾರ ರಾಧಾರಾಮನ್ ದಾಸ್ ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ್ದಾರೆ. ಚಿತ್ತಗಾಂಗ್‌ನಲ್ಲಿ ಹಿಂದೂಗಳ ಮೇಲೆ ಸೇನೆ ದಾಳಿ ಮಾಡಿದ್ದು, ಇಸ್ಕಾನ್ ಬಾಂಗ್ಲಾದ ಹಿಂದೂಗಳನ್ನು ಒಗ್ಗೂಡಿಸಿದ್ದರಿಂದ ಹೀಗೆ ಇಸ್ಕಾನ್ ಮೇಲೆ ದಾಳಿ ಮಾಡಲಾಗಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮೋದಿಯನ್ನು ಕೋರಿದ್ದಾರೆ.
ಇನ್ನು ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಹಿಂದೂಗಳು ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ