/newsfirstlive-kannada/media/post_attachments/wp-content/uploads/2025/01/JEANS-PANT.jpg)
ಒಂದು ಯಾವುದೋ ಊರಲ್ಲಿ ಚಿಟ್ಟೆ ತನ್ನ ರೆಕ್ಕೆ ಬಡಿದರೆ ಇನ್ಯಾವುದೋ ದೇಶದಲ್ಲಿ ಸುನಾಮಿ ಆಗುತ್ತದಂತೆ ಇದನ್ನು ಬಟರ್ ಎಫೆಕ್ಟ್ ಥಿಯೇರಿ ಎನ್ನುತ್ತಾರೆ. ಇಂತಹ ಅನೇಕ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಈಗಲೂ ಆಗುತ್ತಿದೆ. ಅದಕ್ಕೆ ದೊಡ್ಡ ನಿದರ್ಶನ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಅಶಾಂತಿ ಹಾಗೂ ಅರಾಜಕತೆ ಬಳ್ಳಾರಿy ಜೀನ್ಸ್ ಪ್ಯಾಂಟ್ ಉದ್ಯಮದ ಅದೃಷ್ಟ ಖುಲಾಯಿಸಿದೆ.
ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಅನುಮಾನ ಮೂಡುವ ಸುದ್ದಿಯಿದು. ಆದ್ರೆ ಅಚ್ಚರಿ ಅನಿಸಿದರೂ ಕೂಡ ನಂಬಲೇಬೇಕು. ಬಾಂಗ್ಲಾದೇಶದ ಟೆಕ್ಸ್​ಟೈಲ್ ಇಂಡಸ್ಟ್ರಿ ಬಿಟ್ಟು ಈಗ ಬಳ್ಳಾರಿ ಜೀನ್ಸ್ ಇಂಡಸ್ಟ್ರಿಯತ್ತ ಜಾಗತಿಕ ಕಂಪನಿಗಳು ಕಣ್ಣು ಹಾಕಿವೆ. ಬಳ್ಳಾರಿ ಜೀನ್ಸ್ ಪ್ಯಾಂಟುಗಳಿಗೆ ಈಗ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಆಂತರಿಕ ಕಲಹ ಹಾಗೂ ಅರಾಜಕತೆಯಲ್ಲಿ ನಿತ್ಯ ಬೆಂದು ಹೋಗುತ್ತಿರುವ ಬಾಂಗ್ಲಾದೇಶದಲ್ಲಿ ಟೆಕ್ಸ್​ಟೈಲ್ಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ಜೀನ್ಸ್ ಪ್ಯಾಂಟ್​ ಪೂರೈಕೆಗಾಗಿ ಬಳ್ಳಾರಿ ಜೀನ್ಸ್ ಪ್ಯಾಂಟ್​ಗಳಿಗೆ ಈಗ ಭಾರೀ ಬೇಡಿಕೆ ಬಂದಿದೆ.
ಇದನ್ನೂ ಓದಿ:ಹೊಸ ವರ್ಷಕ್ಕೆ ಮೊದಲ ಶಾಕ್ ಕೊಟ್ಟ ಸಿದ್ದು ಸರ್ಕಾರ; ಬಸ್ ಪ್ರಯಾಣ ಆಗುತ್ತೆ ಇನ್ನೂ ದುಬಾರಿ!
ಬಾಂಗ್ಲಾದಲ್ಲಿ ಹಸೀನಾ ಶೇಖ್ ಸರ್ಕಾರ ಉರುಳುವ ಮುನ್ನ ಭಾರತದ ಅನೇಕ ಕಂಪನಿಗಳೇ ಜೀನ್ಸ್​ಗಾಗಿ ಬಾಂಗ್ಲಾದೇಶವನ್ನು ಅವಲಂಬಿಸಿದ್ದವು. ಆದರೆ ಈಗ ಭಾರತ ಹಾಗೂ ಜಗತ್ತಿ ಖ್ಯಾತನಾಮ ಕಂಪನಿಗಳಿಂದ ಬಳ್ಳಾರಿ ಜೀನ್ಸ್​ ಪ್ಯಾಂಟ್ ಉದ್ಯಮಗಳಿಗೆ ಜೀನ್ಸ್ ಪ್ಯಾಂಟ್ ಪೂರೈಕೆಗೆ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಸಹಜವಾಗಿ ಬಳ್ಳಾರಿಯ ಜೀನ್ಸ್ ಪ್ಯಾಂಟ್ ಫ್ಯಾಕ್ಟರಿಗಳು ಹೆಚ್ಚು ಹೆಚ್ಚು ಜೀನ್ಸ್​ ಪ್ಯಾಂಟ್​ಗಳ ಉತ್ಪಾದನೆಯಲ್ಲಿ ತೊಡಗಿವೆ.
ಇದನ್ನೂ ಓದಿ:ಸೌತೆಕಾಯಿ ವಿಚಾರಕ್ಕೆ ಶುರುವಾದ ಅಣ್ಣ-ತಂಗಿ ಜಗಳ ದುರಂತದಲ್ಲಿ ಅಂತ್ಯ; ಆಗಿದ್ದೇನು?
ಸದ್ಯ ಸೃಷ್ಟಿಯಾಗಿರುವ ಬೇಡಿಕೆ ಯಾವ ಮಟ್ಟದಲ್ಲಿದೆ ಎಂದರೆ ಬಳ್ಳಾರಿ ಈಗ ಭಾರತದ ಜೀನ್ಸ್​ ಪ್ಯಾಂಟ್ ಕ್ಯಾಪಿಟಲ್ ಎಂಬ ಗರಿಮೆಯನ್ನು ಪಡೆಯುವ ಮಟ್ಟಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬಳ್ಳಾರಿಯ ಸುತ್ತಮಮುತ್ತ ಇರುವ ಜೀನ್ಸ್ ಪ್ಯಾಂಟ್ ಫ್ಯಾಕ್ಟರಿಗಳು ತಿಂಗಳಿಗೆ 5 ರಿಂದ 10 ಲಕ್ಷ ರೂಪಾಯಿವರೆಗೂ ಆದಾಯ ತೆಗೆಯುತ್ತಿವೆ. ಹೆಚ್ಚು ಹೆಚ್ಚು ಕಾರ್ಮಿಕರನ್ನು ಇತ್ತೀಚಿನ ದಿನಗಳಲ್ಲಿ ನೇಮಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳಿಂದ ಜೀನ್ಸ್​ ಪ್ಯಾಂಟ್​ಗಳನ್ನು ಪೂರೈಸುವಂತೆ ಬೇಡಿಕೆ ಬರುತ್ತಿದ್ದು. ಒಂದೇ ಫ್ಯಾಕ್ಟರಿಗೆ ಸುಮಾರು 35 ಲಕ್ಷ ಜೀನ್ಸ್ ಪ್ಯಾಂಟ್ ಪೂರೈಸುವಂತೆ ಬೇಡಿಕೆ ಬಂದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us